Site icon Vistara News

Mysore Dasara | ಗಜಪಡೆ ಆಗಮನಕ್ಕೆ ಇನ್ನು ವಾರವಷ್ಟೇ ಬಾಕಿ!

Dasara 2022

ಮೈಸೂರು: ಇದೇ ಸೆಪ್ಟೆಂಬರ್‌ ೨೬ರಿಂದ ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ (Mysore Dasara) ಸಿದ್ಧತೆಗಳು ನಡೆಯುತ್ತಲಿವೆ. ಇದೇ ವೇಳೆ ದಸರಾ ಗಜಪಯಣಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಆಗಸ್ಟ್ 7ರಂದು ಕಾಡಿನಿಂದ ನಾಡಿಗೆ ಗಜಪಡೆಗಳು ಪ್ರಯಾಣ ಬೆಳಸಲಿವೆ.

ಮೊದಲ ಹಂತದಲ್ಲಿ 9 ಆನೆಗಳು ಆಗಮಿಸಲಿದ್ದು, ಅಭಿಮನ್ಯು ಆನೆ ನೇತೃತ್ವವನ್ನು ವಹಿಸಿಕೊಳ್ಳಲಿದೆ. ಅಭಿಮನ್ಯು ಮೂರನೇ ಬಾರಿಗೆ ಚಿನ್ನದ ಅಂಬಾರಿಯನ್ನು ಹೊರಲು ಸಿದ್ಧನಾಗಿದ್ದಾನೆ. ಇನ್ನು ಎರಡನೇ ಹಂತದಲ್ಲಿ 6 ಆನೆಗಳು ಆಗಮಿಸಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಗಜಪಡೆಗಳ ಸ್ವಾಗತಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ಐದು ಹೊಸ ಆನೆಗಳು ಬರುವ ಸಾಧ್ಯತೆ ಎಂದು ಹೇಳಲಾಗಿದೆ. ಗಣೇಶ, ಭೀಮ, ಸುಗ್ರೀವಾ, ಅಜಯ, ಮಹೇಂದ್ರ ಆನೆ ಬರುವ ಸಾಧ್ಯತೆ ಇದೆ. ಆಗಸ್ಟ್ 7ಕ್ಕೆ ಮೈಸೂರಿಗೆ ಆಗಮಿಸುವ ಗಜಪಡೆಗಳು ಬಳಿಕ ಆಗಸ್ಟ್‌ 10ರಂದು ಅರಮನೆ ಪ್ರವೇಶ ಮಾಡಲಿವೆ.

ಇದನ್ನೂ ಓದಿ | ಈ ಬಾರಿ ಸಾಂಪ್ರದಾಯಿಕ, ಅದ್ಧೂರಿ ದಸರಾ; ಸಿಎಂ ಬಸವರಾಜ ಬೊಮ್ಮಾಯಿ

Exit mobile version