Site icon Vistara News

Murder Case | ಐ ಲವ್‌ ಯೂ ಎಂದವನ ಪರಲೋಕಕ್ಕೆ ಕಳಿಸಿದ ಭಿಕ್ಷುಕ ದಂಪತಿ; ಸಿಕ್ಕಿ ಬಿದ್ದಿದ್ದು ಹೇಗೆ?

murder case

ಮಂಡ್ಯ: ಪರಸ್ತ್ರೀ ವ್ಯಾಮೋಹಕ್ಕೆ ಸಿಲುಕಿ ಐ ಲವ್‌ ಯೂ ಎನ್ನುತ್ತಾ ಬೆನ್ನ ಬಿದ್ದಿದ್ದ ಕೂಲಿಕಾರ್ಮಿಕನನ್ನು ಭಿಕ್ಷುಕ ದಂಪತಿ ಪರಲೋಕಕ್ಕೆ ಕಳಿಸಿದ್ದಾರೆ. ಕೊಲೆ ಮಾಡಿ (Murder Case) ಪರಾರಿಯಾಗಿದ್ದ ಭಿಕ್ಷುಕ ದಂಪತಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಪ್ರಕರಣದ ಬೆನ್ನುಬಿದ್ದ ಪೊಲೀಸರು ಹಂತಕರನ್ನು ಪೊಲೀಸರು ಬಂಧಿಸಿದ್ದೂ ರೋಚಕ ಎನ್ನುವಂತಿದೆ.

ರಮೇಶ್ ಹಾಗೂ ರೂಪಾ ಎಂಬ ದಂಪತಿ ಹೊಟ್ಟೆಪಾಡಿಗಾಗಿ ಮಂಡ್ಯದಲ್ಲಿ ಭಿಕ್ಷಾಟನೆ ಮಾಡುತ್ತಾ ಸಂಸಾರ ನಡೆಸುತ್ತಿದ್ದರು. ಇವರಿಬ್ಬರ ಮಧ್ಯೆ ಬಂದ ದುರುಳನೊಬ್ಬ ರೂಪಾಳ ಹಿಂದೆ ಬಿದ್ದಿದ್ದು, ಪ್ರೀತ್ಸೆ ಎಂದು ಪಿಡುಸುತ್ತಿದ್ದ. ರೂಪಾ ನಿರಾಕರಿಸಿದರೂ ಆತ ಬೆನ್ನು ಬಿಡದೆ ಕಾಡುತ್ತಿದ್ದ. ಈತನ ಕಾಟಕ್ಕೆ ಬೇಸತ್ತ ಆ ದಂಪತಿ ಕಡೆಗೆ ಆತನನ್ನು ಪರಲೋಕಕ್ಕೆ ಕಳಿಸುವ ಯೋಚನೆಗೆ ಬಂದಿದ್ದಾರೆ. ಹೀಗಾಗಿ ಸೂಕ್ತ ಪ್ಲ್ಯಾಣ್‌ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದರು.

ಅಕ್ಟೋಬರ್‌ 30ರಂದು ಮಂಡ್ಯ ನಗರದ ಗಾಂಧಿ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿತ್ತು. ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದರು. ಇದಕ್ಕಾಗಿ ಸಿಪಿಐ ಸಂತೋಷ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆಯಲ್ಲಿ ಮಂಡ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ರವಿ (40) ಎಂಬುದು ತಿಳಿದು ಬಂದಿತ್ತು. ಆರೋಪಿಗಳು ಹಾಗೂ ರವಿ ನಡುವೆ ಆಗಾಗ ವೈಯಕ್ತಿಕ ಜಗಳವಾಗಿತ್ತು ಎಂದು ತಿಳಿದ ಪೊಲೀಸರು ಭಿಕ್ಷುಕ ದಂಪತಿಗಾಗಿ ಹುಡುಕಾಟ ನಡೆಸಿದ್ದರು.

ಮಂಡ್ಯ ಪಶ್ಚಿಮ ಠಾಣೆ

ಭಿಕ್ಷಾಟನೆ ಮಾಡುವಾಗಲೇ ಪೊಲೀಸರಿಗೆ ದಂಪತಿ ಲಾಕ್‌
ಮಂಡ್ಯದಲ್ಲಿ ರವಿಯ ತಲೆ ಮೇಲೆ ಕಲ್ಲು ಎತ್ತು ಹಾಕಿ ರಮೇಶ್‌, ರೂಪ ಕೊಲೆ ಮಾಡಿದರು. ಬಳಿಕ ಕೊಲೆ ಮಾಡಿ ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೆ ಮುಡಿಕೊಟ್ಟು ಮಂಡ್ಯಗೆ ವಾಪಸ್‌ ಆಗಿದ್ದರು. ಎಂದಿನಂತೆ ಮಂಡ್ಯದಲ್ಲಿ ಭಿಕ್ಷಾಟನೆಗೆ ಇಳಿದಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮದುವೆ ಆಗುವಂತೆ ಪೀಡಿಸುತ್ತಿದ್ದ
ಕೂಲಿ ಕೆಲಸ ಮಾಡುತ್ತಿದ್ದ ರವಿ ತನ್ನನ್ನು ಮದುವೆಯಾಗು ಎಂದು ರಮೇಶ್ ಹೆಂಡತಿ ರೂಪಾಳನ್ನು ಪಿಡಿಸುತ್ತಿದ್ದನಂತೆ. ಈ ಸಂಬಂಧ ಹಲವು ಬಾರಿ ಗಲಾಟೆಯು ನಡೆದಿತ್ತು. ಆದರೆ ರವಿಯ ಕಾಟ ತಾಳಲಾರದೆ, ತಲೆಯ ಮೇಲೆ ಕಲ್ಲು ಎತ್ತು ಹಾಕಿ ದಂಪತಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಮೈಸೂರಿನಲ್ಲಿ ಹೊಸ ಬಾಡಿಗೆ ನೀತಿ, ಪೊಲೀಸ್‌ ಠಾಣೆಯಿಂದ ಕ್ಲಿಯರೆನ್ಸ್‌ ಸರ್ಟಿಫಿಕೆಟ್‌ ಕಡ್ಡಾಯ!

Exit mobile version