ಮೈಸೂರು: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ ಬೆಳೆದ ಪರಿಣಾಮ ಯುವ ಬ್ರಿಗೇಡ್ ಕಾರ್ಯಕರ್ತನೊಬ್ಬನ ಕೊಲೆ (Murder Case) ನಡೆದಿದೆ .
ತಿ.ನರಸೀಪುರ ಪಟ್ಟಣದ ಹೊರ ವಲಯದಲ್ಲಿ ಘಟನೆ ನಡೆದಿದೆ. ವೇಣುಗೋಪಾಲ್ ನಾಯಕ್ (32) ಕೊಲೆಯಾದ ಯುವಕ. ಯುವ ಬ್ರಿಗೇಡ್ ಕಾರ್ಯಕರ್ತನಾಗಿದ್ದ ಈತ ತಿ.ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿಯಾಗಿದ್ದ.
ಹನುಮ ಜಯಂತಿ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಇದನ್ನೇ ಮನದಲ್ಲಿ ಇಟ್ಟುಕೊಂಡು ಬಾಟಲಿಯಿಂದ ಇರಿದು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆರೋಪಿಗಳು ಮೃತನ ಪರಿಚಿತರು ಹಾಗೂ ಹಳೆಯ ಸ್ನೇಹಿತರು ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತಿ.ನರಸೀಪುರ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸೂಲಿಬೆಲೆ ಭೇಟಿ
ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯಾದ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಗೆ ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿದ್ದು, ಮೃತ ಯುವಕನ ಅಂತಿಮ ದರ್ಶನ ಪಡೆದಿದ್ದಾರೆ. ಮೃತ ಯುವಕನ ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಕರೆಂಟ್ ಬಿಲ್ ಕೊಡಲು ಹೋದ ಲೈನ್‌ಮನ್ ಮೇಲೆ ಹಲ್ಲೆ
ರಾಮನಗರ: ಕರೆಂಟ್ ಬಿಲ್ ಕೊಡಲು ಹೋದ ಲೈನ್‌ಮನ್ ಮೇಲೆ ಯುವಕನಿಂದ ಹಲ್ಲೆ ನಡೆದಿದೆ. ರಾಮನಗರದ ಟಿಪ್ಪು ನಗರದಲ್ಲಿ ಘಟನೆ ನಡೆದಿದೆ.
ರಫೀಕ್, ಚಿನ್ಮಯ್ ಹಲ್ಲೆಗೊಳಗಾದ ಲೈನ್‌ಮನ್ ಸಿಬ್ಬಂದಿ. ನಗರದಲ್ಲಿ ಇವರು ಜೂನ್ ತಿಂಗಳ ಬಿಲ್ ನೀಡುತ್ತಿದ್ದರು. ಸರ್ಕಾರ ಕರೆಂಟ್ ಫ್ರೀ ಕೊಟ್ಟಿದ್ರೂ ಬಿಲ್ ನೀಡಲು ಬಂದಿದ್ದೀರ ಎಂದು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಕರೆಂಟ್ ಬಿಲ್ ಕೊಡುತ್ತಿದ್ದಂತೆ ಬೆಸ್ಕಾಂ ಸಿಬ್ಬಂದಿಗಳಿಗೆ ಮುಸ್ಲಿಂ ಯುವಕ ಧಮ್ಕಿ ಹಾಕಿದ್ದಾನೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ. ಏಕಾಏಕಿ ಸಿಬ್ಬಂದಿ ಮೇಲೆ ಯುವಕ ಹಲ್ಲೆ ನಡೆಸಿದ್ದಾನೆ. ರಾಮನಗರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Violence against women : ಸಾಗರದ ಕಾಸ್ಪಾಡಿಯಲ್ಲಿ ಸಿನಿಮಾ ನಟಿ ಮೇಲೆ ದಾಳಿ; ಮಾರಣಾಂತಿಕ ಹಲ್ಲೆ