Site icon Vistara News

Student Death: ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು; ಮನೆ ಬಿಟ್ಟು ಹೋದ ತಂದೆಗಾಗಿ ಕಾದಿಟ್ಟಿದ್ದಾರೆ ಶವ

student death road accident

ಮೈಸೂರು: ರಸ್ತೆ ವಿಭಜಕಕ್ಕೆ (divider) ಸ್ಕೂ ಟರ್ ಡಿಕ್ಕಿಯಾದ (Road accident, Scooter hit) ಪರಿಣಾಮ‌ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ (Student Death) ಸಾವಿಗೀಡಾಗಿದ್ದಾಳೆ. ಮನೆ ಬಿಟ್ಟು ಹೊರಟುಹೋಗಿರುವ ತಂದೆ ಮುದ್ದು ಮಗಳ ಮುಖದ ಅಂತಿಮ ದರ್ಶನಕ್ಕಾಗಿ ಬರಬಹುದು ಎಂಬ ಆಸೆಯಿಂದ ವಿದ್ಯಾರ್ಥಿನಿಯ ಶವವನ್ನು ಕುಟುಂಬಸ್ಥರು ಕಾದಿರಿಸಿದ್ದಾರೆ.

ಮೈಸೂರಿನ ಕೂರ್ಗಳ್ಳಿಯ ಬೆಮೆಲ್ ಮುಂಭಾಗ ಘಟನೆ ನಡೆದಿದೆ. ಕನಕಗಿರಿ ನಿವಾಸಿ ನಾಗರಾಜು ಎಂಬವರ ಪುತ್ರಿ ಕವನಾ(18) ಮೃತ ವಿದ್ಯಾರ್ಥಿನಿ. ಈಕೆ ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ತರಗತಿ ಓದುತ್ತಿದ್ದಳು. ನಿನ್ನೆ ಬೆಳಗ್ಗೆ ಸ್ನೇಹಿತರ ಜತೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಆಯ ತಪ್ಪಿ ಡಿವೈಡರ್‌ಗೆ ಬೈಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕವನಾ ಕೆಳಕ್ಕೆ ಬಿದ್ದಿದ್ದಾಳೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ನಿಧನ‌ ಹೊಂದಿದ್ದಾಳೆ.

ಈಕೆಯ ತಂದೆ ನಾಗರಾಜು ಮೂರು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದರು. ಮಗಳ ಸಾವಿನ ಸುದ್ದಿ ತಿಳಿದರಾದರೂ ಆಕೆಯ ಮುಖ ಕೊನೆಯ ಬಾರಿಗೆ ನೋಡಲು ಬರಬಹುದು ಎಂಬ ನಿರೀಕ್ಷೆಯಲ್ಲಿ ಕುಟುಂಬವಿದ್ದು, ಒಂದು ದಿನದ ಮಟ್ಟಿಗೆ ಮೃತದೇಹವನ್ನು ಕುಟುಂಬ ಕಾದಿರಿಸಿದೆ. ವಾಪಸ್ ಬರುವಂತೆ ನಾಗರಾಜು ಅವರಿಗೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಎಲ್ಲೇ ಇದ್ದರೂ ಮಗಳ ಅಂತ್ಯಕ್ರಿಯೆಗೆ ಬಂದು ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಮೈಸೂರಿನ ವಿವಿ ಪುರಂ ಸಂಚಾರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ ಸೆರೆ

ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಹಗ್‌ ಮಾಡಿ, ಕಿಸ್‌ ಕೊಟ್ಟು ಪರಾರಿಯಾಗಿದ್ದ ಕಾಮುಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೋಣನಕುಂಟೆ ಬಳಿಯ ಕೃಷ್ಣಾನಗರದಲ್ಲಿ ನಡೆದಿದ್ದ ಘಟನೆಯ (Woman Harassed) ವಿಡಿಯೊ ಭಾರಿ ವೈರಲ್‌ ಆಗಿತ್ತು. ಇದರಿಂದ ರಾಜಧಾನಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್‌ಐ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಕ್ಯಾಬ್ ಚಾಲಕ ಸುರೇಶ್(25) ಬಂಧಿತ ಆರೋಪಿ. ಕೋಣನಕುಂಟೆ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ಡ್ರಾಪ್ ಮಾಡೋದಕ್ಕೆ ಬಂದಿದ್ದ ಆರೋಪಿ, ರಸ್ತೆ ಮೇಲೆ ಹೋಗುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ್ದ. ಮಹಿಳೆಯು ಮನೆಯ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಬಳಿ ಬಂದಿದ್ದ. ಅವರನ್ನು ಬಲವಂತವಾಗಿ ಹಿಡಿದು ತಬ್ಬಿಕೊಂಡು, ಕಿಸ್‌ ಕೊಟ್ಟಿದ್ದ. ದುಷ್ಕರ್ಮಿಯಿಂದ ಬಿಡಿಸಿಕೊಂಡು ಕೂಗುತ್ತ ಮಹಿಳೆ ಓಡಿದ್ದರು. ಅವರ ಹಿಂದೆಯೇ ಓಡಿ ಹೋದ ದುರುಳ, ಮತ್ತೆ ಕಿರುಕುಳ ನೀಡಿ ಓಡಿಹೋಗಿದ್ದ.

ಶುಕ್ರವಾರ ಬೆಳಗ್ಗೆ‌ ನಡೆದಿದ್ದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪಿಎಸ್‌ಐ ಹಾಗೂ ಇಬ್ಬರು ಸಿಬ್ಬಂದಿಯನ್ನು ಡಿಸಿಪಿ ಲೊಕೇಶ್‌ ಅಮಾನತು ಮಾಡಿದ್ದಾರೆ.

ಇದನ್ನೂ ಓದಿ: Murder Case : ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ; ಕೈ-ಕಾಲು ಬಿಗಿದು, ಕಲ್ಲು ಕಟ್ಟಿ ಕೆರೆಗೆ ಎಸೆದ ಹಂತಕರು

Exit mobile version