ಮೈಸೂರು: ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಧಮ್ಕಿ ಹಾಕಿದ ಪ್ರಕರಣದಲ್ಲಿ (Murder Threat) ಕಾಂಗ್ರೆಸ್ ಮುಖಂಡ ಶಫೀಕ್ ಅಹಮದ್ ಮತ್ತು ಸೈಯದ್ ಮಹಿಬುನ್ನೀಸಾ ದಂಪತಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಟ್ಟಡಕ್ಕೆ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಡಿ.10ರಂದು ಸಾತಗಳ್ಳಿ ಬಸ್ ಡಿಪೋ ಅಧಿಕಾರಿಗಳು ಕಟ್ಟಡ ಖಾಲಿ ಮಾಡಿಸಲು ಹೋಗಿದ್ದರು. ಖಾಲಿ ಮಾಡಿಸಲು ಹೋದಾಗ ಶಫೀಕ್ ಅಹಮದ್ ಅವರ ಪತ್ನಿ ಸೈಯದ್ ಮಹಿಬುನ್ನೀಸಾ ಅಧಿಕಾರಿಗಳಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದರು. ಘಟನೆ ಬಳಿಕ ದಂಪತಿ ಪರಾರಿಯಾಗಿದ್ದರು. ಗುರುವಾರ ವಿರಾಜಪೇಟೆ ಬಳಿ ಅವರನ್ನು ಬಂಧಿಸಿ ರೌಡಿಶೀಟ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | Murder Case | ಮದುವೆ ಆಗು ಎಂದವಳು ಕೊಲೆಯಾಗಿ ಹೋದಳು; ಪ್ರಿಯಕರನ್ನು ಜೈಲಿಗೆ ಅಟ್ಟಿದ ಪೊಲೀಸರು
ಬಸ್ ನಿಲ್ದಾಣದ ಕಟ್ಟಡದಲ್ಲಿ ಶಫೀಕ್ ಅಹಮದ್ ಖಾಸಗಿ ಶಾಲೆ ನಡೆಸಲು 2017ರಲ್ಲಿ 12 ವರ್ಷಗಳ ಅವಧಿಗೆ ಕಟ್ಟಡ ಬಾಡಿಗೆ ಪಡೆದಿದ್ದರು. ಪ್ರತಿ ತಿಂಗಳು 48 ಲಕ್ಷ ರೂ. ಬಾಡಿಗೆ ಕೊಡುತ್ತಿದ್ದರು. ಆದರೆ, ಎರಡು ವರ್ಷ ಬಾಡಿಗೆ ಕಟ್ಟಿಲ್ಲ. ಕೋವಿಡ್ ಕಾರಣ ನೀಡಿ ಕೋರ್ಟ್ ತಡೆಯಾಜ್ಞೆ ತಂದಿದ್ದರು. ಸ್ಟೇ ತೆರವು ಆದ ನಂತರ ಅಧಿಕಾರಿಗಳು ಕಟ್ಟಡ ಖಾಲಿ ಮಾಡಿಸಲು ಹೋಗಿದ್ದಾಗ ದಂಪತಿ ಜಗಳ ತೆಗೆದು ರಂಪಾಟ ನಡೆಸಿದ್ದರು. ಈ ಬಗ್ಗೆ ಸಾರಿಗೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರಿಂದ ದಂಪತಿಯನ್ನು ಬಂಧಿಸಲಾಗಿದೆ.
ʻʻಬಡ್ಡಿ ಮಗನೇ, ನಾವು ಸಾಬರು, ಯಾರಿಗೂ ಹೆದರಲ್ಲ, ಮಚ್ಚಿನಲ್ಲಿ ಕೊಚ್ಚಿ ಹಾಕಿ ಜೈಲಿಗೆ ಹೋಗಲೂ ಹೆದರಲ್ಲʼʼ ಎಂದು ಷಫಿ ಪತ್ನಿ ಕೈಯಲ್ಲಿ ಮಚ್ಚು ಹಿಡಿದು ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಮರ್ಯಾದೆಯಿಂದ ಇಲ್ಲಿಂದ ಹೋಗಿಬಿಡಿ, ಮುಸ್ಲಿಮರ ಮೇಲೆ ದೌರ್ಜನ್ಯ ಮಾಡುತ್ತೀರಾ ಎಂದು ಷಫಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು. ಮಚ್ಚನ್ನು ಕಸಿಯಲು ಪೊಲೀಸರು ಯತ್ನಿಸಿದಾಗ ಅಧಿಕಾರಿಗಳನ್ನು ಬೈಯುತ್ತಾ ಮಹಿಳೆ ರಂಪಾಟ ನಡೆಸಿದ್ದರು. ಈ ವೇಳೆ ಮರ್ಯಾದೆಯಿಂದ ಇಲ್ಲಿಂದ ಹೋಗಿಬಿಡಿ, ಮುಸ್ಲಿಮರ ಮೇಲೆ ದೌರ್ಜನ್ಯ ಮಾಡುತ್ತೀರಾ ಎಂದು ಷಫಿ ಕುಟುಂಬಸ್ಥರು ಆಕ್ರೋಶ ಹೊರಹಾಕಿ ಗಲಾಟೆ ನಡೆಸಿದ್ದರು. ಹೀಗಾಗಿ ಶಫಿ ದಂಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.
ಇದನ್ನೂ ಓದಿ | Techie death | ಆತ್ಮಹತ್ಯೆಗೆ ಶರಣಾದ ಟೆಕ್ಕಿ: ಮಾನಸಿಕ ಖಿನ್ನತೆ ಕಾರಣ? ಮದುವೆಯಾಗಿ ಎರಡೇ ವರ್ಷದಲ್ಲಿ ದುರಂತ