Site icon Vistara News

Modi in Karnataka : ಮೈಸೂರಿನಲ್ಲಿ ವೀಳ್ಯದೆಲೆ, ಶ್ರೀಗಂಧ, ಸಿಲ್ಕ್‌ನೊಂದಿಗೆ ಪ್ರಧಾನಿ ಸ್ವಾಗತಕ್ಕೆ ಸಿದ್ಧತೆ

Narendra Modi To Meet NDA Leaders

ನರೇಂದ್ರ ಮೋದಿ

ಮೈಸೂರು: ವಿಧಾನ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ನರೇಂದ್ರ ಮೋದಿಯವರಿಂದ ಪ್ರಚಾರಕ್ಕೆ ಭರದ ಸಿದ್ಧತೆ ನಡೆದಿದೆ. ಐದು ಕ್ಷೇತ್ರಗಳ ಮತದಾರರ ( Modi in Karnataka) ಮನ ಗೆಲ್ಲಲು ಮೈಸೂರಿನಲ್ಲಿ ಪ್ರಧಾನಿಯವರ ರೋಡ್‌ ಶೋ ನಡೆಯಲಿದೆ.
ಮೈಸೂರಿನ ಗನ್ ಹೌಸ್ ಸರ್ಕಲ್‌ನಿಂದ ಮೋದಿಯವರು ರೋಡ್ ಶೋ ಆರಂಭಿಸಲಿದ್ದಾರೆ. ಮುಡಾ, ರಾಮಸ್ವಾಮಿ, ಚಾಮರಾಜ ಜೋಡಿ ರಸ್ತೆ ಮೂಲಕ ವಿದ್ಯಾಪೀಠದ ಬಳಿ ಶೋ ನಡೆಯಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಸಾಂಪ್ರದಾಯಿಕ ವಿಶೇಷವಾದ ಮೈಸೂರು ವೀಳ್ಯದೆಲೆ , ಶ್ರೀಗಂಧ, ಮೈಸೂರ್ ಸಿಲ್ಕ್ ಪದಾರ್ಥಗಳನ್ನು ನೀಡಿ ಪ್ರಧಾನಿಗೆ ಸ್ವಾಗತ ಕೋರಲಾಗುವುದು.
ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿದ್ಯಾಪೀಠದಿಂದ ರ‍್ಯಾಲಿ ಆರಂಭವಾಗಲಿದೆ. ಸಂಸ್ಕೃತ ಪಾಠ ಶಾಲೆ ಸರ್ಕಲ್, ಕಾಪೋರೇಷನ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಕೆ ಆರ್ ಸರ್ಕಲ್, ಆಯುರ್ವೇದ ಸರ್ಕಲ್, ಹಳೇ ಆರ್ ಎಂಸಿ, ಹೈವೆ ಸರ್ಕಲ್ ಮಿಲೀನಿಯಂ (ಎಲ್‌ಐಸಿ) ಸರ್ಕಲ್ ವರೆಗೆ ರ‍್ಯಾಲಿ ನಡೆಯಲಿದೆ.

ಹಿರಿಯ ನಾಗರಿಕರಿಗೆ 5 ಕಡೆ ಕೂರಲು ಬೇಕಾದ ವ್ಯವಸ್ಥೆ:
ಕಾಡಾ ಕಚೇರಿ ಆವರಣ, ಕಾರ್ಪೊರೇಷನ್ ಆವರಣ, ದೇವರಾಜ ಮಾರುಕಟ್ಟೆ, ಹಳೆ ಆರ್‌.ಎಂ.ಸಿ ಸರ್ಕಲ್, ಹೈವೆ ಸರ್ಕಲ್ ಸೇರಿದಂತೆ 5 ಕಡೆ ಹಿರಿಯ ನಾಗರಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಒಟ್ಟು 5 ಕಿ.ಮೀ ರೋಡ್‌ ಶೋ ಒಂದು ಗಂಟೆಗಳ ಕಾಲ ನಡೆಯಲಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಮೋದಿ ರೋಡ್ ಶೋ ಬಲ ತುಂಬಲಿದೆ.
ಮೈಸೂರು ನಗರದ ಮೂರು ಕ್ಷೇತ್ರದಲ್ಲಿ ಮೋದಿ ಸಂಚರಿಸಲಿದ್ದಾರೆ. ಐದು ಕ್ಷೇತ್ರದ ಜನ ನೇರವಾಗಿ ಭಾಗವಹಿಸಲಿದ್ದಾರೆ. ಮೈಸೂರಿನ 11 ಕ್ಷೇತ್ರಗಳ ಮತದಾರರ ಮೇಲೆ ಪ್ರಭಾವ ನಿರೀಕ್ಷಿಸಲಾಗಿದೆ.
11 ಕ್ಷೇತ್ರಗಳ ಪೈಕಿ‌ 6 ಕ್ಷೇತ್ರಗಳಲ್ಲಿ ಹೊಸ ಮುಖ ತಂದು ಬಿಜೆಪಿ ಪ್ರಯೋಗ ನಡೆಸಿದೆ. 11 ಕ್ಷೇತ್ರಗಳ ಪೈಕಿ ಕನಿಷ್ಟ 5 ಕ್ಷೇತ್ರ
ಸಾಂಸ್ಕೃತಿಕ ನಗರಿ ವಾಹನ ಸವಾರರಿಗೆ ತಟ್ಟಲಿದೆ ಟ್ರಾಫಿಕ್ ಬಿಸಿ:
ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಮೋದಿ ರೋಡ್ ಶೋ ನಡೆಯಲಿದೆ. ರೋಡ್ ಶೋ ಮಾರ್ಗಗಳಲ್ಲಿ ವಾಹನ ಸವಾರರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ಮೈಸೂರು ನಗರ ಪೊಲೀಸ್ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ.

ಯಾವ್ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ…?

Exit mobile version