ಮೈಸೂರು: ಮಚ್ಚಿನಿಂದ ಕೊಚ್ಚಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ.
ಅದೇ ಗ್ರಾಮದ ಮಹೇಶ್ (27) ಕೊಲೆಯಾದ ಯುವಕ. ಗಿರೀಶ್ ಎಂಬಾತ ಕೊಲೆ ಮಾಡಿದ ಆರೋಪಿ. ಮಹೇಶ್ ಆಟೋದಲ್ಲಿ ಕುಳಿತಿದ್ದಾಗ ಗಿರೀಶ್ ದಾಳಿ ನಡೆಸಿದ್ದು, ಮಚ್ಚಿನಿಂದ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಮಹೇಶ್‌ನನ್ನು ಮೈಸೂರಿನ ಆಸ್ಪತ್ರೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಹೇಶ್ ಸಾವಿಗೀಡಾಗಿದ್ದಾರೆ.
ಆರೋಪಿ ಗಿರೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ವೃತ್ತ ನಿರೀಕ್ಷಕ ಚಂದ್ರಶೇಖರ್, ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿ ಕಟ್ಟಿ ಸ್ಥಳಕ್ಕೆ ಭೇಟಿ ನೀಡಿದ್ದು, ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Murder Case: ರಸ್ತೆಯಲ್ಲಿ ಮಲಗುವ ವಿಚಾರಕ್ಕೆ ಕಿರಿಕ್; ಬಿಹಾರಿಯಿಂದ ನಾಲ್ವರ ಮೇಲೆ ಹಲ್ಲೆ, ಒಬ್ಬ ಸ್ಥಳದಲ್ಲೇ ಸಾವು