Site icon Vistara News

Murder Case: ಆಟವಾಡುತ್ತಿದ್ದ ಬಾಲಕರ ಜಗಳ ಕೊಲೆಯಲ್ಲಿ ಅಂತ್ಯ, ಇರಿದವನಿಗೆ ಹದಿನೈದೇ ವರ್ಷ!

minor murder mysore

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕರ ನಡುವೆ ಗಲಾಟೆ ಉಂಟಾಗಿದ್ದು, ಇದು ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದವನಿಗೆ 16 ವರ್ಷ ಹಾಗೂ ಕೊಲೆ ಮಾಡಿದವನಿಗೆ 15 ವರ್ಷ.

ಮೈಸೂರಿನ ಸುನ್ನಿ ಚೌಕ ಬಳಿ ಘಟನೆ ನಡೆದಿದ್ದು, ಚಾಕುವಿನಿಂದ ಇರಿದು ಬಾಲಕನ ಕೊಲೆ ಮಾಡಲಾಗಿದೆ. ಮನೆ ಮೇಲೆ ಆಟ ಆಡುವ ಸಮಯದಲ್ಲಿ ನಡೆದಿರುವ ಕೊಲೆಯಿದು. ಮಂಡಿ ಮೊಹಲ್ಲಾ ನಿವಾಸಿ ಫರಾನ್ ಖಾನ್(16) ಕೊಲೆಯಾದ ಬಾಲಕನಾಗಿದ್ದಾನೆ. 15 ವರ್ಷದ ಬಾಲಕ ಕೊಲೆ ಮಾಡಿದ್ದಾನೆ.

ಮನೆ ಮೇಲೆ ಆಟ ಆಡುವ ವೇಳೆ ಇಬ್ಬರೂ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಚಾಕುವಿನಿಂದ ಇರಿದಿದ್ದಾನೆ. ಕಿರುಚಾಟ ಕೇಳಿ ಓಡಿಬಂದ ಸ್ಥಳೀಯರು ಗಾಯಾಳುವನ್ನು ತಕ್ಷಣ ಕೆ.ಆರ್.ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಫರಾನ್‌ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಕೊಲೆ ಮಾಡಿದ ಬಾಲಕನನ್ನು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ವಿಷ ಸೇವಿಸಿ ಆತ್ಮಹತ್ಯೆ

ಮೈಸೂರು: ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕಿನ ಸಿದ್ದೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ. ಮಹದೇವಸ್ವಾಮಿ (30) ಮೃತ ಯುವಕ.

ಜುಲೈ 1ರಂದು ರಾತ್ರಿ ಮನೆಯಿಂದ ಹೋದ ಮಹದೇವಸ್ವಾಮಿ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಮೃತನ ತಂದೆ ಚಿನ್ನಪ್ಪ ದೂರು ನೀಡಿದ್ದರು. ಮಾರನೇ ದಿನ ಮಹದೇವಸ್ವಾಮಿಯ ಮೃತ ದೇಹ ಜಮೀನಿನಲ್ಲಿ ಪತ್ತೆಯಾಗಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೃತನಿಗೆ ಅಕ್ಕ ಮತ್ತು ತಂಗಿ ಇದ್ದು, ಮದುವೆ ಆಗಿಲ್ಲ. ಹೀಗಾಗಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ: Murder Case: ಹೋಟೆಲ್‌ ಮಾಲಿಕ ಪತ್ನಿಯಿಂದಲೇ ಕೊಲೆ, ಪತ್ತೆಯಾಗದಿರಲಿ ಎಂದು ಖಾರದ ಪುಡಿ ಬಳಕೆ!

Exit mobile version