ಮೈಸೂರು: ಚಲಿಸುತ್ತಿದ್ದ ಸರ್ಕಾರಿ ಸಾರಿಗೆ ಬಸ್ (KSTRC Bus) ಫುಟ್ ಬೋರ್ಡ್‌ನಿಂದ (Thrown away from Foot Board) ಆಯತಪ್ಪಿ ಬಿದ್ದು ಕಂಡಕ್ಟರ್ ಮೃತಪಟ್ಟ (Conductor Death) ಘಟನೆ ಮೈಸೂರು ಜಿಲ್ಲೆ (Mysore News) ನಂಜನಗೂಡು ಬಳಿ (Road tragedy) ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಮಹದೇವಸ್ವಾಮಿ (35) ಸ್ಥಳದಲ್ಲೇ ಮೃತಪಟ್ಟವರು.
ನಂಜನಗೂಡು ತಾಲೂಕಿನ ಮಲ್ಲನಮೂಲೆ ಮಠದ ಬಳಿ ಬಸ್ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬಸ್ಸು ಸಾಗುತ್ತಿದ್ದಾಗ ಒಮ್ಮಿಂದೊಮ್ಮೆಗೇ ಬಾಗಿಲು ತೆರೆದುಕೊಂಡು ಕಂಡಕ್ಟರ್ ಹೊರಗೆ ಬಿದ್ದಿದ್ದಾರೆ. ಕಂಡಕ್ಟರ್ ಬಾಗಿಲಿನಲ್ಲಿ ನಿಂತಿದ್ದಾಗ ಒಮ್ಮೆಗೇ ಅದು ತೆರೆದುಕೊಂಡಿರಬೇಕು, ಇಲ್ಲವೇ ಬಾಗಿಲಿನ ಚಿಲಕ ತೆರೆದುಕೊಂಡು ಒತ್ತಡಕ್ಕೆ ಅದು ತೆರೆದುಕೊಂಡಿರುವ ಸಾಧ್ಯತೆ ಇದೆ.
ಮಹದೇವಸ್ವಾಮಿ ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಹಳೇಪುರ ಗ್ರಾಮದವರು. ಅವರ ಸಾವಿನಿಂದ ಕುಟುಂಬಿಕರು ಕಂಗಾಲಾಗಿದ್ದು, ಆಸ್ಪತ್ರೆಗೆ ಧಾವಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ನಂಜನಗೂಡು ಡಿವೈಎಸ್ಪಿ ರಘು, ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು, ಚಾರ ಪೊಲೀಸ್ ಠಾಣೆಯ ಪಿಎಸ್ಐ ಜಯಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ ; Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ: ʼಬಳ್ಳಾರಿ ಗ್ಯಾಂಗ್ʼ ಕುರಿತೇ ಶಂಕೆ, ಅಲ್ಲೇ ಇದ್ದಾನೆ ಬಾಂಬರ್!
Road Accident : ಬೈಕ್-ಕಾರು ಡಿಕ್ಕಿಯಾಗಿ ಸವಾರ ಸಾವು
ದಾವಣಗೆರೆ : ದಾವಣಗೆರೆ ಜಿಲ್ಲೆಯ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರ ಗ್ರಾಮದಲ್ಲಿ ಬೈಕ್ ಮತ್ತು ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರ್ ನಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟಗಾಯಗಳಾಗಿವೆ.
ಚನ್ನಗಿರಿ ಕಡೆಯಿಂದ ಸಂತೆಬೆನ್ನೂರಿಗೆ ಬರುತ್ತಿದ್ದ ಕಾರು ಹಾಗೂ ಎದುರು ಬರುತ್ತಿರುವ ಬೈಕ್ ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಪರಸ್ಪರ ಡಿಕ್ಕಿ ಹೊಡೆದುಕೊಂಡ ಬಳಿಕ ಕಾರು ಮತ್ತು ಬೈಕ್‌ಗಳು ರಸ್ತೆಯಿಂದ ಕೆಳಗೆ ಜಿಗಿದು ಗುಂಡಿಗೆ ಬಿದ್ದಿವೆ. ಹೀಗಾಗಿ ಗಾಯಾಳುಗಳ ದೇಹಗಳು ಕೂಡಾ ಗುಂಡಿಯಲ್ಲೇ ಬಿದ್ದಿವೆ.
ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರನನ್ನು ದಾವಣಗೆರೆ ತಾಲೂಕಿನ ದ್ಯಾಮೇನಹಳ್ಳಿ ಗ್ರಾಮದ ಸಂತೋಷ (26) ಎಂದು ಗುರುತಿಸಲಾಗಿದೆ. ಕಾರು ಚಿಕ್ಕಮಗಳೂರು ಮೂಲದ್ದು ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಸಂತೆಬೆನ್ನೂರ ಹಾಗೂ ಚನ್ನಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಂತೆಬೆನ್ನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.