Murder Case | ಐ ಲವ್‌ ಯೂ ಎಂದವನ ಪರಲೋಕಕ್ಕೆ ಕಳಿಸಿದ ಭಿಕ್ಷುಕ ದಂಪತಿ; ಸಿಕ್ಕಿ ಬಿದ್ದಿದ್ದು ಹೇಗೆ? - Vistara News

ಕರ್ನಾಟಕ

Murder Case | ಐ ಲವ್‌ ಯೂ ಎಂದವನ ಪರಲೋಕಕ್ಕೆ ಕಳಿಸಿದ ಭಿಕ್ಷುಕ ದಂಪತಿ; ಸಿಕ್ಕಿ ಬಿದ್ದಿದ್ದು ಹೇಗೆ?

ತಾನಾಯಿತು ತನ್ನ ಕೆಲಸ ಆಯಿತು ಎಂದು ಕೂಲಿ ಕೆಲಸ ಮಾಡಿಕೊಂಡು ಇದ್ದಿದ್ದರೆ ಜೀವಂತವಾಗಿ ಇರುತ್ತಿದ್ದ. ಆದರೆ, ಆತ ಇನ್ನೊಬ್ಬನ ಪತ್ನಿ ಮೇಲೆ ಕಣ್ಣು ಹಾಕಿ ಆಂಟಿ ಪ್ರೀತ್ಸೆ ಎಂದ. ಕೊನೆಗೆ ಅದೇ ಹೆಣ್ಣಿನಿಂದಲೇ ಕೊಲೆಯಾಗಿ (Murder Case) ಹೋಗಿದ್ದಾನೆ.

VISTARANEWS.COM


on

murder case
ಬಂಧಿತ ಭಿಕ್ಷುಕ ದಂಪತಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಂಡ್ಯ: ಪರಸ್ತ್ರೀ ವ್ಯಾಮೋಹಕ್ಕೆ ಸಿಲುಕಿ ಐ ಲವ್‌ ಯೂ ಎನ್ನುತ್ತಾ ಬೆನ್ನ ಬಿದ್ದಿದ್ದ ಕೂಲಿಕಾರ್ಮಿಕನನ್ನು ಭಿಕ್ಷುಕ ದಂಪತಿ ಪರಲೋಕಕ್ಕೆ ಕಳಿಸಿದ್ದಾರೆ. ಕೊಲೆ ಮಾಡಿ (Murder Case) ಪರಾರಿಯಾಗಿದ್ದ ಭಿಕ್ಷುಕ ದಂಪತಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಪ್ರಕರಣದ ಬೆನ್ನುಬಿದ್ದ ಪೊಲೀಸರು ಹಂತಕರನ್ನು ಪೊಲೀಸರು ಬಂಧಿಸಿದ್ದೂ ರೋಚಕ ಎನ್ನುವಂತಿದೆ.

ರಮೇಶ್ ಹಾಗೂ ರೂಪಾ ಎಂಬ ದಂಪತಿ ಹೊಟ್ಟೆಪಾಡಿಗಾಗಿ ಮಂಡ್ಯದಲ್ಲಿ ಭಿಕ್ಷಾಟನೆ ಮಾಡುತ್ತಾ ಸಂಸಾರ ನಡೆಸುತ್ತಿದ್ದರು. ಇವರಿಬ್ಬರ ಮಧ್ಯೆ ಬಂದ ದುರುಳನೊಬ್ಬ ರೂಪಾಳ ಹಿಂದೆ ಬಿದ್ದಿದ್ದು, ಪ್ರೀತ್ಸೆ ಎಂದು ಪಿಡುಸುತ್ತಿದ್ದ. ರೂಪಾ ನಿರಾಕರಿಸಿದರೂ ಆತ ಬೆನ್ನು ಬಿಡದೆ ಕಾಡುತ್ತಿದ್ದ. ಈತನ ಕಾಟಕ್ಕೆ ಬೇಸತ್ತ ಆ ದಂಪತಿ ಕಡೆಗೆ ಆತನನ್ನು ಪರಲೋಕಕ್ಕೆ ಕಳಿಸುವ ಯೋಚನೆಗೆ ಬಂದಿದ್ದಾರೆ. ಹೀಗಾಗಿ ಸೂಕ್ತ ಪ್ಲ್ಯಾಣ್‌ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದರು.

ಅಕ್ಟೋಬರ್‌ 30ರಂದು ಮಂಡ್ಯ ನಗರದ ಗಾಂಧಿ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿತ್ತು. ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದರು. ಇದಕ್ಕಾಗಿ ಸಿಪಿಐ ಸಂತೋಷ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತನಿಖೆಯಲ್ಲಿ ಮಂಡ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ರವಿ (40) ಎಂಬುದು ತಿಳಿದು ಬಂದಿತ್ತು. ಆರೋಪಿಗಳು ಹಾಗೂ ರವಿ ನಡುವೆ ಆಗಾಗ ವೈಯಕ್ತಿಕ ಜಗಳವಾಗಿತ್ತು ಎಂದು ತಿಳಿದ ಪೊಲೀಸರು ಭಿಕ್ಷುಕ ದಂಪತಿಗಾಗಿ ಹುಡುಕಾಟ ನಡೆಸಿದ್ದರು.

murder Case ಮಂಡ್ಯ ಪಶ್ಚಿಮ ಠಾಣೆ
ಮಂಡ್ಯ ಪಶ್ಚಿಮ ಠಾಣೆ

ಭಿಕ್ಷಾಟನೆ ಮಾಡುವಾಗಲೇ ಪೊಲೀಸರಿಗೆ ದಂಪತಿ ಲಾಕ್‌
ಮಂಡ್ಯದಲ್ಲಿ ರವಿಯ ತಲೆ ಮೇಲೆ ಕಲ್ಲು ಎತ್ತು ಹಾಕಿ ರಮೇಶ್‌, ರೂಪ ಕೊಲೆ ಮಾಡಿದರು. ಬಳಿಕ ಕೊಲೆ ಮಾಡಿ ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೆ ಮುಡಿಕೊಟ್ಟು ಮಂಡ್ಯಗೆ ವಾಪಸ್‌ ಆಗಿದ್ದರು. ಎಂದಿನಂತೆ ಮಂಡ್ಯದಲ್ಲಿ ಭಿಕ್ಷಾಟನೆಗೆ ಇಳಿದಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮದುವೆ ಆಗುವಂತೆ ಪೀಡಿಸುತ್ತಿದ್ದ
ಕೂಲಿ ಕೆಲಸ ಮಾಡುತ್ತಿದ್ದ ರವಿ ತನ್ನನ್ನು ಮದುವೆಯಾಗು ಎಂದು ರಮೇಶ್ ಹೆಂಡತಿ ರೂಪಾಳನ್ನು ಪಿಡಿಸುತ್ತಿದ್ದನಂತೆ. ಈ ಸಂಬಂಧ ಹಲವು ಬಾರಿ ಗಲಾಟೆಯು ನಡೆದಿತ್ತು. ಆದರೆ ರವಿಯ ಕಾಟ ತಾಳಲಾರದೆ, ತಲೆಯ ಮೇಲೆ ಕಲ್ಲು ಎತ್ತು ಹಾಕಿ ದಂಪತಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಮೈಸೂರಿನಲ್ಲಿ ಹೊಸ ಬಾಡಿಗೆ ನೀತಿ, ಪೊಲೀಸ್‌ ಠಾಣೆಯಿಂದ ಕ್ಲಿಯರೆನ್ಸ್‌ ಸರ್ಟಿಫಿಕೆಟ್‌ ಕಡ್ಡಾಯ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Lok Sabha Election 2024: ಜಿ.ಎಂ.ಸಿದ್ದೇಶ್ವರ್‌ ಮಹಾ ಎಡವಟ್ಟು, ಪತ್ನಿ ಮತವನ್ನೂ ತಾವೇ ಹಾಕಿದ ಸಂಸದ

Lok Sabha Election 2024: ದಾವಣಗೆರೆಯ ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಗೊಂದಲಕ್ಕೀಡಾಗಿದ್ದಾರೆ. ಈ ವೇಳೆ ಪತ್ನಿಗೆ ಸಹಾಯ ಮಾಡಲು ಹೋದ ಸಂಸದ ಸಿದ್ದೇಶ್ವರ್‌ ಅವರು ತಾವೇ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ.

VISTARANEWS.COM


on

Lok Sabha Election 2024
Koo

ದಾವಣಗೆರೆ: ಮತದಾನದ ವೇಳೆ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ (G M Siddeshwar) ಅವರು ಎಡವಟ್ಟು ಮಾಡಿದ್ದಾರೆ. ಮತದಾನದ ಮಾರ್ಗಸೂಚಿ ಉಲ್ಲಂಘಿಸಿ ಪತ್ನಿಯ ಮತವನ್ನೂ (Lok Sabha Election 2024) ತಾವೇ ಹಾಕುವ ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರ ಬದಲಿಗೆ ಸಿದ್ದೇಶ್ವರ್‌ ಅವರೇ ಮತ ಹಾಕುವ ಮೂಲಕ ಚುನಾವಣೆ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ತಮ್ಮ ಮತವನ್ನು ಹಾಕಲೂ ಆಗದವರು ಕ್ಷೇತ್ರದಲ್ಲಿ ಆಡಳಿತ ಹೇಗೆ ನಡೆಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಅವರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ದಾವಣಗೆರೆಯ ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಗಾಯತ್ರಿ ಸಿದ್ದೇಶ್ವರ್ ಗೊಂದಲಕ್ಕೀಡಾಗಿದ್ದಾರೆ. ಈ ವೇಳೆ ಪತ್ನಿಗೆ ಸಹಾಯ ಮಾಡಲು ಹೋದ ಸಿದ್ದೇಶ್ವರ್‌ ಅವರು ತಾವೇ ಬಟನ್‌ ಒತ್ತಿ ಬಂದಿದ್ದಾರೆ.

ಇದನ್ನೂ ಓದಿ | Lok Sabha Election 2024: ಅಭಿವೃದ್ಧಿ ಕಾರ್ಯಕ್ಕಾಗಿ ನೀತಿ ಸಂಹಿತೆ ಸಡಿಲಿಸಲು ಶಿವರಾಮ ಹೆಬ್ಬಾರ್ ಮನವಿ

ಔರಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಮತದಾನ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಅವರು ಮಂಗಳವಾರ ಔರಾದ್‌ನಲ್ಲಿ ಮತದಾನ (Lok Sabha Election 2024) ಮಾಡಿದರು.

ಬೀದರ್ ಜಿಲ್ಲೆಯ ಔರಾದ್‌ನ ನಾಲಂದ ಹೈಸ್ಕೂಲ್ ಬೂತ್ ನಂ.84ರ ಮತಗಟ್ಟೆಯಲ್ಲಿ ಕುಟುಂಬ ಸದಸ್ಯರ ಜತೆ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದರು.

ಇದನ್ನೂ ಓದಿ | Lok Sabha Election 2024: ಕೈಗಳಿಲ್ಲದಿದ್ದರೂ ಮತದಾನ ಮಾಡಿ ಮಾದರಿಯಾದ ಅಂಕಿತ್ ಸೋನಿ

ಮತದಾನದ ಬಳಿಕ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ, ಕ್ಷೇತ್ರದಾದ್ಯಂತ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು, ಯೋಜನೆಗಳನ್ನು ಜನರಿಗೆ ತಲುಪಿಸಿ ಯಶಸ್ವಿಯಾಗಿ ನನ್ನ ಕಾರ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.

Continue Reading

ರಾಜಕೀಯ

Lok Sabha Election 2024: ಅಭಿವೃದ್ಧಿ ಕಾರ್ಯಕ್ಕಾಗಿ ನೀತಿ ಸಂಹಿತೆ ಸಡಿಲಿಸಲು ಶಿವರಾಮ ಹೆಬ್ಬಾರ್ ಮನವಿ

Lok Sabha Election 2024: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ್, ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಬೈಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

VISTARANEWS.COM


on

Yallapura MLA Shivaram Hebbar voting in Arabail village
Koo

ಯಲ್ಲಾಪುರ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ್ ತಾಲೂಕಿನ ಇಡಗುಂದಿ ಗ್ರಾ.ಪಂ ವ್ಯಾಪ್ತಿಯ ಅರಬೈಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಇದನ್ನೂ ಓದಿ: Guava Leaves Benefits: ಕೇವಲ ಸೀಬೆ ಹಣ್ಣಲ್ಲ, ಎಲೆಯಿಂದಲೂ ಎಷ್ಟೊಂದು ಪ್ರಯೋಜನಗಳು!

ಬಳಿಕ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿರುವುದು ಸಂತಸದ ಸಂಗತಿಯಾಗಿದೆ. ಜಾತಿ, ಧರ್ಮ, ಭಿನ್ನಾಭಿಪ್ರಾಯಗಳ ಹೊರತಾಗಿ ರಾಜ್ಯದ ಜನತೆ ಸಾಂಘಿಕವಾದ ಚುನಾವಣೆ ನಡೆಯಲು ನಿರ್ಣಯಿಸಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಮನವಿ ಮಾಡಬಯಸುವುದೇನೆಂದರೆ, 3 ತಿಂಗಳುಗಳ ಸುದೀರ್ಘ ನೀತಿ ಸಂಹಿತೆ ಜಾರಿಯು ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ. ಕರಾವಳಿ ಮಲೆನಾಡು ಪ್ರದೇಶದಲ್ಲಿ 5 ತಿಂಗಳುಗಳ ಕಾಲ ವ್ಯಾಪಕ ಮಳೆಯಾಗುವುದರಿಂದ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಇಂದಿಗೆ ಚುನಾವಣೆ ಪೂರ್ಣಗೊಳ್ಳುವುದರಿಂದ, ಈ ಸಂದರ್ಭವನ್ನು ಪರಿಗಣಿಸಿ ನೀತಿ ಸಂಹಿತೆಯನ್ನು ಸಡಿಲಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡಬೇಕಿದೆ ಎಂದರು.

ಇದನ್ನೂ ಓದಿ: Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

ಈ ಸಂದರ್ಭದಲ್ಲಿ ಶಾಸಕರ ಪತ್ನಿ ವನಜಾಕ್ಷಿ ಹೆಬ್ಬಾರ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Continue Reading

ಕ್ರೈಂ

Prajwal Revanna Case: ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ ಜತೆ ಮುಖಾಮುಖಿ ವಿಚಾರಣೆಗೆ ಒಪ್ಪದ ರೇವಣ್ಣ!

Prajwal Revanna Case: ಕಿಡ್ನ್ಯಾಪ್ ಕೇಸಲ್ಲಿ ಬಂಧಿತರಾಗಿ ಎಸ್ಐಟಿ‌ ಕಸ್ಟಡಿಯಲ್ಲಿರುವ ಮಾಜಿ‌ ಸಚಿವ ಎಚ್.ಡಿ. ರೇವಣ್ಣ ಮೂರನೇ ದಿನವೂ ಎಸ್ಐಟಿ‌ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದಾರೆ. ಎರಡು‌ ದಿನಗಳಿಂದ ಸಹ ರೇವಣ್ಣ ಒಂದೇ ಮಾತನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಅಪಹರಣ ಬಗ್ಗೆ ನನಗೇನೂ ಗೊತ್ತಿಲ್ಲ, ನಾನು ಕಿಡ್ನ್ಯಾಪ್ ಮಾಡಿಸಿಲ್ಲ ಎಂಬ ಹೇಳಿಕೆಯನ್ನಷ್ಟೇ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮಂಗಳವಾರ ಎರಡನೇ ಆರೋಪಿ‌ಯಾದ ಸತೀಶ್ ಬಾಬುವನ್ನು ರೇವಣ್ಣ ಎದುರು ಹಾಜರುಪಡಿಸಿ ಮುಖಾಮುಖಿ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ತೀರ್ಮಾನ ಮಾಡಿದ್ದರು.

VISTARANEWS.COM


on

Prajwal Revanna Case HD Revanna refuses to face to face with 2nd accused in kidnapping case
Koo

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಿಸಿ ಸಂತ್ರಸ್ತೆಯನ್ನು ಕಿಡ್ನ್ಯಾಪ್‌ ಮಾಡಿರುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮೂರನೇ ದಿನವೂ ಎಸ್ಐಟಿ‌ ವಿಚಾರಣೆಯನ್ನು ಎದುರಿಸಿದ್ದಾರೆ. ಅಪಹರಣ ಪ್ರಕರಣದಲ್ಲಿ ಎರಡನೇ ಆರೋಪಿಯೊಂದಿಗೆ ಮುಖಾಮುಖಿಯಾಗಿ ವಿಚಾರಣೆ ಎದುರಿಸಲು ಇಂದು (ಮಂಗಳವಾರ – ಮೇ 7) ಎಸ್ಐಟಿ ಪ್ಲ್ಯಾನ್ ಮಾಡಿತ್ತು. ಆದರೆ, ಇದಕ್ಕೆ ಎಚ್‌.ಡಿ. ರೇವಣ್ಣ ನಿರಾಕರಣೆ ಮಾಡಿದ್ದಾರೆನ್ನಲಾಗಿದೆ.

ಮುಖಾಮುಖಿ ವಿಚಾರಣೆಗೆ ಎಚ್.ಡಿ. ರೇವಣ್ಣ ಅವರು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಎರಡನೇ ಆರೋಪಿ ಸತೀಶ್‌ ಬಾಬುವನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.

ಮೂರನೇ ದಿನವೂ ರೇವಣ್ಣಗೆ ಡ್ರಿಲ್

ಕಿಡ್ನ್ಯಾಪ್ ಕೇಸಲ್ಲಿ ಬಂಧಿತರಾಗಿ ಎಸ್ಐಟಿ‌ ಕಸ್ಟಡಿಯಲ್ಲಿರುವ ಮಾಜಿ‌ ಸಚಿವ ಎಚ್.ಡಿ. ರೇವಣ್ಣ ಮೂರನೇ ದಿನವೂ ಎಸ್ಐಟಿ‌ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದ್ದಾರೆ. ಎರಡು‌ ದಿನಗಳಿಂದ ಸಹ ರೇವಣ್ಣ ಒಂದೇ ಮಾತನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ. ಅಪಹರಣ ಬಗ್ಗೆ ನನಗೇನೂ ಗೊತ್ತಿಲ್ಲ, ನಾನು ಕಿಡ್ನ್ಯಾಪ್ ಮಾಡಿಸಿಲ್ಲ ಎಂಬ ಹೇಳಿಕೆಯನ್ನಷ್ಟೇ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮಂಗಳವಾರ ಎರಡನೇ ಆರೋಪಿ‌ಯಾದ ಸತೀಶ್ ಬಾಬುವನ್ನು ರೇವಣ್ಣ ಎದುರು ಹಾಜರುಪಡಿಸಿ ಮುಖಾಮುಖಿ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ತೀರ್ಮಾನ ಮಾಡಿದ್ದರು.

ಆದರೆ, ಎರಡನೇ ಆರೋಪಿಯ ಮುಂದೆ ಮುಖಾಮುಖಿ ವಿಚಾರಣೆಗೆ A1 ಆರೋಪಿಯಾದ ಎಚ್.ಡಿ. ರೇವಣ್ಣ ಅವರು ಒಪ್ಪಲೇ ಇಲ್ಲ ಎನ್ನಲಾಗಿದೆ. ಹೀಗಾಗಿ ಎರಡನೇ ಆರೋಪಿಯನ್ನು ಮಾತ್ರ ವಿಚಾರಣೆ ನಡೆಸಲಾಗಿದೆ. ಈ ವೇಳೆ ಎಸ್ಐಟಿ ಹಲವು ಪ್ರಶ್ನೆಗಳನ್ನು ಸತೀಶ್‌ ಮುಂದಿಟ್ಟಿದೆ. ಸಂತ್ರಸ್ತ ಮಹಿಳೆಯನ್ನು ಯಾರ ಸೂಚನೆ ಮೇರೆಗೆ ಕರೆದುಕೊಂಡು ಹೋಗಿದ್ದಿರಿ? ಕಿಡ್ನ್ಯಾಪ್‌ ಮಾಡುವ ಉದ್ದೇಶದಿಂದಲೇ ಸಂತ್ರಸ್ತೆಯನ್ನು ಕರೆದೊಯ್ದಿದ್ದಾ? ಕಿಡ್ನ್ಯಾಪ್ ಮಾಡಿ ಕಾಳೇನಹಳ್ಳಿಯ ತೋಟದ‌ ಮನೆಯಲ್ಲಿಡಲು ಯಾರು ಸೂಚನೆ ನೀಡಿದ್ದರು? ಹೀಗೆ ಹಲವು ಪ್ರಶ್ನೆಗಳನ್ನು ಸತೀಶ್ ಬಾಬುಗೆ ಎಸ್ಐಟಿ ಅಧಿಕಾರಿಗಳು ಕೇಳಿದ್ದಾರೆ. ಈ ವೇಳೆ ಆರೋಪಿ ನೀಡಿದ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಹಾಗೂ ವಿಡಿಯೋಗ್ರಫಿ ಮೂಲಕ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸತೀಶ್‌ ಹೇಳಿಕೆ ಮೇಲೆ ರೇವಣ್ಣ ವಿಚಾರಣೆ

ಈಗ ಸತೀಶ್‌ ಬಾಬು ನೀಡುವ ಹೇಳಿಕೆಯನ್ನು ಆಧರಿಸಿ ಎಚ್‌.ಡಿ. ರೇವಣ್ಣ ಅವರನ್ನು ವಿಚಾರಣೆ ನಡೆಸಲು ಎಸ್‌ಐಟಿ ತೀರ್ಮಾನ ಮಾಡಿದೆ. ಸತೀಶ್‌ ಬಾಬು ನಿಮ್ಮ ವಿರುದ್ಧವಾಗಿ ಇಂಥ ಹೇಳಿಕೆಯನ್ನು ಕೊಟ್ಟಿದ್ದಾನೆ. ಈ ಪ್ರಕರಣದ ಬಗ್ಗೆ ಏನೆಲ್ಲ ಹೇಳಿದ್ದಾನೆ ಎಂಬುದಾಗಿ ಪ್ರಶ್ನೆಗಳನ್ನು ಸಿದ್ಧಪಡಿಸಿ ರೇವಣ್ಣ ಅವರಿಗೆ ಕೇಳುವ ಸಾಧ್ಯತೆ ಇದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಪತ್ತೆಗೆ ಬ್ಲೂ ಕಾರ್ನರ್‌ ನೋಟೀಸ್!‌ ಏನಿದರ ಅಗತ್ಯ?

ರೇವಣ್ಣಗೆ ಹರ್ನಿಯಾ?

ಇದರ ಮಧ್ಯೆ ಎದೆ ಉರಿ ಹಾಗೂ ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಬಳಲುತ್ತಿರುವ ಎಚ್‌.ಡಿ. ರೇವಣ್ಣ ಅವರನ್ನು ಮೊದಲಿಗೆಬೌರಿಂಗ್‌ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ರೇವಣ್ಣ ಅವರಲ್ಲಿ ಮೊದಲು ಹರ್ನಿಯಾ ಲಕ್ಷಣ ಕಂಡುಬಂದಿತ್ತು ಎನ್ನಲಾಗಿದ್ದು, ಈ ಬಗ್ಗೆಯೂ ತಪಾಸಣೆಯನ್ನು ನಡೆಸಲಾಗಿದೆ. ಅಲ್ಲಿಯೂ ಸಹ ವೈದ್ಯರು ತಪಾಸಣೆ ನಡೆಸಿ ರೇವಣ್ಣ ಆರೋಗ್ಯವಂತರಾಗಿದ್ದಾರೆ ಎಂದು ಹೇಳಿದ್ದಾರೆ. ರೇವಣ್ಣರನ್ನ ಮೆಡಿಕಲ್‌ಟೆಸ್ಟ್ ಗೆ ಒಳಪಡಿಸಿದ್ದು, ವೈದ್ಯಕೀಯ ತಪಾಸಣೆ ವೇಳೆ ಹಾರ್ನಿಯ ಲಕ್ಷಣ ಪತ್ತೆಯಾಗಿದ್ದು, ರೇವಣ್ಣ ಎದೆ ನೋವು ಇದೆ ಎಂದು ಹೇಳಿದ ಹಿನ್ನೆಲೆ ಬೌರಿಂಗ್ ಆಸ್ಪತ್ರೆ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲು‌ಶಿಫಾರಸ್ಸು ಮಾಡಿದ್ದಾರೆ. ಹೀಗಾಗಿ ಎಸ್ಐಟಿ‌ಅಧಿಕಾರಿಗಳು ರೇವಣ್ಣನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

Continue Reading

ತುಮಕೂರು

Tumkur News: ಜೂ. 9ಕ್ಕೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವಾರ್ಷಿಕೋತ್ಸವ

Tumkur News: ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾರ್ಷಿಕೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ, ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶವನ್ನು ಜೂ.9 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

VISTARANEWS.COM


on

Shrikhshetra Siddrabetta Balehonnur Khasa Shakha Math 18th year Anniversary on June 9 says sri veerabhadra shivacharya swamiji
Koo

ಕೊರಟಗೆರೆ: ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ 18ನೇ ವಾರ್ಷಿಕೋತ್ಸವವನ್ನು ಜೂ.9ರಂದು ಆಯೋಜನೆ ಮಾಡಲಾಗಿದೆ ಎಂದು ಸಿದ್ದರಬೆಟ್ಟದ ಶ್ರೀಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ (Tumkur News) ತಿಳಿಸಿದರು.

ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ 18ನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಠದ ಸದ್ಭಕ್ತರ ಸಹಕಾರದಿಂದ ಶ್ರೀ ಮಠದ 18ನೇ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶ್ರೀ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

ಇನ್ಪೋಸಿಸ್ ಫೌಂಡೇಶನ್‌ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರ ಸಲಹೆಯಂತೆ ಕಳೆದ 17 ವರ್ಷಗಳಿಂದಲೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು, ಸುಮಾರು 800ಕ್ಕೂ ಹೆಚ್ಚು ವಿವಾಹಗಳು ನಡೆದಿದೆ. ಇದರಿಂದ ಸಾಕಷ್ಟು ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಮತ್ತು ಸಿದ್ದರಬೆಟ್ಟದ ಶ್ರೀಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ 18ನೇ ವಾರ್ಷಿಕೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವ, ಉಚಿತ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

ಈ ಸಂದರ್ಭದಲ್ಲಿ ತುಮಕೂರು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನ್‌ ಕುಮಾರ್, ತಾಲೂಕು ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಾಗರಾಜು, ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ದರ್ಶನ್, ಪರ್ವತಯ್ಯ ಸೇರಿದಂತೆ ಮಠದ ಭಕ್ತರು ಹಾಜರಿದ್ದರು.

Continue Reading
Advertisement
Ujjivan Small Finance Bank
ವಾಣಿಜ್ಯ13 seconds ago

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

Lok Sabha Election 2024
ಕರ್ನಾಟಕ1 min ago

Lok Sabha Election 2024: ಜಿ.ಎಂ.ಸಿದ್ದೇಶ್ವರ್‌ ಮಹಾ ಎಡವಟ್ಟು, ಪತ್ನಿ ಮತವನ್ನೂ ತಾವೇ ಹಾಕಿದ ಸಂಸದ

Nirav modi
ದೇಶ20 mins ago

Nirav Modi: ನೀರವ್‌ ಮೋದಿಗೆ ಲಂಡನ್‌ ಜೈಲೇ ಗತಿ; 5ನೇ ಬಾರಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

Yallapura MLA Shivaram Hebbar voting in Arabail village
ರಾಜಕೀಯ30 mins ago

Lok Sabha Election 2024: ಅಭಿವೃದ್ಧಿ ಕಾರ್ಯಕ್ಕಾಗಿ ನೀತಿ ಸಂಹಿತೆ ಸಡಿಲಿಸಲು ಶಿವರಾಮ ಹೆಬ್ಬಾರ್ ಮನವಿ

Haryana Government
ಪ್ರಮುಖ ಸುದ್ದಿ35 mins ago

Haryana Government : ಹರಿಯಾಣದ ಬಿಜೆಪಿ ಸರ್ಕಾರ ಪತನ ಸಾಧ್ಯತೆ; 3 ಪಕ್ಷೇತರರು ಕಾಂಗ್ರೆಸ್ ಕಡೆಗೆ

Prajwal Revanna Case HD Revanna refuses to face to face with 2nd accused in kidnapping case
ಕ್ರೈಂ37 mins ago

Prajwal Revanna Case: ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ ಜತೆ ಮುಖಾಮುಖಿ ವಿಚಾರಣೆಗೆ ಒಪ್ಪದ ರೇವಣ್ಣ!

Shrikhshetra Siddrabetta Balehonnur Khasa Shakha Math 18th year Anniversary on June 9 says sri veerabhadra shivacharya swamiji
ತುಮಕೂರು41 mins ago

Tumkur News: ಜೂ. 9ಕ್ಕೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವಾರ್ಷಿಕೋತ್ಸವ

Bidar Lok Sabha constituency BJP candidate Bhagwanth Khooba voting in Aurad
ಬೀದರ್‌45 mins ago

Lok Sabha Election 2024: ಔರಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಮತದಾನ

Lok Sabha Election
ದೇಶ46 mins ago

Lok Sabha Election: 3ನೇ ಹಂತದಲ್ಲಿ ಶೇ.60ರಷ್ಟು ಮತದಾನ, ಕಳೆದ ಬಾರಿಗಿಂತಲೂ ಕಡಿಮೆ

Prajwal Revanna Case HD Revanna suffers heartburn and gastric problems Shift to hospital
ರಾಜಕೀಯ1 hour ago

Prajwal Revanna Case: ಎಚ್.ಡಿ. ರೇವಣ್ಣಗೆ ಎದೆ ಉರಿ, ಗ್ಯಾಸ್ಟ್ರಿಕ್‌ ತೊಂದರೆ; ಆಸ್ಪತ್ರೆಗೆ ಶಿಫ್ಟ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ3 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ4 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

ಟ್ರೆಂಡಿಂಗ್‌