ಮೈಸೂರು: ಮೈಸೂರಿನಿಂದ ಬಂಡಿಪುರಕ್ಕೆ ಇಂದು ಬೆಳಗ್ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ
ಬೆಳಗಿನ ಉಪಹಾರಕ್ಕೆ ನಾನಾ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.
ಮೋದಿ ಉಪಹಾರದ ಮೆನು ಇಂತಿದೆ:
ಹಣ್ಣಗಳು, ಮಲ್ಲಿಗೆ ಇಡ್ಲಿ, ಕಾಂಚಿಪುರಂ ಇಡ್ಲಿ, ಸಾಂಬರ್, ಕಡಲೇಬೀಜ ಚಟ್ನಿ, ಅವಲಕ್ಕಿ, ವಡೆ, ಮೈಸೂರು ಬೋಂಡಾ, ಶಾವಿಗೆ ಬಾತ್, ಪೊಂಗಲ್, ಪ್ಲೈನ್ ದೋಸೆ, ಮಸಾಲೆ ದೋಸೆ, ಮೈಸೂರು ಮಸಾಲೆ ದೋಸೆ, ರವಾ ದೋಸೆ, ಶುಂಠಿ ಟೀ.
ಮೋದಿ ತೆರಳುವ ಮಾರ್ಗದಲ್ಲಿ ಸಾರ್ವಜನಿಕರಿಗಿಲ್ಲ ಪ್ರವೇಶ:
ಪ್ರಧಾನಿ ನರೇಂದ್ರ ಮೋದಿ ಅವರು ಬಂಡಿಪುರ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮೇಲುಕಾಮನಹಳ್ಳಿ ಹೆಲಿಪ್ಯಾಡ್ ನಿಂದ ಬಂಡಿಪುರ ಚೆಕ್ ಪೋಸ್ಟ್ ವರೆಗೆ ರಸ್ತೆಯ ಎರಡೂ ಕಡೆ ಬ್ಯಾರಿಕೇಡ್ ಹಾಕಲಾಗಿದೆ.
ಅನಾವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ಸ್ಥಳೀಯರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಮೋದಿ ಭೇಟಿ ಹಿನ್ನೆಲೆ ದೂರದ ಊರಿನ ಸಂಬಂಧಿಕರನ್ನೂ ಮನೆಗಳಿಗೆ ಕರೆಸಬೇಡಿ ಎಂದಿದ್ದಾರೆ. ಬೆಳಗ್ಗೆ 7 ರಿಂದ 8ರ ವರೆಗೆ ಅನಾವಶ್ಯಕವಾಗಿ ಮನೆಯಿಂದ ಹೊರಬರಬೇಡಿ ಎಂಬ ಕಟ್ಟಾಜ್ಞೆ ಹೊರಡಿಸಲಾಗಿದೆ.
ಬೆಳಗ್ಗೆ 6.30ಕ್ಕೆ ಹೋಟೆಲ್‌ನಿಂದ ತೆರಳಿದ ಮೋದಿ.
ಮೈಸೂರು ನಗರದಿಂದ ರಸ್ತೆ ಮಾರ್ಗವಾಗಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಭಾನುವಾರ ಬೆಳಗ್ಗೆ ಪಯಣ ಬೆಳೆಸಿದರು. ಸುಮಾರು 9 ಕಿಲೋಮೀಟರ್ ಸಂಚಾರ ಇದಾಗಿದೆ. ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮೇಲುಕಾಮನಹಳ್ಳಿಯತ್ತ ಪಯಣ ಬೆಳೆಸಲಿದ್ದಾರೆ.