ಮೈಸೂರು: ಸ್ವಾತಂತ್ರ್ಯದ 75ನೇ ವರ್ಷದ ಪ್ರಯುಕ್ತ ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿರುವ ಯುವಜನ ಮಹೋತ್ಸವದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಬೃಹತ್ ಯುವಸ್ತೋಮ ನೆನೆಯಿತು.
ವೇದಿಕೆ ಮೇಲೆ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪುನೀತ್ ರಾಜಕುಮಾರ್ ನಟನೆಯ ʻಬೊಂಬೆ ಹೇಳುತೈತೆ…ʼ ಹಾಡು ಬಂದ ಕೂಡಲೆ ನೆನೆದ ಯುವಜನತೆ ಭಾವನಾತ್ಮಕವಾಯಿತು.
ತಕ್ಷಣವೇ ಎಲ್ಲರೂ ತಮ್ಮ ಮೊಬೈಲ್ ಟಾರ್ಚ್‌ಗಳನ್ನು ಆನ್ ಮಾಡಿ ಹಾಡು ಮುಗಿಯುವವರೆಗೂ, ಅಗಲಿದ ನಾಯಕನಿಗೆ ತಮ್ಮ ನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ನಟ ಯಶ್ ಭಾಗಿಯಾಗಲಿದ್ದಾರೆ. ಬೆಂಗಳೂರಿನಿಂದ ಬೆಳಗ್ಗೆ ಹೆಲಿಕಾಫ್ಟರ್‌ನಲ್ಲಿ ಹೊರಟ ಸಿಎಂ ಬೊಮ್ಮಾಯಿ, ಸಚಿವ ಅಶ್ವತ್ಥನಾರಾಯಣ ಅವರ ಜತೆಗೇ ನಟ ಯಶ್ ತೆರಳಿದ್ದಾರೆ.
ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ಕಾಲೇಜು ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಸ್ಕೂಲ್ ಆಫ್ ಇಂಜನಿಯರಿಂಗ್ ಕಾಲೇಜು ತಂತ್ರಜ್ಞಾನ ಭವನದ ಕಟ್ಟಡ, ಕೋರ್ಸ್‌ಗಳು ಹಾಗೂ ವಿದ್ಯಾರ್ಥಿನಿಲಯ, ವಿಶ್ವವಿದ್ಯಾನಿಲಯದ ಫಾರ್ಮಸಿ ಕಾಲೇಜು ಕಟ್ಟಡ, ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸುವರ್ಣ ಮಹೋತ್ಸವ ಕಟ್ಟಡ, ಭೂಗೋಳಶಾಸ್ತ್ರ ಮತ್ತು ಭೂವಿಜ್ಞಾನ ವಿಭಾಗಗಳ ವಿಸ್ತರಿಸಿದ ಮೊದಲನೇ ಮಹಡಿ ಕಟ್ಟಡ, ಗಣಕ ವಿಜ್ಞಾನ ಅಧ್ಯಯನ ವಿಭಾಗದ ನವೀಕೃತ ಸಭಾಂಗಣ ಉದ್ಘಾಟಿಸಲಿದ್ದಾರೆ.
ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಮಿಥಿಕ್ ಸೊಸೈಟಿ ಕಾರ್ಯಕ್ರಮ ಮತ್ತು ಗ್ರಹನಿಧಿ ಕೃತಿ ಬಿಡುಗಡೆ ಕಾರ್ಯಕ್ರಮ, ಶ್ರೀ ಬಸವೇಶ್ವರ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಕಟ್ಟಡ ಉದ್ಘಾಟನೆ, ವಿಶ್ವಕೋಶ 8 ಮತ್ತು 9ನೇ ಸಂಪುಟ ಅನಾವರಣ, ಸೆಂಟರ್ ಆಫ್ ಎಕ್ಸಲೆನ್ಸ್ (COE) – SAP, IBM and Esri (ವೃತ್ತಿ ಆಧಾರಿತ ಮತ್ತು ಕೌಶಲ್ಯ ಅಭಿವೃದ್ದಿ ಕೋರ್ಸುಗಳು) ಕಟ್ಟಡ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಸಿಎಂ ಭಾಗವಹಿಸಲಿದ್ದಾರೆ.
ಇದನ್ನೂ ಓದಿ | ಸಿಎಂ ಬೊಮ್ಮಾಯಿ ಸ್ಥಾನಪಲ್ಲಟ ಆಗದು ಎನ್ನುವುದಕ್ಕೆ ಇಲ್ಲಿವೆ ಒಂದು ಡಜನ್ ಕಾರಣಗಳು!