Site icon Vistara News

Derail Effort: ರೈಲು ಹಳಿ ತಪ್ಪಿಸಲು ಯತ್ನ, ತಪ್ಪಿದ ಭಾರಿ ದುರಂತ, ಮೂವರ ಬಂಧನ

mysore derail culprits

ಮೈಸೂರು: ಮೈಸೂರಿನಲ್ಲಿ (Mysore news) ರೈಲು ಹಳಿ ತಪ್ಪಿಸಲು (derail effort) ದುಷ್ಕರ್ಮಿಗಳು ಯತ್ನಿಸಿದ್ದು, ಭಾರಿ ರೈಲು ದುರಂತವೊಂದು ತಪ್ಪಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.

ರೈಲ್ವೇ ಹಳಿ ಮೇಲೆ ಕಬ್ಬಿಣದ ರಾಡ್ ಹಾಗೂ ಮರದ ದಿಮ್ಮಿ ಇಟ್ಟು ಹಳಿ ತಪ್ಪಿಸಲು ಇವರು ಸ್ಕೆಚ್ ಹಾಕಿದ್ದರು. ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ನವಂಬರ್ 12ರಂದು ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ರೈಲನ್ನು ಹಳಿ ತಪ್ಪಿಸಲು ಯತ್ನಿಸಲಾಗಿತ್ತು.

ಸೋಮಯ್ ಮರಾಂಡಿ, ಭಜನು ಮುರ್ಮು ಹಾಗೂ ದಸಮತ್ ಮರಾಂಡಿ ಎಂಬ ಮೂವರನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓಡಿಶಾ ಮೂಲದ ಈ ಮೂವರು ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾರೆ.

ನಂಜನಗೂಡು ಮತ್ತು ಕಡಕೋಳದ ನಡುವಿನ ರೈಲ್ವೆ ಹಳಿಯ ಮೇಲೆ ರಾಡ್ ಹಾಗೂ ಮರದ ದಿಮ್ಮಿ ಇಟ್ಟು ಹಳಿ ತಪ್ಪಿಸಲು ಯತ್ನಿಸಿದ್ದರು. ಕಬ್ಬಿಣದ ರಾಡ್ ಹಾಗೂ ಮರದ ದಿಮ್ಮಿ ಇಟ್ಟಿದ್ದ ಅಕ್ಕಪಕ್ಕದಲ್ಲೇ ಈ ಆರೋಪಿಗಳು ಓಡಾಡುತ್ತಿದ್ದರು. ಸದ್ಯ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಆಸ್ತಿಗಾಗಿ ಪತ್ನಿಯನ್ನೇ ಕೊಂದ ಗಂಡ

ಮಂಡ್ಯ: ಪತ್ನಿ ಮಲಗಿದ್ದ ವೇಳೆ ಮುಖಕ್ಕೆ ದಿಂಬು ಇಟ್ಟು, ಬೆಡ್‌ ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ (Murder Case) ಮಂಡ್ಯದ (Mandya News) ವಿ.ವಿ. ನಗರ ಬಡಾವಣೆಯಲ್ಲಿ ಘಟನೆ (Man kills wife) ನಡೆದಿದೆ. ಎಸ್.ಶೃತಿ(32) ಕೊಲೆಯಾದ ಗೃಹಿಣಿ. ಟಿ.ಎನ್.ಸೋಮಶೇಖರ್(41) ಎಂಬಾತನೇ ಕೊಲೆ ಮಾಡಿದ ಪತಿರಾಯ.

ದಿಂಬು ಮತ್ತು ಬೆಡ್‌ ಶೀಟ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಗಂಡ ಇದೊಂದು ಸಹಜ ಸಾವೆಂದು ಬಿಂಬಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದ. ಆದರೆ ಆತನ ಹಿನ್ನೆಲೆ, ಆತ ನೀಡುತ್ತಿದ್ದ ಕಿರುಕುಳಗಳ ಹಿನ್ನೆಲೆಯಲ್ಲಿ ಆತನ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

ಶ್ರುತಿಯ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ ಎನ್ನಲಾಗಿದೆ. ಅದರಲ್ಲಿ ಒಂದು ಭಾಗವನ್ನು ಮಾರಾಟ ಮಾಡಲು ಶ್ರುತಿ ಮುಂದಾಗಿದ್ದರು. ಆದರೆ, ಪತಿ ಸೋಮಶೇಖರ್‌ ಇದನ್ನು ವಿರೋಧಿಸಿದ್ದ. ಹಾಗಂತ ಅವನು ಒಳ್ಳೆಯ ಕಾರಣಕ್ಕಾಗಿ ಹೀಗೆ ಮಾಡಿದ್ದಲ್ಲ. ಅವನಿಗೆ ಇದ್ದದ್ದು ಎಲ್ಲ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶ ಎನ್ನಲಾಗಿದೆ. ಇದೀಗ ಪತ್ನಿಯನ್ನು ಕೊಂದಾದರೂ ಸರಿ ಭೂಮಿ ಮತ್ತು ಆಸ್ತಿಯನ್ನು ಕಬಳಿಸಲು ಮುಂದಾಗಿದ್ದಾನೆ.

ಇದನ್ನೂ ಓದಿ: Murder Case: ಅಮಿತ್ ಕೇಶವಮೂರ್ತಿ ಕೊಲೆ; ರಾಜೇಶ್ ದೋಷಿ ಎಂದ ಕೋರ್ಟ್

Exit mobile version