Site icon Vistara News

Murder Case : ದೀಪಿಕಾ ಹತ್ಯೆ ಬೆನ್ನಲ್ಲೇ ಮತ್ತೊಂದು ಭೀಕರ ಕೃತ್ಯ; ಮಹಿಳೆಯ ರೇಪ್‌ ಆ್ಯಂಡ್‌ ಮರ್ಡರ್‌

Mandya Woman murder

ಮಂಡ್ಯ: ಮೇಲುಕೋಟೆಯ ಖಾಸಗಿ ಶಾಲೆ ಶಿಕ್ಷಕಿ ದೀಪಿಕಾ (Teacher Deepika Murder) ಅವರನ್ನು ನಿತೇಶ್‌ ಎಂಬ ದುಷ್ಟ ಕೊಲೆ ಮಾಡಿದ ಘಟನೆಯ ಬೆನ್ನಿಗೇ ಮಂಡ್ಯದಲ್ಲಿ ಮತ್ತೊಬ್ಬ ಮಹಿಳೆಯ ಹತ್ಯೆ (Murder Case) ನಡೆದಿದೆ. ಮಂಡ್ಯದ ಕಲ್ಲಹಳ್ಳಿ ಸಮೀಪದ ರೈಲ್ವೆ ಗೇಟ್ ಬಳಿಯ ಬೃಹತ್ ಮೋರಿಯೊಂದರಲ್ಲಿ ಮಹಿಳೆಯೊಬ್ಬರ ಶವ (Womans dead body found) ಪತ್ತೆಯಾಗಿದೆ.

ಮಹಿಳೆಯ ಶವ ಮೋರಿಯಲ್ಲಿ ತೇಲಾಡುತ್ತಿದ್ದು, ಅರೆನಗ್ನ ಸ್ಥಿತಿಯಲ್ಲಿದೆ. ಯಾರೊ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ ಮಾಡಿರುವ ಶಂಕೆ (Rape and Murder) ವ್ಯಕ್ತವಾಗಿದೆ. ಸ್ಥಳಕ್ಕೆ ಮಂಡ್ಯದ ಸೆಂಟ್ರಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಕೆಲವೇ ದಿನದ ಅಂತರದಲ್ಲಿ ಎರಡು ಮಹಿಳೆಯರ ಕೊಲೆ ನಡೆದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Murder Case : ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯ; ಪತ್ನಿಗೆ ಕತ್ತಿ ಬೀಸಿ ಕೊಂದ ಪತಿ

ಅಕ್ಕ ಅಕ್ಕ ಎನ್ನುತ್ತಲೇ ಕೊಲೆ ಮಾಡಿದ‌ ದುಷ್ಟ

ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ (Melukote private School Teacher), ಮಾಣಿಕ್ಯನ ಹಳ್ಳಿಯ ದೀಪಿಕಾ (Teacher Deepika) ಅವರನ್ನು ಕಳೆದ ಎರಡು ವರ್ಷದಿಂದ ಅವರ ಜತೆ ಆತ್ಮೀಯವಾಗಿದ್ದ ನಿತೇಶ್‌ ಎಂಬಾತನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲುಕೋಟೆ ಯೋಗನರಸಿಂಹ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶನಿವಾರ ಸಂಜೆಯ ಹೊತ್ತಿಗೆ ಟೀಚರ್ ದೀಪಿಕಾ ಅವರನ್ನು ಕೊಂದು ಕೊಂದು ಮಣ್ಣಲ್ಲಿ ಹೂತು ಹಾಕಿದ್ದ ಅದೇ ಗ್ರಾಮದ ನಿತೇಶ್ʼ ಅಂದಿನಿಂದಲೇ ನಾಪತ್ತೆಯಾಗಿದ್ದ. ಮೇಲುಕೋಟೆ ಪೊಲೀಸರು ನಿತೇಶ್‌ನನ್ನು ಹೊಸಪೇಟೆ ಬಳಿ ವಶಕ್ಕೆ ಪಡೆದು ಕರೆದುಕೊಂಡು ಬಂದಿದ್ದಾರೆ. ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಜತೆಗೆ ಕೊಲೆಗೆ ಕಾರಣವಾದ ಅಂಶಗಳನ್ನು ಬಿಚ್ಚಿಟ್ಟಿದ್ದಾನೆ.

ಕಳೆದ ಎರಡು ವರ್ಷಗಳಿಂದ ಅವರಿಬ್ಬರು ಆತ್ಮೀಯರಾಗಿದ್ದರು. ಆದರೆ, ಇವರ ಸಂಬಂಧದ ಬಗ್ಗೆ ಗುಸುಗುಸು ಹರಡಿದ್ದರಿಂದ ದೀಪಿಕಾ ನಿತೇಶ್‌ನನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಳು. ಆದರೆ, ಇದರಿಂದ ನಿತೇಶ್‌ ಸಿಟ್ಟಿಗೆದ್ದಿದ್ದ. ಆಕೆ ತಾನು ಕರೆದರೂ ಬರುತ್ತಿಲ್ಲ ಎಂಬ ಸಿಟ್ಟು ಆತನಿಗಿತ್ತು. ಹೀಗಾಗಿ ಅವರು ಕಳೆದ ಶನಿವಾರ ಆಕೆಯನ್ನು ಒತ್ತಾಯಪೂರ್ವಕಗಾಗಿ ಕರೆಸಿಕೊಂಡು ಸಮಾಧಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲುಕೋಟೆಯ ಯೋಗನಾರಸಿಂಹ ಬೆಟ್ಟದ ತಪ್ಪಲಿನಲ್ಲಿ ಒಂದು ಗುಂಡಿಯನ್ನು ತೋಡಿ ಸಿದ್ಧಪಡಿಸಿದ್ದ ಆತ ಆಕೆಯನ್ನು ಉಪಾಯವಾಗಿ ಅಲ್ಲಿಗೆ ಕರೆಸಿ ಶಾಲಿನಿಂದ ಕೊರಳು ಬಿಗಿದು ಕೊಲೆ ಮಾಡಿ ಹೂತು ಹಾಕಿ ಪರಾರಿಯಾಗಿದ್ದ. ಬೆಟ್ಟದ ತಪ್ಪಲಿನಲ್ಲಿ ದೀಪಿಕಾ ಅವರ ಸ್ಕೂಟರ್‌ ಪತ್ತೆಯಾದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಮಣ್ಣಿನಲ್ಲಿ ಹೂತು ಹಾಕಿದ್ದು ಪತ್ತೆಯಾಗಿತ್ತು.

Exit mobile version