ಮೈಸೂರು: ಪಾಕ್ ಪರ ಘೋಷಣೆಗಳನ್ನು ಕೂಗುವ ವಿಡಿಯೋ ಹೊರಬಿದ್ದ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ‘ಚೋಟಾ ಪಾಕಿಸ್ತಾನಕ್ಕೆ ಕವಲಂದೆ ಬೋಲೆ’ ಎಂಬ ಧ್ವನಿಯೊಂದಿಗೆ ಮುಸ್ಲಿಂ ಮೆರವಣಿಗೆಯ ವಿಡಿಯೋ ತುಣುಕು ಹರಿದಾಡಿತ್ತು. ವಿಡಿಯೋದಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದ ಇಬ್ಬರನ್ನೂ ಪೊಲೀಸರು ಗುರುತಿಸಿದ್ದರು. ಸಂಜೆ ವೇಳೆಗೆ ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರನ್ನು 23 ವರ್ಷದ ಅನನ್ ಅಲಿ ಖಾನ್ ಮತ್ತು 21 ವರ್ಷದ ಫಯಾಜ್ ಷರೀಫ್ ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೈಸೂರು ಎಸ್‌ಪಿ ಚೇತನ್, ಈಗ ಇಬ್ಬರನ್ನು ಬಂಧಿಸಲಾಗಿದೆ. ತಂಡವು ವೀಡಿಯೊವನ್ನು ತನಿಖೆ ನಡೆಸುತ್ತಿದೆ ಮತ್ತು ಕ್ಲಿಪ್‌ನಲ್ಲಿರುವ ಇತರರನ್ನು ಸಹ ವಿಚಾರಣೆ ನಡೆಸುತ್ತಿದೆ. ದುಷ್ಕರ್ಮಿಗಳಿಗೆ ಶಿಕ್ಷೆಯಾಗಲಿದೆ’ ಎಂದು ಹೇಳಿದ್ದಾರೆ.
ಅನ್‌ಕೌಂಟರ್ ಮಾಡಿ ಎಂದ ಪ್ರಮೋದ್ ಮುತಾಲಿಕ್
ಛೋಟಾ ಪಾಕಿಸ್ತಾನ್ ಘೋಷಣೆ ಕೂಗಿದವರನ್ನು ಗುಂಡಿಟ್ಟು ಎನ್‌ಕೌಂಟರ್ ಮಾಡಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಮೈಸೂರಿಗೆ ಆಗಮಿಸಿ ಎಸ್‌ಪಿ ಜತೆಗೆ ಚರ್ಚೆ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಈ ಘೋಷಣೆ ಹಿಂದೆ ಮೌಲ್ವಿಯ ಕೈವಾಡ ಇದೆ. ಮೌಲ್ವಿಯ ಪ್ರಚೋದನಾಕಾರಿ ಭಾಷಣದಿಂದಲೇ ಪ್ರೇರಿತರಾಗಿ ಈ ಘೋಷಣೆ ಹಾಕಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ದೇವಸ್ಥಾನಗಳಲ್ಲಿ ಸುಪ್ರಭಾತ ಅಭಿಯಾನದ ಕುರಿತು ಪ್ರತಿಕ್ರಿಯೆ ನೀಡಿದ ಮುತಾಲಿಕ್, ನಮ್ಮ ಹೋರಾಟ ಆಜಾನ್ ವಿರುದ್ಧ ಅಲ್ಲ. ಅಲ್ಲಿಂದ ಹೊರಬರುವ ಶಬ್ದದ ವಿರುದ್ಧ. ಮೇ 9ರಿಂದ ಎಲ್ಲ ದೇವಸ್ಥಾನಗಳಲ್ಲಿ ಸುಪ್ರಭಾತ ಅಭಿಯಾನ ನಡೆಯಲಿದೆ. ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ಸುಪ್ರಭಾತ, ಹನುಮಾಣ್ ಚಾಲೀಸಾ, ಓ ನಮಃ ಶಿವಾಯ ಮುಂತಾದವು ಮೊಳಗಲಿವೆ ಎಂದು ಹೇಳಿದರು.
ಛೋಟಾ ಪಾಕಿಸ್ತಾನ್ ಘೋಷಣೆ ಹಿನ್ನೆಲೆ
ಮಂಗಳವಾರ ರಂಜಾನ್ ನಂತರ ಕವಲಂದೆಯಲ್ಲಿ ನಮಾಜ್ ಮುಗಿಸಿ ಒಂದು ಕಡೆ ಜನರು ಸೇರಿದ್ದರು. ಈ ವೇಳೆ, ಕವಲಂದೆ ಗ್ರಾಮದಲ್ಲಿ ಚೋಟಾ ಪಾಕಿಸ್ತಾನ್ ಎಂದು ಒಬ್ಬ ವ್ಯಕ್ತಿ ಹೇಳಿದ್ದಾನೆ. ಪ್ರಾರ್ಥನೆ ಮುಗಿಸಿ ಹಿಂತಿರುಗಿದ ನಂತರ ರಸ್ತೆಯ ಪಕ್ಕದಲ್ಲಿ ನಿಂತಿದ್ದರು. “ನಾರಾ ಇ ತಕ್ಬೀರ್ ಅಲ್ಲಾಹು ಅಕ್ಬರ್” ಎಂದು ಕೂಗುತ್ತಿರುವ ಪುರುಷರ ಗುಂಪನ್ನು ಈ ವಿಡಿಯೋದಲ್ಲಿ ನೋಡಬಹುದು. ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯೊಬ್ಬರು, “ಇದು ಛೋಟಾ ಪಾಕಿಸ್ತಾನ್” ಎಂದಿದ್ದಾರೆ. ಜನಸಂದಣಿಯಲ್ಲಿದ್ದ ವ್ಯಕ್ತಿಯೊಬ್ಬ, “ನಮ್ಮ ಹಳ್ಳಿಯಲ್ಲಿ ಸಭೆಯನ್ನು ನೋಡು” ಎಂದು ಹೇಳಿದಾಗ, ಇನ್ನೊಬ್ಬರು “ಯೇ ಭಿ ಪಾಕಿಸ್ತಾನ್ ಹೇ, ಚೋಟಾ. ಕವಲಂದೆ ಬೋಲೇ ತೋ ಚೋಟಾ ಪಾಕಿಸ್ತಾನ್, ಟೀಕ್ ಹೈ” ಎಂದಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಇದನ್ನೂ ಓದಿ: ನಂಜನಗೂಡಿನ ಛೋಟಾ ಪಾಕಿಸ್ತಾನ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಗುರುತು ಪತ್ತೆ