ಮೈಸೂರು: ಪತಿಯ ಅನೈತಿಕ ಸಂಬಂಧ (Illicit Relationship) ಪ್ರಶ್ನಿಸಿದ ಪತ್ನಿಗೆ ಮನೆಯಿಂದಲೇ (Man harasses wife) ಗೇಟ್ ಪಾಸ್ ನೀಡಿದ ಘಟನೆ ಹುಣಸೂರು ತಾಲೂಕಿನ (Mysore News) ಹಂದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೀಗ ಮಹಿಳೆ ತನ್ನ ಗಂಡ, ಗಂಡ, ಅತ್ತೆ, ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ (Dowry Harassment) ದೂರು ದಾಖಲಿಸಿದ್ದಾರೆ.
ಹುಣಸೂರು ತಾಲೂಕಿನ ಹಂದನಹಳ್ಳಿಯ ಸಂಪತ್ ಕುಮಾರ್ ಎಂಬವರ ಪತ್ನಿ ಛಾಯಾ ದೇವಿ ಅವರೇ ಈ ರೀತಿ ಸಂಕಷ್ಟಕ್ಕೆ ಒಳಗಾದವರು. ಸಂಪತ್ ಕುಮಾರ್‌ಗೆ ಬೇರೆ ಮಹಿಳೆಯ ಜತೆಗೆ ಅನೈತಿಕ ಸಂಬಂಧವಿದೆ ಎನ್ನಲಾಗಿದೆ. ಪತ್ನಿ ಮನೆಯಲ್ಲಿರುವಾಗಲೇ ಅಕ್ರಮ ಸಂಬಂಧ ಬೆಳೆಸಿದ್ದ ಆತ ಪತ್ನಿ ಪ್ರಶ್ನಿಸಿದಾಗ ತಿರುಗಬಿದ್ದಿದ್ದಾನೆ ಎನ್ನಲಾಗಿದೆ. ಅದರ ಜತೆಗೆ ನೀನೇನು ವರಕ್ಷಿಣೆ ಕೊಟ್ಟಿದ್ದೀಯಾ? ತೆಗೆದುಕೊಂಡು ಬಾ ಮನೆಯಿಂದ ಎಂದು ಬೆದರಿಕೆ ಹಾಕಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಪರಸ್ತ್ರೀ ಸಂಗ ಬೆಳೆಸಿದ್ದನ್ನು ದುರಹಂಕಾರದಿಂದಲೇ ಒಪ್ಪಿಕೊಂಡಿರುವ ಆತ ನಿನಗೆ ಮನಸ್ಸಿಲ್ಲ ಅಂದರೆ ಹೋಗು ಎಂದು ಆಕೆಗೇ ಗುಡ್ ಬೈ ಹೇಳಿದ್ದಾನೆ. ಮನೆಯಿಂದ ಗೇಟ್‌ಪಾಸ್ ಕೊಟ್ಟಿದ್ದಾನೆ.
ಹುಣಸೂರು ತಾಲೂಕು ಹಂದನಹಳ್ಳಿ ಗ್ರಾಮದ ಛಾಯಾದೇವಿಯನ್ನು 2015ರಲ್ಲಿ ಎಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸಂಪತ್ ಕುಮಾರ್‌ಗೆ ಮದುವೆ ಮಾಡಿ ಕೊಡಲಾಗಿತ್ತು. ಛಾಯಾದೇವಿ ಪೋಷಕರು ನಗದು, ಚಿನ್ನಾಭರಣ ನೀಡಿ ಮದುವೆ ಮಾಡಿದ್ದರು.
ಪ್ರಾರಂಭದಲ್ಲಿ ಛಾಯಾದೇವಿ ಮತ್ತು ಸಂಪತ್‌ಕುಮಾರ್ ಅನ್ಯೋನ್ಯತೆಯಿಂದ ಇದ್ದರು. ನಂತರದ ದಿನಗಳಲ್ಲಿ ಸಂಪತ್ ಕುಮಾರ್ ವರದಕ್ಷಿಣೆಗಾಗಿ ಕಿರುಕುಳ ಕೊಡಲು ಆರಂಭಿಸಿದ ಎನ್ನಲಾಗಿದೆ. 2 ಲಕ್ಷ ರೂ. ನಗದು, ಬ್ರೇಸ್ ಲೈಟ್ ಕೊಡಬೇಕೆಂದು ಪಟ್ಟು ಹಿಡಿದು ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ : Illicit relationship : Live in ಇದ್ದಾಗಲೇ ಮತ್ತೊಬ್ಬನ ಜತೆ Love in! ಸಂಗಾತಿ ಸೂಸೈಡ್
ಈ ನಡುವೆ ಹಂದನಹಳ್ಳಿಯಲ್ಲಿ ಹಿರಿಯರ ಸಮ್ಮುಖದಲ್ಲಿ ಪಂಚಾಯ್ತಿ ನಡೆದಿದೆ. ಹಿರಿಯರ ಸಮ್ಮುಖದಲ್ಲಿ ಒಪ್ಪಿಗೆ ಸೂಚಿಸಿ ಪತ್ನಿಯನ್ನು ತನ್ನ ಮನೆಗೆ ಕರೆದೊಯ್ದಿದ್ದ ಸಂಪತ್ ಕುಮಾರ್. ಆದರೆ, ಈ ನಡುವೆ ಸಂಪತ್ ಕುಮಾರ್ ಮತ್ತೊಂದು ಹೆಣ್ಣಿನ ಜತೆ ಸಂಪರ್ಕ ಹೊಂದಿರುವುದು ಛಾಯಾದೇವಿಗೆ ಗೊತ್ತಾಗಿದೆ.
ಇದನ್ನು ಪ್ರಶ್ನಿಸಿದ ಛಾಯಾದೇವಿಯನ್ನು ಹಿಗ್ಗಾಮುಗ್ಗಾ ಥಳಿಸಿ ಮನೆಯಿಂದ ಹೊರಹಾಕಿದ್ದಾನೆ ಸಂಪತ್ ಕುಮಾರ್. ಪತಿಯ ವರದಕ್ಷಿಣೆ ದಾಹ ಮತ್ತು ಅಕ್ರಮ ಸಂಬಂಧಕ್ಕೆ ಹೆತ್ತವರಿಂದಲೂ ಬೆಂಬಲ ಸಿಕ್ಕಿದೆ ಎನ್ನಲಾಗಿದೆ. ಅನೈತಿಕ ಸಂಬಂಧದಿಂದ ನನ್ನನ್ನು ನಿರ್ಲಕ್ಷಿಸಿದ್ದಾನೆಂದು ಆರೋಪ ಛಾಯಾದೇವಿ ಆರೋಪ ಮಾಡಿದ್ದಾರೆ.
ಈ ನಡುವೆ ಛಾಯಾದೇವಿ ಅವರು ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು ಮಾಡಿದ್ದಾರೆ. ಪತಿ ಸಂಪತ್ ಕುಮಾರ್, ಅತ್ತೆ ಮಹದೇವಮ್ಮ, ಮಾವ ವೆಂಕಟರಾಜು ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.