Site icon Vistara News

MP Pratap Simha : 7 ತಿಂಗಳ ಹಿಂದೆಯೇ ಪ್ರತಾಪ್‌ಸಿಂಹ ಹೆಸರು ರಿಜೆಕ್ಟ್‌; ಎಲ್ಲವೂ ಹೈಕಮಾಂಡ್‌ ಮಹಿಮೆ

MP Pratap Simha Narendra Modi 11

ಮೈಸೂರು: NEXT…!: ಏಳು ತಿಂಗಳ ಹಿಂದೆ ನಡೆದ ಕೇಂದ್ರ ಸಮಿತಿ ಸಭೆಯಲ್ಲಿ (Central BJP Meeting) ರಾಜ್ಯದ ನಾಯಕರು ಮೈಸೂರು ಲೋಕಸಭಾ ಕ್ಷೇತ್ರಕ್ಕೆ (Mysore Lok Sabha Constituency) ಮುಂದಿನ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್‌ ಸಿಂಹ (MP Pratap Simha) ಅವರ ಹೆಸರನ್ನು ಹೇಳುತ್ತಿದ್ದಂತೆಯೇ ವರಿಷ್ಠರು (BJP High Command) ಆಡಿದ ಒಂದೇ ಒಂದು ಶಬ್ದ ಇದು.

ಅಲ್ಲಿಗೆ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ತಪ್ಪುವುದರಲ್ಲಿ ರಾಜ್ಯದ ನಾಯಕರ ಪಾಲು ಇಲ್ಲ. ಬದಲಾಗಿ ಕೇಂದ್ರ ನಾಯಕರು ಏಳು ತಿಂಗಳ ಹಿಂದೆಯೇ ಅವರ ಹೆಸರನ್ನು ರಿಜೆಕ್ಟ್‌ ಮಾಡಿದ್ದರು ಎನ್ನುವುದು ಸ್ಪಷ್ಟವಾಗಿದೆ. ಈ ವಿಚಾರವನ್ನು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ದಿಲ್ಲಿಯಲ್ಲಿ ನಡೆದ ಕೇಂದ್ರ ಸಮಿತಿ ಸಭೆಯಲ್ಲಿ ಪ್ರತಾಪ್‌ ಸಿಂಹ ಹೆಸರು ಹೇಳುತ್ತಿದ್ದಂತೆಯೇ ವರಿಷ್ಠರು ಯಾವ ಆಸಕ್ತಿಯನ್ನೂ ತೋರಿಸದೆ NEXT ಎಂದುಬಿಟ್ಟಿದ್ದರು. ಆಗ ಪ್ರತಾಪ್ ಸಿಂಹ ಹೆಸರು ಶಿಫಾರಸು ಮಾಡಿದ್ದ ರಾಜ್ಯ ನಾಯಕ ತಬ್ಬಿಬ್ಬಾಗಿದ್ದರು ಎಂದು ಹೇಳಲಾಗಿದೆ.

MP Pratap Simha ಪ್ರತಾಪ್‌ ಸಿಂಹ ಹೆಸರಿಗೆ ಆಸಕ್ತಿಯನ್ನೇ ತೋರಿಸದ ವರಿಷ್ಠರು

ಮೈಸೂರು- ಕೊಡಗು ಕ್ಷೇತ್ರಕ್ಕೆ ಪ್ರತಾಪ್‌ಸಿಂಹ ಅವರ ಸಿಂಗಲ್ ನೇಮ್ ಶಿಫಾರಸು ಆಗಿತ್ತು. ಆ ಹೆಸರನ್ನು ರಿಜೆಕ್ಟ್‌ ಮಾಡಿದ್ದ ಕೇಂದ್ರ ನಾಯಕರು ಬೇರೆ ಯಾರಿದ್ದಾರೆ ಅಂತ ಕೇಳಿದ್ದರು. ಬಿಜೆಪಿ ರಾಜ್ಯ ಘಟಕ ಪರ್ಯಾಯ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಸ್ಥಳೀಯ ಯಾವ ಹೆಸರಿನ ಬಗೆಗೂ ಹೈಕಮಾಂಡ್‌ ಆಸಕ್ತಿ ತೋರಿಸಲೇ ಇಲ್ಲ. ಅಂತಿಮವಾಗಿ ಮೈಸೂರು ಮಹಾರಾಜರಾದ ಯದುವೀರ್‌ ಕೃಷ್ಣದತ್ತ ಒಡೆಯರ್‌ ಅವರ ಹೆಸರನ್ನು ಹೈಕಮಾಂಡೇ ಅಂತಿಮಗೊಳಿಸಿದೆ. ಅಂದರೆ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ನಿರಾಕರಿಸಿ ಯದುವೀರ್‌ ಅವರನ್ನು ಆಯ್ಕೆ ಮಾಡುವಲ್ಲಿ ರಾಜ್ಯದ ನಾಯಕರ ಕೈವಾಡ ಎಲ್ಲೂ ಇರಲಿಲ್ಲ. ಬದಲಾಗಿ ಹೈಕಮಾಂಡೇ ಎಲ್ಲವನ್ನೂ ತೀರ್ಮಾನ ಮಾಡಿತ್ತು ಎನ್ನಲಾಗಿದೆ.

ಇದನ್ನೂ ಓದಿ : Lok Sabha Election 2024: ಮೈಸೂರು-ಕೊಡಗು ಅಭಿವೃದ್ಧಿಗೆ ಶ್ರಮಿಸಲು ಅವಕಾಶ ನೀಡಿ: ಯದುವೀರ್ ಮನವಿ

MP Pratap Simha ಬ್ಲ್ಯಾಕ್‌ ಲಿಸ್ಟ್‌ಗೆ ಹಾಕಿದ್ದೇ ವರಿಷ್ಠರು, ರಾಜ್ಯ ನಾಯಕರ ಕೈವಾಡ ಇಲ್ಲ?

ಪ್ರತಾಪ್ ಸಿಂಹ ಬ್ಲಾಕ್ ಲಿಸ್ಟ್‌ಗೆ ಹಾಕಿದವರೂ ಬಿಜೆಪಿ ವರಿಷ್ಠರೇ. ಯದುವೀರ್ ಅವರನ್ನೂ ಕರೆ ತಂದವರೇ ಆರ್‌ಎಸ್‌ಎಸ್ ಪ್ರಮುಖರು. ಎರಡೂ ನಿರ್ಧಾರದ ಹಿಂದೆ ರಾಜ್ಯ ನಾಯಕರ ಪಾತ್ರ ಶೂನ್ಯ ಎನ್ನುವುದು ವಿಸ್ತಾರ ನ್ಯೂಸ್‌ಗೆ ಉನ್ನತ ಮೂಲಗಳಿಂದ ಸಿಕ್ಕ ಮಾಹಿತಿ. ಇದರಲ್ಲಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಪ್ರಹ್ಲಾದ್ ಜೋಶಿ ಸೇರಿದಂತೆ ಯಾರ ಮಧ್ಯಪ್ರವೇಶವೂ ಇಲ್ಲ ಎನ್ನಲಾಗಿದೆ.

ಪ್ರತಾಪ್‌ ಸಿಂಹ ಅವರು ವರಿಷ್ಠರ ಅವಕೃಪೆಗೆ ಒಳಗಾಗಲು, ಬ್ಲ್ಯಾಕ್‌ ಲಿಸ್ಟ್‌ಗೆ ಸೇರಲು ʻಖಾಸಗಿʼ ಕಾರಣಗಳೇ ಮುಖ್ಯವಾಯಿತು ಎನ್ನಲಾಗಿದೆ. ಪ್ರತಾಪ್‌ ಸಿಂಹ ಅವರು ಉತ್ತಮ ಕೆಲಸಗಾರ ಎಂಬ ಹೆಸರು ಪಡೆದಿದ್ದರೂ ಇತರ ನಾಯಕರ ಜತೆಗೆ ಅವರಿಗಿದ್ದ ಹಳಸಿದ ಸಂಬಂದ, ರಾಜ್ಯದ ಆರೆಸ್ಸೆಸ್‌ ನಾಯಕರ ಅಭಿಪ್ರಾಯ ಮತ್ತು ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ಸಿಡಿಸಿದ ಆರೋಪಿಗಳಿಗೆ ಪ್ರತಾಪ್‌ ಸಿಂಹ ಅವರ ಕಚೇರಿಯಿಂದ ಪಾಸ್‌ ನೀಡಿದ ಸಂಗತಿಗಳು ಮುಳುವಾದವು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಪ್ರತಾಪ್‌ ಸಿಂಹ ಅವರ ಹೆಸರನ್ನು ಹೈಕಮಾಂಡ್‌ ಒಂದೇ ಏಟಿಗೆ ರಿಜೆಕ್ಟ್‌ ಮಾಡಿದ ಬಳಿಕ ಆರ್‌ಎಸ್‌ಎಸ್ ಅಗ್ರಮಾನ್ಯ ಮುಖಂಡರು ರಾಜವಂಶಕ್ಕೆ ಗಾಳ ಹಾಕಿದ್ದರು. ರಾಜ್ಯಸಭಾ ಮಾಜಿ ಸದಸ್ಯ, ಪತ್ನಿ ತ್ರಿಷಿಕಾ ಕುಮಾರಿ ಸಂಬಂಧಿ ಹರ್ಷವರ್ಧನ್ ಸಿಂಗ್ ಮೂಲಕ ಯದುವೀರ್ ಮನವೊಲಿಕೆ ಮಾಡಿದರು. ಅದಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಅನುಮತಿಯನ್ನೂ ಪಡೆಯಲಾಯಿತು.

ಯದುವೀರ್‌ ನಾಳೆ ಬಿಜೆಪಿ ಸೇರ್ಪಡೆ

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್‌ ಪಡೆದಿರುವ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶುಕ್ರವಾರ ಬಿಜೆಪಿ ಸೇರಲಿದ್ದಾರೆ.

ಶುಕ್ರವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ ನಾಡ ಅಧಿದೇವತೆ ದರ್ಶನ ಪಡೆಯಲಿರುವ ಅವರು, ಬಳಿಕ ಬೆಂಗಳೂರಿನತ್ತ ಪಯಣ ನಡೆಸಲಿದ್ದಾರೆ. ಅವರು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರಲಿದ್ದಾರೆ. ಬಳಿಕ ಸುದ್ದಿ ಗೋಷ್ಠಿ ನಡೆಸಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.

Exit mobile version