Site icon Vistara News

Murder Case : ಮೊದಲ ಹೆಂಡ್ತಿ ಮಕ್ಕಳ ಜತೆ ಸೇರಿ 2ನೇ ಹೆಂಡ್ತಿನ ಕೊಂದ ಭೂಪ; ಎಲ್ಲವೂ ಆಸ್ತಿಗಾಗಿ!

Murder Case in Mysore

ಮೈಸೂರು:‌ ವ್ಯಕ್ತಿಯೊಬ್ಬ ತನ್ನ ಮೊದಲ ಹೆಂಡತಿಯ (First Wife) ಮಕ್ಕಳ ಜತೆ ಸೇರಿ ಎರಡನೇ ಪತ್ನಿಯನ್ನು ಕೊಲೆ (Murder Case) ಮಾಡಿದ್ದಾನೆ. ಮೈಸೂರಿನ ನಾಯ್ಡು ನಗರದಲ್ಲಿ (Mysore News) ನಡೆದ ಈ ಕೃತ್ಯದ ಹಿಂದಿರುವುದು ಆಸ್ತಿ, ಆಸ್ತಿ ಆಸ್ತಿ. ಅಖಿಲಾ ಭಾನು ಎಂಬ 46 ವರ್ಷದ ಮಹಿಳೆಯನ್ನು ಆಕೆಯ ಪತಿ ಅಬ್ಬ ಥಾಯೂಬ್‌ ಕೊಲೆ (Second wife murder) ಮಾಡಿದ್ದಾನೆ.

ಮೈಸೂರಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಖಿಲಾ ಭಾನು ಪತಿ ಅಬ್ಬ ಥಾಯೂಬ್, ಆತನ ಮೊದಲನೇ ಹೆಂಡತಿಯ ಮಕ್ಕಳಾದ ಮೊಹಮದ್ ಆಸಿಫ್, ಮೊಹಮದ್ ಥೋಸಿಫ್ ಹಾಗೂ ಮೊಹಮದ್ ಹೈದರ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Murder Case: ಸ್ನೇಹಿತನ‌ ಜತೆ ಹೋದವನು ತೋಟದ ಮನೆಯಲ್ಲಿ ಶವವಾಗಿ ಪತ್ತೆ

2ನೇ ಹೆಂಡತಿ ಮನೆಯಲ್ಲಿ ಮೊದಲ ಪತ್ನಿ ಮಕ್ಕಳಿಗೆ ಕೊಡಲು ಸಂಚು

ಆರೋಪಿ ಅಬ್ಬ ಥಾಯೂಬ್ ಸಿಲ್ಕ್ ಫ್ಯಾಕ್ಟರಿಯಲ್ಲಿ ನೌಕರ. ಆತನಿಗೆ ಈ ಹಿಂದೆ ಮದುವೆಯಾಗಿ ನಾಲ್ಕು ಮಕ್ಕಳಿದ್ದರು. ಅದರ ನಡುವೆ ಆತ 2013ರಲ್ಲಿ ಅಖಿಲಾ ಭಾನು ಅವರನ್ನು ಎರಡನೇ ವಿವಾಹವಾಗಿದ್ದ.

ಆರೋಪಿಗೆ ಮೊದಲ ಹೆಂಡತಿಯಲ್ಲಿ ನಾಲ್ವರು ಮಕ್ಕಳಿದ್ದರೆ ಎರಡನೇ ಪತ್ನಿಯಲ್ಲಿ ಮಕ್ಕಳಿರಲಿಲ್ಲ. ಜತೆಗೆ ಅಖಿಲಾ ಭಾನು ಕ್ಯಾನ್ಸರ್​​ನಿಂದ ಬಳಲುದ್ದವರು ಈಗ ಸುಧಾರಿಸಿಕೊಳ್ಳುತ್ತಿದ್ದರು.

ಅಖಿಲಾ ಭಾನು ಅವರ ಅಕ್ಕನ ಮಗ ಸೈಯದ್ ಇರ್ಫಾನ್ ಆರ್ಥಿಕ ಸಹಾಯ ನೀಡಿ, ಆಕೆಗಾಗಿ ಮೈಸೂರಿನ ನಾಯ್ಡು ನಗರದಲ್ಲಿ ಆರ್ಥಿಕ ನೆರವು ನೀಡಿ ಒಂದು ಮನೆ ಖರೀದಿಸಿಕೊಟ್ಟಿದ್ದರು. ಅಬ್ಬ ಥಾಯುಬ್ ಹಾಗೂ ಅಖಿಲಾ ಭಾನು ಇಬ್ಬರ ಹೆಸರಲ್ಲಿ ಮನೆಯ ಜಂಟಿ ನೋಂದಣಿಯಾಗಿತ್ತು. 6 ತಿಂಗಳ ಹಿಂದಷ್ಟೇ ಮನೆ ಹಸ್ತಾಂತರ ನಡೆದಿತ್ತು.

ಈ ನಡುವೆ, ಅಬ್ಬ ಥಾಯುಬ್‌ಗೆ ಈ ಮನೆಯನ್ನು ಮನೆಯನ್ನು ಇತ್ತೀಚೆಗೆ ಮೊದಲ ಹೆಂಡತಿಯ ಮಕ್ಕಳಿಗೆ ಬರೆದು ಕೊಡುವ ಯೋಚನೆ ಹುಟ್ಟಿಕೊಂಡಿತ್ತು. ಈ ವಿಚಾರದಲ್ಲಿ ಗಂಡ ಹೆಂಡತಿ ಮಧ್ಯೆ ಆಗಾಗ ಗಲಾಟೆಯಾಗುತ್ತಿತ್ತು.

ಫೆಬ್ರವರಿ 16ರ ಬೆಳಿಗ್ಗೆ ಇದ್ದಕ್ಕಿದ್ದಂತೆ ಸೈಯದ್ ಇರ್ಫಾನ್ ಮನೆಗೆ ಬಂದ ಅಬ್ಬ ಥಾಯೂಬ್ ಕಣ್ಣೀರಿಡುತ್ತಾ, ‘ಅಖಿಲಾ ಬಾನು ಮೃತಪಟ್ಟಿದ್ದಾಳೆ’ ಎಂದು ತಿಳಿಸಿ ಗೋಳಾಡಿದ್ದ. ರಾಜೇಂದ್ರ ನಗರದ ಮನೆಯಲ್ಲಿ ಇರಿಸಲಾಗಿದ್ದ ಅಖಿಲಾ ಬಾನು ಶವವನ್ನು ಸೈಯದ್ ಇರ್ಫಾನ್ ಪರಿಶೀಲನೆ ಮಾಡಿದಾಗ ಕುತ್ತಿಗೆಯ ಮೇಲೆ ತರಚಿದ ಗಾಯಗಳು ಕಂಡು ಬಂದಿದ್ದವು. ಇದರಿಂದ ಅನುಮಾನಗೊಂಡ ಸೈಯದ್ ಇರ್ಫಾನ್ ತಮ್ಮ ಚಿಕ್ಕಮ್ಮ ಸಾವು, ಸಹಜವಲ್ಲ ಕೊಲೆ ಎಂದು ದೂರು ನೀಡಿದ್ದರು.

ಆದರೆ, ಪೊಲೀಸರು ವಿಚಾರಣೆ ನಡೆಸಿದಾಗ ಇದೊಂದು ಕೊಲೆ ಎನ್ನುವುದು ಗೊತ್ತಾಯಿತು. ಸದ್ಯ ಮೈಸೂರಿನ ಎನ್ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಾಲ್ವರನ್ನು ಬಂಧಿಸಲಾಗಿದೆ.

Exit mobile version