ಮೈಸೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆಯ (Gruha lakshmi scheme) ಚಾಲನೆಯ ಕ್ಷಣಗಳು ಹತ್ತಿರವಾಗುತ್ತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ (Mysore Maharaja College maidan) ಲಕ್ಷಾಂತರ ಜನರು ಬಂದು ಸೇರುತ್ತಿದ್ದಾರೆ. ಪ್ರತಿ ಕುಟುಂಬದ ಯಜಮಾನಿಗೆ 2000 ರೂ.ಯನ್ನು ನೇರವಾಗಿ ಖಾತೆಗೆ ಜಮಾ ಮಾಡುವ ಈ ಯೋಜನೆಗೆ ಕಾಂಗ್ರೆಸ್ನ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯ ಉದ್ಘಾಟನೆಗೆ ಸಾಕ್ಷಿ ನುಡಿಯುತ್ತಿರುವ ಮೈಸೂರು ಪಿಂಕ್ ಬಣ್ಣಕ್ಕೆ ತಿರುಗಿದೆ. ಈ ಲಿಂಕ್ ಮೂಲಕ ನೀವು ಕಾರ್ಯಕ್ರಮದ ಪೂರ್ಣ ಕವರೇಜ್ನ್ನು ನಿರಂತರವಾಗಿ ನೋಡಬಹುದು.