Site icon Vistara News

Mysore-Bangalore Highway | ಮೈಸೂರು-ಬೆಂಗಳೂರು ಹೈವೇನಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ನಿಷೇಧ, ಸರ್ವೀಸ್‌ ರಸ್ತೆ ಮುಕ್ತ

mysore high way

ಮೈಸೂರು: ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಪೂರ್ಣವಾದ ಬಳಿಕ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಸಂಚಾರ ನಿಷೇಧ ಜಾರಿಯಾಗಲಿದೆ. ( Mysore-Bangalore Highway) ಆದರೆ ಸರ್ವೀಸ್‌ ರಸ್ತೆಯಲ್ಲಿ ಚಲಾಯಿಸಬಹುದು.
ಮೈಸೂರಿನ ಕೊಲಂಬಿಯಾ ಏಷಿಯಾ ಸಿಗ್ನಲ್ ಬಳಿಯೇ ವಾಹನಗಳ ವರ್ಗೀಕರಣ ನಡೆಯಲಿದೆ. ಹೀಗಿದ್ದರೂ ಈ ದಶಪಥ ಹೈವೇ ಜತೆಗಿರುವ ಸರ್ವೀಸ್ ರಸ್ತೆಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಸಿಗಲಿದೆ. ಎಡ- ಬಲದಲ್ಲಿ ಒಟ್ಟು ನಾಲ್ಕು ಪಥದ ಸರ್ವೀಸ್ ರಸ್ತೆ ಇರಲಿದೆ. ಅಪಘಾತಗಳನ್ನು ತಡೆಯುವುದು ಇದರ ಉದ್ದೇಶ ಎಂದು ಸರ್ಕಾರ ಹೇಳಿದೆ.
ನಾಲ್ಕು ಚಕ್ರ ಹಾಗೂ ಮೇಲ್ಪಟ್ಟ ವಾಹನಗಳಿಗೆ ಮಾತ್ರ 6 ಪಥದ ಎಕ್ಸ್‌ಪ್ರೆಸ್‌ ಹೈವೇಗೆ ಎಂಟ್ರಿ ಸಿಗಲಿದೆ. ಎಕ್ಸ್‌ಪ್ರೆಸ್ ಹೈವೇನಲ್ಲಿ ನಿಗದಿತ ವೇಗಕ್ಕಿಂತ ಕಡಿಮೆ ಸ್ಪೀಡ್‌ನಲ್ಲಿ ಹೋದರೆ ಕೂಡ ದಂಡ ಕಟ್ಟಬೇಕು. ಈ ನಿಯಮ ಆಗ್ರಾ- ದೆಹಲಿ, ಮುಂಬಯಿ- ಪುಣೆ ಎಕ್ಸ್‌ಪ್ರೆಸ್‌ ಹೈವೇಗಳಲ್ಲಿ ಜಾರಿ‌ಯಾಗಿದೆ.

ಸ್ಥಳೀಯರ ವಿರೋಧ: ಬೆಂಗಳೂರು ಮೈಸೂರು ದಶಪಥದ ಹೆದ್ದಾರಿಯಲ್ಲಿ ಬೈಕ್, ಆಟೋಗಳ ಓಡಾಟಕ್ಕೆ‌ ಹೆದ್ದಾರಿ ಪ್ರಾಧಿಕಾರ ನಿರ್ಬಂಧ ವಿಧಿಸಿರುವುದಕ್ಕೆ ಸ್ಥಳೀಯರು ವಿರೋಧಿಸಿದ್ದಾರೆ.
ಹೆದ್ದಾರಿಗಾಗಿ ನಾವು ಭೂಮಿ ಕಳೆದುಕೊಂಡಿದ್ದೇವೆ. ನಮ್ಮ ವಾಹನಗಳ ಓಡಾಡ ಬೇಡ ಅಂದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಆಟೋಗಳ ಚಾಲನೆಗೆ ಹೆದ್ದಾರಿಯ ಒಂದು ಬದಿಯಲ್ಲಿ ಅವಕಾಶ ಮಾಡಿಕೊಡಬೇಕು.
ಒಂದುವೇಳೆ ಅಪಘಾತ ನಡೆದು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದರೆ ಆಂಬುಲೆನ್ಸ್ ಬರುವ ತನಕ ಕಾಯಬೇಕೇ? ಎಂದು ಒತ್ತಾಯಿಸಿದ್ದಾರೆ.

Exit mobile version