ಮೈಸೂರು: ಮೈಸೂರಿನಲ್ಲಿ ಗುಂಬಜ್ ಮಾದರಿಯಲ್ಲಿ ನಿರ್ಮಿಸಲಾಗಿರುವ ಬಸ್ ಶೆಲ್ಟರ್ ವಿವಾದ ಮುಂದುವರದಿದೆ. ವಿವಾದಾತ್ಮಕ ಬಸ್ ನಿಲ್ದಾಣದ ಶೆಲ್ಟರನ್ನು ತೆರವುಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ನೋಟಿಸ್ ನೀಡಿದೆ.
ಈ ಬಸ್ ನಿಲ್ದಾಣವನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬಲ ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಅನೇಕ ಬಾರಿ ಕೆಲಸವನ್ನು ನಿಲ್ಲಿಸಿದ್ದರೂ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಒಂದು ವಾರದ ಒಳಗೆ ವಿವಾದಾತ್ಮಕ ನಿಲ್ದಾಣವನ್ನು ತೆರವುಗೊಳಿಸಬೇಕು. ಸದ್ಯ ಇದು ಕೋಮು ಸಮಸ್ಯೆಯಾಗಿ ಪರಿವರ್ತನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಯ್ದೆಐನ್ವಯ ಇದನ್ನೇ ನೋಟೀಸ್ ಎಂದು ಪರಿಗಣಿಸಿ, ಇಲ್ಲವೇ ಪ್ರಾಧಿಕಾರದ ಕಾಯ್ದೆ 2003ರ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ನೋಟೀಸ್ ನೀಡಿದ್ದಾರೆ.
ಬಸ್ ಶೆಲ್ಟರ್‌ನ ಗೋಪುರ ಗುಂಬಜ್ ಮಾದರಿಯಲ್ಲಿದೆ. ಇದು ಇಸ್ಲಾಮ್ ಸಂಸ್ಕೃತಿಯ ಹೇರಿಕೆ. ಇದನ್ನು ಎರಡು ದಿನಗಳಲ್ಲಿ ತೆರವು ಮಾಡದಿದ್ದರೆ ತಾನೇ ಜೆಸಿಬಿ ತಂದು ಒಡೆಸಿಹಾಕುವುದಾಗಿ ಮೈಸೂರು ಸಂಸದ ಪ್ರತಾಪ್‌ಸಿಂಹ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ | ಮೈಸೂರು ಬಸ್ ಶೆಲ್ಟರ್ ಮೇಲೆ ಸುತ್ತೂರು ಶ್ರೀ, ಪ್ರಧಾನಿ ಮೋದಿ ಫೋಟೊ; ಗುಂಬಜ್ ಒಡೆದರೆ ಅಪಮಾನ ಮಾಡಿದಂತೆ!