Site icon Vistara News

MP Pratap Simha : ಮಹಾರಾಜರ ಬಗ್ಗೆ ಲಘುವಾಗಿ ಮಾತಾಡ್ಬೇಡಿ; ಪ್ರತಾಪ್‌ಗೆ ವಿರೋಧಿ ಬಣದ ಎಚ್ಚರಿಕೆ

Pratapsimha SA Ramadas Shrivatsa L Nagendra

ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (MP Pratap Simha) ಅವರಿಗೆ ಲೋಕಸಭಾ ಚುನಾವಣಾ (Lokasabha Election 2024) ಟಿಕೆಟ್‌ ಮಿಸ್‌ ಆಗಿದೆ ಎಂಬುದು ಬಹುತೇಕ ಖಾತ್ರಿಯಾಗುತ್ತಿದ್ದಂತೆಯೇ ಅವರ ವಿರೋಧಿ ಬಣ ಕ್ರಿಯಾಶೀಲವಾಗಿದೆ. ಮೈಸೂರಿನಲ್ಲಿ ಪ್ರತಾಪ್‌ ಸಿಂಹ ಅವರು ಒಂದು ಕಡೆಯಾದರೆ ಅವರ ವಿರೋಧಿ ಬಣದಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್ (Former Minister SA Ramdas), ನಗರಾಧ್ಯಕ್ಷ ಎಲ್.ನಾಗೇಂದ್ರ (Former MLA L Nagendra), ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ನರಸಿಂಹರಾಜ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸಂದೇಶ್‌ಸ್ವಾಮಿ, ಶಾಸಕ ಟಿ.ಎಸ್.ಶ್ರೀವತ್ಸ (MLA TS Shrivatsa) ಅವರು ಗುರುತಿಸಿಕೊಂಡಿದ್ದಾರೆ. ಟಿಕೆಟ್‌ ಮಿಸ್‌ ಆದ ಸಂಗತಿ ಬಯಲಾಗುತ್ತಿದ್ದಂತೆಯೇ ಪ್ರತಾಪ್‌ ಸಿಂಹ ಅವರು ಸಂಭಾವ್ಯ ಬಿಜೆಪಿ ಅಭ್ಯರ್ಥಿ ಮೈಸೂರು ಮಹಾರಾಜರಾದ ಯದುವೀರ್‌ ಒಡೆಯರ್‌ (Yaduvir Odeyar) ವಿರು‌ದ್ಧ ಕೆಲವೊಂದು ಮಾತುಗಳ ಮೂಲಕ ಟಾಂಗ್‌ ಕೊಟ್ಟಿದ್ದರು. ಅದನ್ನು ಪ್ರತಾಪ್‌ ವಿರೋಧಿ ಬಣ (Team Against Pratap Simha) ಖಂಡಿಸಿದ್ದು, ಅವರ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.

ಈ ಎಲ್ಲ ನಾಯಕರು ಮಂಗಳವಾರ ಮಾಧ್ಯಮ ಗೋಷ್ಠಿಯನ್ನು ಆಯೋಜಿಸಿ ಮಾತನಾಡಿದರು.

ಬಿಜೆಪಿ ನಗರಾಧ್ಯಕ್ಷ ಎಲ್‌. ನಾಗೇಂದ್ರ ಹೇಳಿದ್ದು ಇಷ್ಟು..

  1. ನಾವ್ಯಾರು ಕೂಡ ಟಿಕೆಟ್ ಕೊಡಲಿಕ್ಕೆ ಸಾಧ್ಯವಿಲ್ಲ. ಟಿಕೆಟ್ ನೀಡುವ ಶಕ್ತಿ ನಮ್ಮಲಿಲ್ಲ. ಕಾರ್ಯಕರ್ತರು ಯಾರು ಕೂಡ ಗೊಂದಲಕ್ಕೆ ಒಳಗಾಗಬಾರದು.
  2. ಪ್ರತಾಪ್ ಸಿಂಹ ಮೊದಲ ಬಾರಿ ಚುನಾವಣೆಗೆ ಬಂದಾಗ ಉತ್ತಮ ಗೆಲುವು ಕೊಟ್ಟಿದ್ದೇವೆ. ಚುನಾವಣೆ ಬಳಿಕ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ.
  3. ಅದೇ ರೀತಿ ಮೈಸೂರು ಮಹಾರಾಜರ ಕೊಡುಗೆ ದೊಡ್ಡದು. ಅವರ ಬಗ್ಗೆ ಯಾರೇ ಆದರು ಕೂಡ ಲಘುವಾಗಿ ಮಾತನಾಡಬಾರದು.
  4. ಅಭ್ಯರ್ಥಿ ಘೋಷಣೆ ಮಾಡುವ ಶಕ್ತಿ ನಮಗಿಲ್ಲ. ನಾವೆಲ್ಲರೂ ಪಕ್ಷದ ಸಿಪಾಯಿಗಳು. ಯಾರು ಪಕ್ಷದ ಅಭ್ಯರ್ಥಿಯಾಗ್ತಾರೆ ಅವರನ್ನ ಗೆಲ್ಲಿಸಿಕೊಂಡು ಬರುವುದಷ್ಟೇ ನಮ್ಮ ಕೆಲಸ.
  5. ಡಾ. ಮಂಜುನಾಥ್, ಅಪ್ಪಚ್ಚು ರಂಜನ್ ಸೇರಿದಂತೆ ಹಲವು ಟಿಕೆಟ್ ಆಕಾಂಕ್ಷಿಗಳಿದ್ದರು. ನಾವು ಅದನ್ನು ಈಶ್ವರಪ್ಪನವರು ಬಂದಾಗ ಮಾಹಿತಿ ನೀಡಿದ್ವಿ. ಅಭ್ಯರ್ಥಿ ಯಾರಾಗಬೇಕೆಂದು ಅಂದು ಅಭಿಪ್ರಾಯ ಸಂಗ್ರಹ ಮಾಡಿದ್ದರು. ಪ್ರತಿಯೊಬ್ಬರೂ ತಮ್ಮ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದನ್ನು ಹೈಕಮಾಂಡ್ ಗೆ ತಲುಪಿಸಿದ್ದಾರೆ. ಅದರ ಬಗ್ಗೆ ಮಾಹಿತಿ ನಮಗೆ ಮಾಹಿತಿ ಇರಲ್ಲ.
  6. ವಿಧಾನಸಭಾ ಚುನಾವಣೆಯಲ್ಲಿ ಸೋತವರು ಅವರ ನಡವಳಿಕೆಯಿಂದ ಸೋತಿರಬಹುದು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ನನ್ನ ಸೋಲಿಗೆ ನನ್ನ ನಡವಳಿಕೆ ಕಾರಣ ಅನ್ನೋದು ಅವರ ಅಭಿಪ್ರಾಯ. ನನ್ನ ನಡವಳಿಕೆಯಿಂದ ಪಕ್ಷಕ್ಕೆ ಯಾವುದೇ ರೀತಿಯ ಮುಜುಗರ ಆಗಿಲ್ಲ. ನನ್ನ ನಡವಳಿಕೆ ಸರಿಯಿಲ್ಲ ಎನ್ನುವುದಾದರೆ ನನಗೆ ನಗರಾಧ್ಯಕ್ಷ ಸ್ಥಾನ ನೀಡುತ್ತಿದ್ದರೇ?

ಇದನ್ನೂ ಓದಿ: MP Pratapsimha : ಯದುವೀರ್‌ಗೇ ಟಿಕೆಟ್‌ ಪಕ್ಕಾ; ಉಗ್ರಪ್ರತಾಪಿಯಂತೆ ಸಿಡಿದೆದ್ದ ಪ್ರತಾಪ್‌ಸಿಂಹ

ನನಗೂ ಟಿಕೆಟ್‌ ಮಿಸ್‌ ಆಗಿತ್ತು, ನಾನು ತಾಳ್ಮೆ ಕಳೆದುಕೊಳ್ಳಲಿಲ್ಲ: ಎಸ್‌.ಎ ರಾಮದಾಸ್‌

  1. ಕಳೆದ ವಿಧಾನಸಭಾ ಚುನಾವಣೆ ವೇಳೆ ನನಗೂ ಟಿಕೆಟ್ ಮಿಸ್ ಆಯ್ತು. ಆಗ ನಾನು ಪಕ್ಷದಲ್ಲೇ ಉಳಿದುಕೊಂಡು ಕೆಲಸ ಮಾಡಿದೆ.
  2. ಲೋಕಸಭಾ ಚುನಾವಣೆಗೆ ಸಂಬಂಧಿಸಿ ಕೇಂದ್ರದಲ್ಲಿ ಇದುವರೆಗೂ ಅಭ್ಯರ್ಥಿ ಯಾರೆಂಬುದು ಅಂತಿಮವಾಗಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಸುದ್ದಿಗೋಷ್ಠಿ ಕರೆದಿದ್ದೇವೆ.
  3. ಮೈಸೂರು ಅರಸರ ಕೊಡುಗೆಗಳ ಬಗ್ಗೆ ಅಪಾರ ಗೌರವವಿದೆ. ಯದುವೀರ್ ಒಡೆಯರ್ ಅವರು ಜನರ ಜೊತೆ ಬೆರಿತಾರ ಇಲ್ಲವಾ ಎಂಬುದನ್ನು ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ನಾವು ಅದರ ಬಗ್ಗೆ ಮಾತನಾಡುವುದು ಬೇಡ.
  4. ರಾಮದಾಸ್ ರವರು ಪಕ್ಷಕ್ಕಾಗಿ ಕೆಲಸ ಮಾಡಿದ್ದರು ಎಂದು ಪ್ರತಾಪ್ ಸಿಂಹ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವತ್ತಿಗೂ ನಮಗೆ ಪ್ರತಾಪ್ ಸಿಂಹ ಲೀಡರ್. ಅವರಿಗೆ ಗೌರವ ಕೊಟ್ಟೆ ಕೊಡುತ್ತೇವೆ. ಅವರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ.
  5. ನಾನು ಇನ್ನೊಬ್ಬರಿಗೆ ಪಾಠ ಮಾಡುವಷ್ಟು ದೊಡ್ಡವನಲ್ಲ. ನಾನು ಸೋತ ಬಳಿಕವೂ ಪಕ್ಷದ ಕೆಲಸ ಕಾರ್ಯಗಳನ್ನ ಮಾಡಿದ್ದೇನೆ ಎಂದಷ್ಟೇ ಹೇಳಬಲ್ಲೆ

ಪ್ರತಾಪ್‌ ನಮ್ಮ ಲೀಡರ್‌, ವಿಚಲಿತರಾಗಿ ಮಾತನಾಡಬಾರದು ಎಂದ ಶಾಸಕ ಶ್ರೀವತ್ಸ

  1. ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಇನ್ನೂ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಣೆ ಆಗಿಲ್ಲ. ಅವರು ನಮ್ಮ ಲೀಡರ್, ಹತ್ತು ವರ್ಷ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ಸಿಗಬಹುದು.
  2. ಒಂದು ವೇಳೆ ಬೇರೆಯವರಿಗೆ ಸಿಕ್ಕರೂ ಪ್ರತಾಪ್ ಸಿಂಹ ಕೂಡ ಕೆಲಸ ಮಾಡುತ್ತಾರೆ.
  3. ಪ್ರತಾಪ್‌ ಸಿಂಹ ಅವರು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗೋದಕ್ಕಿಂತ, ನಮ್ಮ ಕಾರ್ಯಕರ್ತರು ಮತ್ತು ಪಕ್ಷಕ್ಕೆ ಮುಜುಗರ ಆಗುತ್ತದೆ. ವಿಚಲಿತರಾಗಿ ಪ್ರತಾಪ್ ಸಿಂಹ ಮಾತನಾಡಬಾರದು.
Exit mobile version