Site icon Vistara News

Murder Case : ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಕೊಲೆ

murder case

ಮೈಸೂರು: ಮೈಸೂರಿನಲ್ಲಿ ಹಿರಿಯ ಸ್ವಾಮೀಜಿಯೊಬ್ಬರ ಬರ್ಬರ (Murder case) ಕೊಲೆಯಾಗಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ (90) ಸ್ವಾಮೀಜಿ ಕೊಲೆಯಾದವರು.

ಶಿವಾನಂದ ಸ್ವಾಮೀಜಿ ಅವರ ಸಹಾಯಕನಾಗಿದ್ದ ಭದ್ರತಾ ಸಿಬ್ಬಂದಿಯಿಂದಲೇ ಕೊಲೆ ನಡೆದಿದೆ. ರವಿ (60) ಎಂಬಾತನಿಂದ ಈ ಕೃತ್ಯ ನಡೆದಿದೆ. ಶಿವಾನಂದ ಸ್ವಾಮೀಜಿಯನ್ನು ಮಾರಕಾಸ್ತ್ರದಿಂದ ಚುಚ್ಚಿ ಕೊಲೆ ಮಾಡಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಮಂಚದ ಮೇಲೆ ಮಲಗಿದ್ದಲ್ಲೇ ಶಿವಾನಂದ ಸ್ವಾಮೀಜಿಗೆ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಇದನ್ನೂ ಓದಿ: Physical Abuse : ಪಿಕ್‌ ಅಪ್, ಡ್ರಾಪ್ ನೆಪದಲ್ಲಿ ಸಲುಗೆ; ಅಂಕಲ್ ಗಾಳಕ್ಕೆ ಸಿಲುಕಿದ ಬಾಲಕಿಯ ನರಳಾಟ

ಹಾಸನದಲ್ಲಿ ಕಾರಿನಿಂದ ಗುದ್ದಿಸಿ ವ್ಯಕ್ತಿಯ ಕೊಲೆ

ಹಾಲಿನ ಡೈರಿ ವಿಚಾರದಲ್ಲಿ ಗಲಾಟೆ ಹಿನ್ನೆಲೆಯಲ್ಲಿ ಕಾರಿನಿಂದ ಗುದ್ದಿಸಿ ವ್ಯಕ್ತಿಯ ಬರ್ಬರ ಕೊಲೆ ಮಾಡಲಾಗಿದೆ. ಹಾಸನ ತಾಲೂಕಿನ ದುದ್ದ ಸಮೀಪದ ಮಾಯಸಮುದ್ರ ಗ್ರಾಮದ ಬಳಿ ಘಟನೆ ನಡೆದಿದೆ. ಉದ್ದೂರುಹಳ್ಳಿ ಗ್ರಾಮದ ನಿವಾಸಿ ಅಣ್ಣಪ್ಪ(64) ಸ್ಥಳದಲ್ಲೆ ಮೃತಪಟ್ಟರೆ, ಮಂಜುನಾಥ ಎಂಬುಬಬರಿಗೆ ಗಂಭೀರ ಗಾಯವಾಗಿದೆ.

ಉದ್ದೂರುಹಳ್ಳಿಯ ಧರ್ಮ ಹಾಗು ಆತನ ಸಂಬಂಧಿ ಚಿದಾನಂದ್ ಎಂಬಾತನಿಂದ ಕೊಲೆ ನಡೆದಿದೆ ಎನ್ನಲಾಗಿದೆ. ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ವಿಚಾರಕ್ಕೆ ಧರ್ಮ ಹಾಗು ಮಂಜುನಾಥ ನಡುವೆ ಗಲಾಟೆ ನಡೆದಿತ್ತು. ಗಲಾಟೆಯನ್ನೇ ಮನಸ್ಸಿನಲ್ಲಿಟ್ಟುಕೊಂಡ ಆರೋಪಿಗಳು ಇನ್ನೋವಾ ಕಾರಿನಿಂದ ಗುದ್ದಿಸಿ ಕೊಂದಿದ್ದಾರೆ. ಅದೃಷ್ಟವಶಾತ್ ಅಪಾಯದಿಂದ ಮಂಜುನಾಥ ಪಾರಾಗಿದ್ದರೆ, ಅಣ್ಣಪ್ಪ ಮೃತಪಟ್ಟಿದ್ದಾರೆ.

ಹಂತಕರು ಕೊಲೆಗೈದು ಎಸ್ಕೇಪ್ ಆಗಿದ್ದು, ದುದ್ದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಗಾಯಾಳು ಮಂಜುನಾಥ್‌ನನ್ನು ಹಾಸನದ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version