Site icon Vistara News

Farmer Death : ಸಾಲದ ಶೂಲಕ್ಕೆ ಮನನೊಂದ ರೈತ; ಕೆರೆಗೆ ಹಾರಿ ಆತ್ಮಹತ್ಯೆ

Farmer Death

ಮೈಸೂರು: ಬೆಳೆ ಸಾಲ ತೀರಿಸಲಾಗದೆ ಕೆರೆಗೆ ಹಾರಿ ರೈತರೊಬ್ಬರು (Farmer Death) ಆತ್ಮಹತ್ಯೆ (Self Harming) ಮಾಡಿಕೊಂಡು ಮೃತಪಟ್ಟಿದ್ದಾರೆ. ಮೈಸೂರು (Mysuru News) ಜಿಲ್ಲೆಯ ಹುಣಸೂರು ತಾಲೂಕಿನ ಮನುಗನಹಳ್ಳಿಯಲ್ಲಿ ಘಟನೆ ನಡೆದಿದೆ. ಅಣ್ಣೇಗೌಡ (57) ಮೃತ ದುರ್ದೈವಿ.

ಅಣ್ಣೇಗೌಡ ಮೂರು ಎಕರೆಯಲ್ಲಿ ತಂಬಾಕು ಮತ್ತಿತರೆ ಬೆಳೆ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗಾಗಿ ಪಂಚವಳ್ಳಿಯ ಐಒಬಿ ಬ್ಯಾಂಕ್‌ನಲ್ಲಿ 10 ಲಕ್ಷ ರೂ. ಸಾಲ ಪಡೆದಿದ್ದರು. ಖಾಸಗಿ ಬ್ಯಾಂಕ್‌ನಲ್ಲಿ 14 ಲಕ್ಷ ರೂ. ಹಾಗೂ 5 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದರು. ಬೆಳೆ ಕೈ ಹತ್ತದ ಕಾರಣ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆರೆಯಿಂದ ರೈತನ ಮೃತದೇಹವನ್ನು ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harming : ಒಂದೇ ದಿನ ನಾಲ್ವರು ಗೃಹಿಣಿಯರ ಆತ್ಮಹತ್ಯೆ; ಅವರಲ್ಲಿಬ್ಬರು ಯೋಧರ ಪತ್ನಿಯರು

6 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವ ವಿವಾಹಿತೆ ಶವವಾಗಿ ಪತ್ತೆ; ಕೊಂದವರು ಯಾರು?

ಮೈಸೂರು: ಮದುವೆಯಾದ ಆರೇ ತಿಂಗಳಿಗೆ ನವವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ (Self Harming) ಪತ್ತೆಯಾಗಿದ್ದಾಳೆ. ಮೈಸೂರಿನ ಮಾನಸಿ ನಗರ ಬಿಎಸ್ಎನ್ಎಲ್ ಲೇಔಟ್‌ನಲ್ಲಿ ಘಟನೆ ನಡೆದಿದೆ. ಸೌಮ್ಯಾಶ್ರೀ (27) ಮೃತ ದುರ್ದೈವಿ.

ಆರು ತಿಂಗಳ ಹಿಂದೆ ಮೈಸೂರಿನ ಮಂಜುನಾಥ್ ಎಂಬುವರ ಜತೆ ಸೌಮ್ಯಾಶ್ರೀ ಮದುವೆಯಾಗಿದ್ದರು. ಸೌಮ್ಯಾಶ್ರೀ ತಂದೆ ಶ್ರೀಧರ್ ಬೆಂಗಳೂರಿನಿಂದ ಮೈಸೂರಿಗೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ಸೌಮ್ಯಾಳ ನಡತೆ ಮೇಲೆ ಪತಿ ಮಂಜುನಾಥ್ ಅನುಮಾನ ಪಡುತ್ತಿದ್ದ ಎನ್ನಲಾಗಿದೆ.

ಈ ಕುರಿತು ಸೌಮ್ಯಾ ಹೆತ್ತವರಿಗೆ ಮಾಹಿತಿ ನೀಡಿದ್ದಳು. ಹೀಗಾಗಿ ಮಂಜುನಾಥ್ ಹಾಗೂ ಅವರ ಮನೆಯವರೆಲ್ಲ ಸೇರಿ ಸೌಮ್ಯಾಳನ್ನ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಮಗಳ ಶವ ಕಂಡು ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸೌಮ್ಯಳ ಶವ ಕಂಡು ಪೋಷಕರ ಆಕ್ರಂದನ

ಸ್ಥಳಕ್ಕೆ ಮೈಸೂರಿನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೈಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version