Site icon Vistara News

Zika Virus: ಮಹಾರಾಷ್ಟ್ರದಲ್ಲಿ ಝಿಕಾ ವೈರಸ್‌ ಹಾವಳಿ; ನಮಗೆಷ್ಟು ಅಪಾಯ? ಮುಂಜಾಗ್ರತಾ ಕ್ರಮಗಳು ಯಾವವು?

Zika Virus

Mumbai Sees Second Zika Virus Infection; How is it dangerous for us? What are the precautions?

ಮುಂಬೈ/ಬೆಂಗಳೂರು: ಮಹಾರಾಷ್ಟ್ರದ ಮುಂಬೈನಲ್ಲಿ ಕಳೆದ 15 ದಿನಗಳಲ್ಲಿ ಇಬ್ಬರಿಗೆ ಝಿಕಾ ವೈರಸ್‌ (Zika Virus) ತಗುಲಿದೆ. ಮುಂಬೈನ ಚೆಂಬುರ್‌ನಲ್ಲಿ 79 ವರ್ಷದ ವ್ಯಕ್ತಿ ಹಾಗೂ ಕುರ್ಲಾದಲ್ಲಿ 15 ವರ್ಷದ ಬಾಲಕಿಗೆ ಸೋಂಕು ತಗುಲಿದ್ದು, ನಗರದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. ಹಾಗೆಯೇ, ಜನರಿಗೆ ಝಿಕಾ ವೈರಸ್‌ ಭೀತಿ ಕಾಡುತ್ತಿದೆ. ಕೆಲವೇ ತಿಂಗಳ ಹಿಂದೆ ಕರ್ನಾಟಕದ ರಾಯಚೂರಿನಲ್ಲೂ ಝಿಕಾ ಸೋಂಕಿನ ಭೀತಿ ತಪ್ಪಿದ್ದಲ್ಲ. ಹಾಗಾಗಿ, ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳಿತು.

ಏನಿದು ಝಿಕಾ ವೈರಸ್?

ಪ್ರಧಾನವಾಗಿ, ಏಡಿಸ್‌ ಸೊಳ್ಳೆಯಿಂದ ಹರಡುವ ರೋಗವಿದು. ಥೇಟ್‌ ಡೆಂಗೆ, ಚಿಕೂನ್ ಗುನ್ಯಾ ಅಥವಾ ಹಳದಿ ಜ್ವರದ ಮಾದರಿಯಲ್ಲಿ ಇದು ಹರಡುತ್ತದೆ. ಈ ಸೊಳ್ಳೆಗಳು ಹೆಚ್ಚಾಗಿ ದಾಳಿ ಮಾಡುವುದು ಹಗಲು ಹೊತ್ತಿನಲ್ಲಿ. ಹಾಗೆಂದು ಅವು ರಾತ್ರಿಯ ಹೊತ್ತು ಕಚ್ಚದೇ ಕರುಣೆ ತೋರುತ್ತವೆ ಎಂದಲ್ಲ! ಇವು ಮನೆಯ ಒಳಗೆ-ಹೊರಗೆ ಎಂಬ ಭೇದವಿಲ್ಲದೆ, ಎಲ್ಲೆಂದರಲ್ಲಿ ಇರುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೆ ಸೊಳ್ಳೆಯ ಕಡಿತಕ್ಕೆ ಒಳಗಾಗುವಂತಿಲ್ಲ. ‌

ಹಾಗೆಂದು ಸೋಂಕು ಹರಡುವುದಕ್ಕೆ ಇದೊಂದೇ ಮಾರ್ಗವೂ ಅಲ್ಲ. ತಾಯಿಯಿಂದ ಹೊಟ್ಟೆಯಲ್ಲಿರುವ ಮಗುವಿಗೆ, ಎದೆಹಾಲಿನಿಂದ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಈ ರೋಗ ಹರಡುತ್ತದೆ. ರಕ್ತಪೂರಣದಿಂದ ಹರಡುವ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ ಖಂಡಿತವಾಗಿಯೂ ಕೋವಿಡ್‌ನಂತೆ ಕೆಮ್ಮು, ಸೀನಿನಿಂದೆಲ್ಲ ಹರಡುವ ರೋಗವಲ್ಲ ಇದು.

ರಕ್ತಪರೀಕ್ಷೆಯಿಂದ ದೇಹದಲ್ಲಿ ವೈರಸ್‌ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದು. ಒಂದೊಮ್ಮೆ ಪರೀಕ್ಷೆಯಲ್ಲಿ ಝಿಕಾ ವೈರಸ್‌ ಸೋಂಕು ಖಾತ್ರಿಯಾದರೆ, ವೈದ್ಯರನ್ನು ಸಂಪರ್ಕಿಸಿ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಕೋವಿಡ್‌ ರೋಗಿಗಳಂತೆ ಅವರನ್ನು 14 ದಿನಗಳ ವ್ಯಷ್ಟಿಯಲ್ಲಿ ಇಡಬೇಕಾದ ಅಗತ್ಯವಿಲ್ಲ. ಸಾಕಷ್ಟು ದ್ರವಾಹಾರ, ವಿಶ್ರಾಂತಿ ಕಡ್ಡಾಯವಾಗಿ ರೋಗಿಗಳಿಗೆ ಬೇಕು. ಮನೆಯ ಎಲ್ಲರೂ ಸೊಳ್ಳೆಪರದೆಯನ್ನು ಬಳಸುವುದು ಅತ್ಯಗತ್ಯ.

ಇದನ್ನೂ ಓದಿ: Zika virus | ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ರಾಯಚೂರಿನಲ್ಲಿ ಪತ್ತೆ; 5 ವರ್ಷದ ಬಾಲಕಿಗೆ ಪಾಸಿಟಿವ್‌

ಇಷ್ಟು ಮುಂಜಾಗ್ರತಾ ಕ್ರಮ ಅತ್ಯಗತ್ಯ

Exit mobile version