Site icon Vistara News

Mysore dasara : ನಾಡಹಬ್ಬ ದಸರಾ ಕವಿಗೋಷ್ಠಿಯಿಂದ ಪ್ರೊ. ಕೆ.ಎಸ್‌. ಭಗವಾನ್‌ಗೆ ಕೊಕ್!

Prof Bhagavan

ಮೈಸೂರು: ಸೋಮವಾರ (ಅ. 16) ನಡೆಯಲಿರುವ ಮೈಸೂರು ದಸರಾ (Mysore dasara) ಕವಿಗೋಷ್ಠಿಯಿಂದ (Poetry Festival) ಸಾಹಿತಿ ಪ್ರೊ.ಕೆ.ಎಸ್. ಭಗವಾನ್ (Prof KS Bhagavan) ಅವರ ಹೆಸರನ್ನು ಕೈಬಿಡಲಾಗಿದೆ. ಒಕ್ಕಲಿಗ ಸಮುದಾಯದ (Vokkaliga community) ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ದಸರಾ ಆಚರಣೆ ಸಮಿತಿಯು ಈ ನಿರ್ಧಾರವನ್ನು ಕೈಗೊಂಡಿದೆ.

ಮಹಿಷ ಉತ್ಸವದಲ್ಲಿ ಒಕ್ಕಲಿಗರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ದಸರಾ ಕವಿಗೋಷ್ಠಿಯಿಂದ ಕೊಕ್ ಕೊಡಲಾಗಿದೆ. ಜಿಲ್ಲಾ‌ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಒಂದು ದಿನ ಮುಂಚಿತವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: Mysore Dasara: ಮುಂದಿನ ವರ್ಷವೇ 5ನೇ ಗ್ಯಾರಂಟಿ ಜಾರಿ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಅ. 16ರ ಸೋಮವಾರ ಬೆಳಗ್ಗೆ 10 ಗಂಟೆಗೆ ದಸರಾ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಆದರೆ, ಇದರಲ್ಲಿ ಕೆ.ಎಸ್.‌ ಭಗವಾನ್‌ ಹೆಸರು ಇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅವರು ಮಹಿಷ ಉತ್ಸವದಲ್ಲಿ ಭಾಷಣ ಮಾಡುವ ವೇಳೆ, ಒಕ್ಕಲಿಗರು ಸಂಸ್ಕೃತಿ ಹೀನರು‌ ಎಂದು ಹೇಳಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರನ್ನು ಕವಿಗೋಷ್ಠಿಯಿಂದ ಕೈಬಿಡುವಂತೆ ಆಗ್ರಹ ವ್ಯಕ್ತವಾಗಿತ್ತು. ಜತೆಗೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.

ಪ್ರತಿಭಟನೆ ಎಚ್ಚರಿಕೆ ಕೊಟ್ಟಿದ್ದ ಒಕ್ಕಲಿಗ ಸಮುದಾಯ

ದಸರಾ ಯುವ ಕವಿಗೋಷ್ಠಿಯಲ್ಲಿ ಪ್ರೊ. ಕೆ.ಎಸ್‌. ಭಗವಾನ್‌ ಭಾಗವಹಿಸಕೂಡದು. ಅವರನ್ನು ಪಟ್ಟಿಯಿಂದ ಕೈ ಬಿಡಬೇಕು. ಯಾವುದೇ ಕಾರಣಕ್ಕೂ ಅವರಿಂದ ಉದ್ಘಾಟನೆ ಮಾಡಿಸಬಾರದು ಎಂದು ಒಕ್ಕಲಿಗ ಸಮುದಾಯದವರು ಮೈಸೂರು ದಸರಾ ಆಚರಣೆ ಸಮಿತಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಸಾಹಿತಿ ಡಾ. ಡಿಕೆ ರಾಜೇಂದ್ರರಿಗೆ ಒಲಿದ ಉದ್ಘಾಟನಾ ಭಾಗ್ಯ

ಪ್ರೊ. ಕೆ.ಎಸ್.‌ ಭಗವಾನ್‌ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಮೈಸೂರು ದಸರಾ ಆಚರಣೆ ಸಮಿತಿಯು ಭಾನುವಾರವೇ ಕಾರ್ಯಕ್ರಮದಲ್ಲಿ ಬದಲಾವಣೆಯನ್ನು ಮಾಡಿದೆ. ಯುವಕವಿಗೋಷ್ಠಿ ಉದ್ಘಾಟನೆ ಮಾಡಬೇಕಿದ್ದ ಪ್ರೊ. ಭಗವಾನ್ ಹೆಸರನ್ನು ಕೈಬಿಟ್ಟು, ಆ ಜಾಗಕ್ಕೆ ಸಾಹಿತಿ ಡಾ. ಡಿ.ಕೆ. ರಾಜೇಂದ್ರ ಅವರನ್ನು ತಂದಿದೆ. ಹೀಗಾಗಿ ಸೋಮವಾರ ರಾಜೇಂದ್ರ ಅವರು ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ: Mysore Dasara : ಅರಮನೆಯಲ್ಲೂ ದಸರಾ ಸಡಗರ; ಖಾಸಗಿ ದರ್ಬಾರ್‌ ಆರಂಭಿಸಿದ ಯದುವೀರ್‌ ಒಡೆಯರ್

ಕೆ.ಎಸ್‌. ಭಗವಾನ್ ವಿವಾದಾತ್ಮಕ ಹೇಳಿಕೆ ಏನು?

ನಮ್ಮದು ಬುದ್ಧ ಧರ್ಮವಾಗಿದೆ. ಬುದ್ಧ‌ ನಮ್ಮಲ್ಲಿ ಹುಟ್ಟಿದವನಾಗಿದ್ದಾನೆ. ಆದರೆ, ಹಿಂದು ಧರ್ಮ ಹೊರಗಿನಿಂದ ಬಂದಿದೆ. ಬುದ್ಧ ಗುರುಗಳು ಜ್ಞಾನವನ್ನು ಕೊಟ್ಟಿದ್ದಾರೆ. ವೈದಿಕರು ಅಜ್ಞಾನವನ್ನು ಸಮಾಜಕ್ಕೆ ಕೊಡುತ್ತಿದ್ದಾರೆ. ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಬ್ರಾಹ್ಮಣರು ವೈದಿಕರು ಬೇರೆ ದೇಶದಿಂದ ಬಂದಿರುವವರು. ಎಲ್ಲ ಶೂದ್ರರು ಬ್ರಾಹ್ಮಣರ ಗುಲಾಮರು. ಶೂದ್ರನನ್ನು ದೇವರು ಸೃಷ್ಟಿ ಮಾಡಿರುವುದೇ ಬ್ರಾಹ್ಮಣರ ಸೇವೆ ಮಾಡಲು ಎಂದು‌ ತಿಳಿಸಿದ್ದಾರೆ. ಇಂತಹ ಧರ್ಮವು ನಮಗೆ ಬೇಕಿಲ್ಲ. ಒಕ್ಕಲಿಗರು ಸಂಸ್ಕೃತಿ ಹೀನರು‌. ಈ ಮಾತು ನನ್ನದು ಅಲ್ಲ‌ ಕುವೆಂಪು ಅವರದ್ದು. ನಾನು ಹೇಳಿದರೆ ನನ್ನನ್ನು ಹೊಡೆಯುವುದಕ್ಕೆ ಬರುತ್ತಾರೆ. ನಿಜ ಹೇಳಿದವರನ್ನು ಯಾರೂ ಬಿಡಲ್ಲ. ಆದರೆ ನಿಜ ಹೇಳಿಯೇ ಸಾಯಬೇಕು ಎಂದು ಕೆ.ಎಸ್.‌ ಭಗವಾನ್‌ ಮಹಿಷ ದಸರೆಯ ಭಾಷಣದಲ್ಲಿ ಹೇಳಿದ್ದರು.

Exit mobile version