Site icon Vistara News

Rahul Gandhi : ಸಿಎಂ ಸಿದ್ದರಾಮಯ್ಯರನ್ನು ಬಸ್ಸಿನಿಂದ ಕೈಹಿಡಿದು ಕೆಳಗಿಳಿಸಿದ ರಾಹುಲ್‌ ಗಾಂಧಿ, ಖರ್ಗೆ ಕೈಹಿಡಿದ ಸುರ್ಜೇವಾಲ

rahul holds siddaramaiah hand

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಬುಧವಾರ ಗೃಹ ಲಕ್ಷ್ಮಿ ಯೋಜನೆ (Gruha lakshmi scheme) ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಆಗಮಿಸಿದರು. ಈ ವೇಳೆ ಕೆಲವೊಂದು ಮಾನವೀಯ ಕ್ಷಣಗಳನ್ನು ಸಾಕಾರಗೊಳಿಸಿದರು.

ರಾಹುಲ್‌ ಗಾಂಧಿ ಅವರು ದಿಲ್ಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಸ್ವಾಗತ ಮಾಡಿದರು. ಅವರ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge), ಕಾಂಗ್ರೆಸ್‌ನ ಚುನಾವಣಾ ಉಸ್ತುವಾರಿಯಾಗಿದ್ದ ರಣದೀಪ್‌ ಸುರ್ಜೇವಾಲಾ (Randeep surjewala) ಅವರು ಕೂಡಾ ಆಗಮಿಸಿದ್ದರು.

ರಾಹುಲ್‌ ಗಾಂಧಿ ಅವರಿಗೆ ಸಿದ್ದರಾಮಯ್ಯ ಸ್ವಾಗತ

ಈ ನಾಯಕರೆಲ್ಲ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸ್ವಾಗತ ಮಾಡಿದರು. ವಿಮಾನ ಇಳಿದ ಜಾಗದಿಂದ ಅವರನ್ನು ಬಸ್ಸಿನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬರಲಾಯಿತು.

ರಾಹುಲ್‌ ಗಾಂಧಿ ಜತೆ ನಡೆದುಬರುತ್ತಿರುವ ಸಿದ್ದರಾಮಯ್ಯ

ಖರ್ಗೆ ಅವರನ್ನು ಕೆಳಗಿಳಿಸಿದ ಸುರ್ಜೇವಾಲ

ರಾಹುಲ್‌ ಗಾಂಧಿ ಅವರು ವಿಮಾನದಿಂದ ಇಳಿದು ಬಸ್ಸಿನ ಕಡೆಗೆ ಸಾಗಿದಾಗ ಹಿಂದಿನಿಂದ ಸುರ್ಜೇವಾಲ ಇಳಿದರು. ಕೊನೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಇಳಿಯುತ್ತಿದ್ದಂತೆಯೇ ಸುರ್ಜೇವಾಲ ಅವರು ತಾವೇ ಸ್ವತಃ ಹೋಗಿ ಅವರನ್ನು ವಿಮಾನದಿಂದ ಕೆಳಗಿಳಿಸಿದ ದೃಶ್ಯ ಕಂಡುಬಂತು.

ಇದಾದ ಸ್ವಲ್ಪ ಹೊತ್ತಿನಲ್ಲೇ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇನ್ನೊಂದು ದೃಶ್ಯ ಎದುರಾಯಿತು. ಅದೇನೆಂದರೆ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಕೈ ಹಿಡಿದು ಬಸ್ಸಿನಿಂದ ಕೆಳಗೆ ಇಳಿಸಿದ್ದು.

ನಾಯಕರನ್ನು ಹೊತ್ತು ಸಾಗುತ್ತಿರುವ ಬಸ್ಸು

ರಾಹುಲ್‌ ಗಾಂಧಿ ಅವರು ಮೊದಲು ಬಸ್ಸಿನಿಂದ ಇಳಿದು ಅಲ್ಲೇ ನಿಂತರು. ಆಗ ಸಿದ್ದರಾಮಯ್ಯ ಅವರು ಇಳಿಯುತ್ತಿದ್ದಂತೆಯೇ ರಾಹುಲ್‌ ಅವರು ಕೈ ಹಿಡಿದು ಇಳಿಸಿದರು. ಮತ್ತು ತುಂಬ ದೂರದವರೆಗೆ ಕೈಹಿಡಿದುಕೊಂಡೇ ನಡೆದುಬಂದರು.

ಇದನ್ನೂ ಓದಿ: Gruha lakshmi Scheme : ಹೆಣ್ಣೆಂದರೆ ಸಮಾಜದ ಬೇರು, ಅದನ್ನು ಗಟ್ಟಿಗೊಳಿಸುವುದೇ ಕಾಂಗ್ರೆಸ್‌ ಧ್ಯೇಯ; ರಾಹುಲ್‌ ವ್ಯಾಖ್ಯಾನ

Exit mobile version