Site icon Vistara News

Self Harming : ಹಣ ಪಡೆದು ಕೈಕೊಟ್ಟ ಸ್ನೇಹಿತ; ಸಾಲಗಾರರ ಕಾಟಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ

Sushma And vishwa

ಮೈಸೂರು: ಕೊಟ್ಟ ಸಾಲ ವಾಪಸ್ಸು ಕೊಡಲಿಲ್ಲ ಎಂದು ಮನನೊಂದ ದಂಪತಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದಾರೆ. ವಿಶ್ವ(34), ಸುಷ್ಮಾ(28) ಆತ್ಮಹತ್ಯೆಗೆ ಶರಣಾದ ದಂಪತಿ.

ವಿಶ್ವ ಹಾಗೂ ಸುಷ್ಮಾ ದಂಪತಿ ಮೈಸೂರಿನ ಯರಗನಹಳ್ಳಿ ನಿವಾಸಿಯಾಗಿದ್ದಾರೆ. ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ವಿಶ್ವನಿಗೆ ಪಕ್ಕದಂಗಡಿಯ ಶಿವು ಎಂಬುವವನಿಗೆ ಬೇರೊಬ್ಬರಿಂದ ಸುಮಾರು 5 ಲಕ್ಷ ರೂ. ಸಾಲವನ್ನು ಕೊಡಿಸಿದ್ದ. ಆದರೆ ಶಿವು ಸಾಲವನ್ನು ಮರು ಪಾವತಿ ಮಾಡದೇ ಕ್ಯಾತೆ ತೆಗೆದು ಬೆದರಿಕೆ ಹಾಕುತ್ತಿದ್ದ. ಇತ್ತ ವಿಶ್ವನಿಗೆ ಹಣ ಕೊಟ್ಟವರು ಮನೆ ಮುಂದೆ ಬಂದು ವಾಪಸ್‌ ಕೊಡುವಂತೆ ಕೇಳಿದ್ದಾರೆ. ಇದರಿಂದ ವಿಶ್ವನಿಗೆ ದಿಕ್ಕು ತೋಚದಂತಾಗಿದೆ. ಈ ಅವಮಾನವನ್ನು ತಡೆಯಲು ಆಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ.

ಇನ್ನೂ ಚೋರನಹಳ್ಳಿ ರಾಜಣ್ಣ ಎಂಬಾತನಿಗೆ ತನ್ನ ಚಿನ್ನಾಭರಣ ಕೊಟ್ಟಿದ್ದ. ಆತನೂ ಆ ಚಿನ್ನವನ್ನು ವಾಪಸ್ಸು ಕೊಡದೆ ಸತಾಯಿಸಿದ್ದ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಪತ್ನಿಯೊಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸದ್ಯ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Murder Case : ಗ್ರಾಮ ದೇವತೆಯ ಜಾತ್ರೆ ದಿನವೇ ಹೆಂಡತಿ ಬಲಿ ಕೊಟ್ಟ ಕುಡುಕ ಗಂಡ

ಮಕ್ಕಳಾಗಿಲ್ಲ ಎಂಬ ಕೊರಗು; ವಿಷ ಸೇವಿಸಿ ದಂಪತಿ ಆತ್ಮಹತ್ಯೆ

ಆನೇಕಲ್: ವಿಷ ಸೇವಿಸಿ ದಂಪತಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದೆ. ಆನೇಕಲ್‌ನ ರಾಜ್ಯ ಗಡಿಭಾಗ ತಮಿಳುನಾಡಿನ ಥಳಿಯಲ್ಲಿ ಘಟನೆ ನಡೆದಿದೆ. ದೀಪಾ, ವಂಶಿಧರ್ ಪಾಸ್ಲುಲೇಟಿ ಮೃತ ದಂಪತಿ.

ವಂಶಿಧರ್‌ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು. ಆದರೆ ಕಳೆದ ಒಂದು ವರ್ಷದ ಹಿಂದೆ ಕೆಲಸ ಬಿಟ್ಟು, ತಮಿಳುನಾಡಿನ ಥಳಿಯಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದರು.

ದಂಪತಿಗೆ ಮದುವೆಯಾಗಿ ಹಲವು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ದಂಪತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ವಿಷ ಸೇವಿಸಿ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡು ಮೂರು ದಿನಗಳ ಕಾಲ ನಂತರ ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ ದುರ್ವಾಸನೆ ಬಂದಿದೆ. ವಂಶಿಧರ್‌ ಮನೆ ಬಾಗಿಲು ತಟ್ಟಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ನೆರೆಹೊರೆಯವರಿಗೆ ಅನುಮಾನಗೊಂಡಿದ್ದಾರೆ. ನಂತರ ಮನೆಯ ಬಾಗಿಲು ಹೊಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿದೆ.

ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕೊಳೆತು ಹೋಗಿದ್ದ ಮೃತದೇಹಗಳನ್ನು ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಥಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version