Site icon Vistara News

Self Harming : ಪತಿಯ ಅಗಲಿಕೆಯಿಂದ ಮನನೊಂದು ಪತ್ನಿ ಆತ್ಮಹತ್ಯೆ; ಸಾವಿನಲ್ಲಿ ಒಂದಾದ ಮಗಳು

Self Harming In mysore

ಮೈಸೂರು: ಮೈಸೂರಿನ ಸರಗೂರು ತಾಲೂಕಿನ ಶಂಖಹಳ್ಳಿ ಗ್ರಾಮದಲ್ಲಿ ತಾಯಿ-ಮಗಳು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಗೀತಾ (40), ಮಗಳು ಪೂರ್ಣಿಮ (15) ಮೃತ ದುರ್ದೈವಿಗಳು.

ಕೆಲವು ದಿನಗಳ ಹಿಂದೆ ಗೀತಾ ಅವರ ಪತಿ ರಾಜನಾಯಕ ಎಂಬುವವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತಿಯ ಅಗಲಿಕೆಯ ನೋವಿನಿಂದ ಗೀತಾ ಹೊರಬಂದಿರಲಿಲ್ಲ. ತವರು ಮನೆಯವರು ಸಾಕಷ್ಟು ಆತ್ಮಸ್ಥೈರ್ಯ ತುಂಬಿದ್ದರು.

ಆದರೂ ಪತಿಯ ಅಗಲಿಕೆಯ ನೋವು ಹಗಲಿರುಳು ಕಾಡುತ್ತಿತ್ತು. ಪತಿಯಿಲ್ಲದೆ ಒಬ್ಬಂಟಿಯಾದ ಗೀತಾ ಖಿನ್ನತೆಗೆ ಜಾರಿದ್ದರು. ಪದೇಪದೆ ಪತಿ ನೆನೆಪು ಕಾಡಿದ್ದು, ಇದರಿಂದ ಮನನೊಂದ ಗೀತಾ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇತ್ತ ತಾಯಿ ಸಾವಿನ ಸುದ್ದಿ ಕೇಳಿ ಮಗಳು ಪೂರ್ಣಿಮಾ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಯಿ-ಮಗಳ ಸಾವಿನ ಸುದ್ದಿ ಕೇಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸರಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಸರಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಇಬ್ಬರ ದುರಂತ ಅಂತ್ಯ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ ಸೂಸೈಡ್‌

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರ ಸಮೀಪದ ಯಡೆಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪರಶುರಾಮ್ (17) ನೇಣಿಗೆ ಶರಣಾದ ವಿದ್ಯಾರ್ಥಿ.

ಪರಶುರಾಮ್‌ ಆನಂದಪುರದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಓದುತ್ತಿದ್ದ. ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ಪರಶುರಾಮ್‌ ಮನೆಯ ಹಿಂಭಾಗದಲ್ಲಿ ನೇಣಿಗೆ ಶರಣಾದ್ದಾನೆ.

ಪರೀಕ್ಷೆ ಭಯಕ್ಕೆ ಮೃತಪಟ್ಟನಾ ಅಥವಾ ಬೇರೆಯಾವುದಾದರೂ ವಿಚಾರಕ್ಕೆ ಮಾನಸಿಕವಾಗಿ ಖಿನ್ನತೆ ಅನುಭವಿಸುತ್ತಿದ್ದನ್ನಾ ಎಂಬುದು ತಿಳಿದು ಬಂದಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ಆನಂದಪುರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಗನ ಮೃತದೇಹವನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Road Accident : ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಲಾರಿ ಛಿದ್ರ ಛಿದ್ರ; ಉಸಿರು ಚೆಲ್ಲಿದ ಚಾಲಕ

Indian Student: ಲಂಡನ್‌ನಲ್ಲಿ ಯಮಸ್ವರೂಪಿ ಟ್ರಕ್‌ ಹರಿದು ಭಾರತದ ವಿದ್ಯಾರ್ಥಿನಿ ಸಾವು

ಲಂಡನ್‌: ಬ್ರಿಟನ್‌ ರಾಜಧಾನಿ ಲಂಡನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಭಾರತದ ವಿದ್ಯಾರ್ಥಿನಿ (Indian Student) ಮೃತಪಟ್ಟಿದ್ದಾರೆ. ಸೈಕಲ್‌ ತುಳಿಯುತ್ತ ಮನೆಗೆ ಹಿಂತಿರುಗುತ್ತಿದ್ದ ವೇಳೆ ಟ್ರಕ್‌ ಹರಿದು 33 ವರ್ಷದ ಚೆಯಿಸ್ತಾ ಕೊಚ್ಚಾರ್‌ (Cheistha Kocchar) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್‌ 19ರಂದು ಅಪಘಾತ ಸಂಭವಿಸಿದೆ. ಚೆಯಿಸ್ತಾ ಕೊಚ್ಚಾರ್‌ ಅವರು ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ (London School of Economics) ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದರು.

ಚೆಯಿಸ್ತಾ ಕೊಚ್ಚಾರ್‌ ಅವರು ನಿವೃತ್ತ ಲೆಫ್ಟಿನೆಂಟ್‌ ಜನರಲ್‌, ಸೆಲ್ಲುಲರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (COAI) ನಿರ್ದೇಶಕ ಡಾ.ಎಸ್‌.ಪಿ. ಕೊಚ್ಚಾರ್‌ ಅವರ ಪುತ್ರಿಯಾಗಿದ್ದಾರೆ. ಚೆಯಿಸ್ತಾ ಕೊಚ್ಚಾರ್‌ ಅವರು ಲಂಡನ್‌ಗೆ ತೆರಳುವ ಮೊದಲು ನೀತಿ ಆಯೋಗದಲ್ಲೂ ಕೆಲಸ ಮಾಡಿದ್ದರು. ಇವರು ಕಳೆದ ವರ್ಷವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಉಪಯೋಗವಾಗಲಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪುತ್ರಿಯ ನಿಧನದ ಹಿನ್ನೆಲೆಯಲ್ಲಿ ಡಾ.ಎಸ್‌.ಪಿ.ಕೊಚ್ಚಾರ್‌ ಅವರು ಭಾವನಾತ್ಮಕವಾಗಿ ಪೋಸ್ಟ್‌ ಮಾಡಿದ್ದಾರೆ. “ನನ್ನ ಪುತ್ರಿಯು ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಿಂದ ಮನೆಗೆ ಹೊರಟಿದ್ದಳು. ಆಗ ಆಕೆಯ ಮೇಲೆ ಟ್ರಕ್‌ ಹರಿದಿದೆ. ನಮ್ಮೆಲ್ಲರನ್ನು ಚೆಯಿಸ್ತಾ ಕೊಚ್ಚಾರ್‌ ಅಗಲಿದ್ದಾಳೆ. ಅವಳ ನೆನಪುಗಳು ಮಾತ್ರ ನನ್ನಲ್ಲಿ ಉಳಿದಿವೆ” ಎಂದು ಭಾವುಕರಾಗಿದ್ದಾರೆ. ಮಗಳ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Jaahnavi Kandula: ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿನಿಗೆ ಕಾರು ಗುದ್ದಿಸಿ ನಕ್ಕ ಪೊಲೀಸ್;‌ ಸಾವಿಗೆ ಭಾರತ ಖಂಡನೆ

ಚೆಯಿಸ್ತಾ ಕೊಚ್ಚಾರ್‌ ನಿಧನಕ್ಕೆ ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್‌ ಕಾಂತ್‌ ಅವರೂ ಸಂತಾಪ ಸೂಚಿಸಿದ್ದಾರೆ. “ಚೆಯಿಸ್ತಾ ಕೊಚ್ಚಾರ್‌ ಅವರು ನೀತಿ ಆಯೋಗದಲ್ಲಿ ನನ್ನೊಂದಿಗೆ ಕಾರ್ಯನಿರ್ವಹಿಸಿದ್ದರು. ಅವರ ಕಾರ್ಯಶೈಲಿಯು ಅದ್ಭುತವಾಗಿತ್ತು. ಆದರೆ, ಲಂಡನ್‌ನಲ್ಲಿ ಅವರು ಅಪಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿದು ಅತೀವ ದುಃಖವಾಯಿತು. ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂಬುದಾಗಿ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ, ಅವರೊಂದಿಗೆ ಇರುವ ಫೋಟೊಗಳನ್ನು ಕೂಡ ಶೇರ್‌ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version