Site icon Vistara News

Mudigere Election Results: ನಯನ ಮೋಟಮ್ಮ ಈಗ ಮಿಸ್‌ ಮೂಡಿಗೆರೆ; ದೀಪಕ್‌ಗೆ ಸ್ವಲ್ಪದರಲ್ಲೇ ಮಿಸ್‌

Mudigere Election results Nayana Motamma

ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿರುವ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ (Mudigere Election Results) ಹೊರಬಿದ್ದಿದ್ದು, ಕಾಂಗ್ರೆಸ್‌ ಪಕ್ಷದ ನಯನ ಮೋಟಮ್ಮ ಅವರು ಆಯ್ಕೆಯಾಗಿದ್ದಾರೆ. ಪಕ್ಷದೊಳಗಿನ ಆಂತರಿಕ ಆಕ್ರೋಶದ ಹೊರತಾಗಿಯೂ ಅವರು ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ತಮ್ಮ ಪ್ರಥಮ ಸ್ಪರ್ಧೆಯಲ್ಲಿಯೇ ಮೊದಲ ರ‍್ಯಾಂಕ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಆಂತರಿಕ ಜಗಳವನ್ನು ಹಿಮ್ಮೆಟ್ಟಿ ಗೆದ್ದ ನಯನ

ಮಾಜಿ ಸಚಿವೆ ಮೊಟ್ಟಮ್ಮ ಅವರ ಪುತ್ರಿ ನಯನ ಮೊಟ್ಟಮ್ಮಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಸ್ಥಳೀಯವಾಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಕಳೆದ ಬಾರಿ ಬಿಜೆಪಿಯಿಂದ ಶಾಸಕರಾಗಿದ್ದ ಎಂ.ಪಿ. ಕುಮಾರಸ್ವಾಮಿ ಬಿಜೆಪಿ ಟಿಕೆಟ್‌ಗಾಗಿ ಕೊನೆಗಳಿಗೆ ವರೆಗೂ ಕಾದು ಟಿಕೆಟ್ ಸಿಗದಿದ್ದಕ್ಕೆ ಜೆಡಿಎಸ್ ಸೇರಿದ್ದರು. ಅದು ಆ ಪಕ್ಷದಲ್ಲಿ ಮತ್ತೊಂದು ಬಂಡಾಯಕ್ಕೆ ಕಾರಣವಾಗಿತ್ತು. ಮೊದಲೇ ಜೆಡಿಎಸ್‌ ಮಾಜಿ ಶಾಸಕ ಬಿ.ಬಿ. ನಿಂಗಯ್ಯ ಅವರಿಗೆ ಟಿಕೆಟ್‌ ಘೋಷಿಸಲಾಗಿತ್ತು. ಕೊನೇ ಗಳಿಗೆಯಲ್ಲಿ ಬದಲಾವಣೆ ಮಾಡಿದ್ದರಿಂದ ರೊಚ್ಚಿಗೆದ್ದ ಅವರು ಕಾಂಗ್ರೆಸ್ ಸೇರಿ ನಯನ ಮೋಟಮ್ಮ ಗೆಲುವಿಗೆ ಓಡಾಡಿದ್ದರು. ಇದು ನಯನ ಅವರ ಗೆಲುವಿಗೆ ಪ್ಲಸ್‌ ಆಗಿದೆ. ಇನ್ನು ಎಂ.ಪಿ. ಕುಮಾರಸ್ವಾಮಿ ಸಹ ಭಾರಿ ಮತಗಳನ್ನು ಪಡೆದಿರುವುದು ಬಿಜೆಪಿಗೆ ಹೊಡೆತ ಕೊಟ್ಟಿದ್ದು, ನಯನ ಮೋಟಮ್ಮ ಅವರ ವಿಜಯದ ಹಾದಿಯನ್ನು ಸುಗಮಗೊಳಿಸಿದೆ.

ದೀಪಕ್‌ ದೊಡ್ಡಯ್ಯಗೆ ಸ್ವಲ್ಪದರಲ್ಲೇ ಮಿಸ್‌

ಕಳೆದ ಬಾರಿ ಎಂ.ಪಿ. ಕುಮಾರಸ್ವಾಮಿ ಬಿಜೆಪಿಯಿಂದ ಗೆದ್ದು ಬಂದಿದ್ದರೂ ಅನೇಕ ಕಾರಣಗಳಿಂದ ಅವರಿಗೆ ಟಿಕೆಟ್‌ ತಪ್ಪಿಸಿ ದೀಪಕ್ ದೊಡ್ಡಯ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಅಲ್ಲದೆ, ಪಕ್ಷದ ಸಾಂಪ್ರದಾಯಿಕ ಮತಗಳ ಮೇಲೆ ನಂಬಿಕೆ ಇಟ್ಟು ತೆಗೆದುಕೊಂಡ ಈ ನಿರ್ಧಾರವು ಯಶ ಕಂಡಿದೆ. ಆ ಮೂಲಕ ಬಿಜೆಪಿ ಈ ಕ್ಷೇತ್ರವನ್ನು ತನ್ನ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿಕೊಂಡಂತೆ ಆಗಿದೆ.

ಮೂರನೇ ಸ್ಥಾನಕ್ಕೆ ಎಂ.ಪಿ. ಕುಮಾರಸ್ವಾಮಿ

ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಭರ್ಜರಿ ಗೆಲುವು ಸಾಧಿಸಿದ್ದ ಎಂ.ಪಿ. ಕುಮಾರಸ್ವಾಮಿ ಅವರು ಆ ಪಕ್ಷದಿಂದ ಟಿಕೆಟ್‌ ನಿರಾಕರಣೆ ಮಾಡಿದ್ದಕ್ಕೆ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ ಸಹ ಗೆಲ್ಲುವಲ್ಲಿ ಯಶ ಕಾಣಲಿಲ್ಲ. ಜೆಡಿಎಸ್‌ನ ಸಾಂಪ್ರದಾಯಿಕ ಮತ, ಒಕ್ಕಲಿಗ, ದಲಿತ ಬಲಗೈ ಮತಗಳು ಸೇರಿದಂತೆ ಬಿಜೆಪಿಯಲ್ಲಿದ್ದ ಬೆಂಬಲಿಗರ ಪಡೆಯ ಕಸರತ್ತು ಇವರನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾಗಿದ್ದಲ್ಲದೆ, ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಇದನ್ನೂ ಓದಿ: Karnataka Election Results 2023 : ಕಾಂಗ್ರೆಸ್‌ ಅಧಿಕಾರಕ್ಕೆ; ಐದು ಉಚಿತ ಯೋಜನೆಗಳ ಜಾರಿಗೆ ಕೌಂಟ್‌ಡೌನ್‌

ಕಳೆದ ಚುನಾವಣೆಯ ಫಲಿತಾಂಶ ಏನು?
ಎಂ.ಪಿ ಕುಮಾರಸ್ವಾಮಿ (ಬಿಜೆಪಿ) : 58,783- ಮೋಟಮ್ಮ (ಕಾಂಗ್ರೆಸ್) : 46,721- ಬಿ ಬಿ ನಿಂಗಯ್ಯ : 22,063 (ಜೆಡಿಎಸ್)- ಗೆಲುವಿನ ಅಂತರ: 12,062

ಈ ಚುನಾವಣೆಯ ಫಲಿತಾಂಶ ಇಂತಿದೆ
ನಯನ ಮೋಟಮ್ಮ (ಕಾಂಗ್ರೆಸ್): 50843 | ದೀಪಕ್ ದೊಡ್ಡಯ್ಯ (ಬಿಜೆಪಿ): 50121 | ಎಂ.ಪಿ. ಕುಮಾರಸ್ವಾಮಿ (ಜೆಡಿಎಸ್): 26038 | ಗೆಲುವಿನ ಅಂತರ: 722

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version