ಮಂಡ್ಯ: ಮಳವಳ್ಳಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯ ನೀಡಲು ಈಗ ರಾಜಕೀಯ ಮುಖಂಡರು ನಾಮುಂದು ತಾಮುಂದು ಎಂದು ಧಾವಿಸುತ್ತಿದ್ದಾರೆ.
ಇಂದು ಮಳವಳ್ಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಬಾಲಕಿ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಬೆಳಿಗ್ಗೆ 11:30ಕ್ಕೆ ಬಾಲಕಿ ನಿವಾಸಕ್ಕೆ ಭೇಟ ನೀಡಲಿದ್ದಾರೆ.
ಟ್ಯೂಷನ್‌ಗೆ ಹೋದ 10 ವರ್ಷದ ಬಾಲಕಿಯನ್ನು ಶಿಕ್ಷಕನೇ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಶಿಕ್ಷಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಾಲಕಿ ಕುಟುಂಬಕ್ಕೆ ನ್ಯಾಯಕ್ಕಾಗಿ ಹಲವು ಪ್ರತಿಭಟನೆಗಳು ನಡೆದಿದ್ದವು.
ಇಂದು ಪರಿಹಾರ ವಿತರಣೆ
ಇಂದು ಮೃತ ಬಾಲಕಿ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ಘೋಷಿಸಲಾಗಿರುವ 10 ಲಕ್ಷ ರೂ. ವಿತರಣೆ ಮಾಡಲಾಗುತ್ತಿದೆ. ಮೃತ ಬಾಲಕಿ ಕುಟುಂಬಕ್ಕೆ ಮುಖ್ಯಮಂತ್ರಿಗಳು ಕುಂಭಮೇಳದಲ್ಲಿ 10 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಜಿಲ್ಲಾಧಿಕಾರಿ ಖಾತೆಗೆ ಪರಿಹಾರ ವರ್ಗಾವಣೆ ಮಾಡಿದ್ದರು. ಇಂದು ಸಂಸದೆ ಸುಮಲತಾ ಹಾಗೂ ಸಚಿವ ಕೆ.ಗೋಪಾಲಯ್ಯ ಬಾಲಕಿ ನಿವಾಸಕ್ಕೆ ಭೇಟಿ ನೀಡಲಿದ್ದು, ಇವರ ನೇತೃತ್ವದಲ್ಲಿ ಹಸ್ತಾಂತರ ನಡೆಯಲಿದೆ. ಜಿಲ್ಲಾಧಿಕಾರಿ ಎಸ್. ಅಶ್ವಥಿ ಸೇರಿ ಅಧಿಕಾರಿಗಳ ತಂಡವೂ ಭಾಗಿಯಾಗಲಿದೆ.
ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಸಂಸದೆ ಸುಮಲತಾ ಮನವಿ ಮಾಡಿದ್ದರು. ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಮಳವಳ್ಳಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ