Site icon Vistara News

Deer Attacked : ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆ ನಾಯಿಗಳ ದಾಳಿಗೆ ಬಲಿ

Deer attacked in Mysore

ಮೈಸೂರು: ರಾಜ್ಯದಲ್ಲಿ ನಾನಾ ಕಡೆ ಮನುಷ್ಯ ಮತ್ತು ಕಾಡು ಪ್ರಾಣಿಗಳ ಸಂಘರ್ಷ (Human Animal Conflict) ಜೋರಾಗಿದೆ. ಬಲಿಷ್ಠ ಪ್ರಾಣಿಗಳಾದ ಆನೆ, ಚಿರತೆಗಳು ಮನುಷ್ಯರ ಮೇಲೆ ಮತ್ತು ಕೃಷಿ ಮೇಲೆ ದಾಳಿ ಮಾಡುತ್ತಿವೆ. ಈ ನಡುವೆ ಸದಾ ಭಯದಿಂದಲೇ ಬದುಕುವ ಜಿಂಕೆಯೊಂದು ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದು ಪ್ರಾಣ ಕಳೆದುಕೊಂಡಿದೆ (Deer Attacked).

ಹೌದು, ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯೊಂದು ನಾಯಿಗಳ ದಾಳಿಗೆ ಬಲಿಯಾದ ಘಟನೆ (Deer dead) ಮೈಸೂರು ಜಿಲ್ಲೆ (Mysore News) ನಂಜನಗೂಡು ತಾಲೂಕಿನ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.

ಸುಮಾರು ಎರಡುವರೆ ವರ್ಷದ ಹೆಣ್ಣು ಜಿಂಕೆ ಕಾಡಿನ ಭಾಗದಿಂದ ನಾಡಿಕೆ ಬಂದಿತ್ತು. ಆಗ ಊರಿನ ನಾಯಿಗಳು ಸೇರಿ ಅದರ ಮೇಲೆ ದಾಳಿ ಮಾಡಿವೆ. ಜಿಂಕೆಯ ಕತ್ತು, ತೊಡೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿರುವ ನಾಯಿಗಳು ಅಂತಿಮವಾಗಿ ಜೀವವನ್ನೇ ಬಲಿ ಪಡೆದಿವೆ.

ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಧಾವಿಸಿ ನಾಯಿಗಳನ್ನು ಓಡಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ನಿತಿನ್ ಕುಮಾರ್, ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : Elephant Attack: ʼಕರ್ನಾಟಕದ ಪರಿಹಾರ ಬೇಕಿಲ್ಲ…ʼ ಕಾಡಾನೆ ಬಲಿ ಪಡೆದ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂ. ಕೊಟ್ಟ ಕೇರಳ ಸರ್ಕಾರ

ಕೋಲಾರದಲ್ಲಿ ಕೃಷ್ಣ ಮೃಗವನ್ನು ಬೇಟೆಯಾಡಿದ್ದ ನಾಯಿಗಳು

ಕಳೆದ ಡಿಸೆಂಬರ್‌ ತಿಂಗಳಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಕೃಷ್ಣ ಮೃಗವನ್ನು (BlackBuck) ಬೀದಿ ನಾಯಿಗಳು ದಾಳಿ ನಡೆಸಿ ಬೇಟೆಯಾಡಿದ ಘಟನೆ ಕೋಲಾರದಲ್ಲಿ ನಡೆದಿತ್ತು.

ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ರೈತರ ಹೊಲಗಳ ಬಳಿ ಕೃಷ್ಣಮೃಗ ಓಡಾಡುವಾಗ ಬೀದಿ ನಾಯಿಗಳು ದಾಳಿ ಮಾಡಿವೆ. ಬೀದಿ ನಾಯಿಗಳಿಂದ ತಪ್ಪಿಸಿಕೊಂಡು ಹೋಗಲು ಆಗದೆ ಸುಮಾರು ನಾಲ್ಕು ವರ್ಷದ ಕೃಷ್ಣಮೃಗ ಮೃತಪಟ್ಟಿದೆ.

ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಕೃಷ್ಣ ಮೃಗದ ದೇಹವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೃಷ್ಣಮೃಗವನ್ನು ಅಟ್ಟಾಡಿಸಿದ ಬೀದಿ ನಾಯಿಗಳು
ಬೀದರ್‌ನ ಕಲ್ಯಾಣ ಪಟ್ಟಣದಲ್ಲಿಯೂ ಕೃಷ್ಣ ಮೃಗದ ಮೇಲೆ ಬೀದಿ ನಾಯಿಗಳು ದಾಳಿ ನಡೆಸಲು ಮುಂದಾದ ಘಟನೆ ಇತ್ತೀಚೆಗೆ ನಡೆದಿತ್ತು. ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಕೃಷ್ಣ ಮೃಗ ಖಾಸಗಿ ಆಸ್ಪತ್ರೆಗೆ ನುಗ್ಗಿತ್ತು. ಕಲ್ಯಾಣ ಪಟ್ಟಣದ ಶಿವಪೂರ್ ಕಾಲೊನಿಯಲ್ಲಿ ಜಿಂಕೆ ತಿರುಗಾಡಿದ್ದು, ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಸಣ್ಣ ಪುಟ್ಟ ಗಾಯಗೊಂಡಿದ್ದ ಕೃಷ್ಣಾ ಮೃಗಕ್ಕೆ ಚಿಕಿತ್ಸೆ ನೀಡಿ, ಬಳಿಕ ಕಾಡಿಗೆ ಬಿಟ್ಟಿದ್ದರು.

Exit mobile version