Site icon Vistara News

Suicide Case | ಸಾಲಕ್ಕೆ ಹೆದರಿ ಬಾವಿಗೆ ಬಿದ್ದು ದಂಪತಿ‌ ಆತ್ಮಹತ್ಯೆ

Suicide Case

ಮೈಸೂರು : ಕೆ.ಆರ್.ನಗರ ತಾಲೂಕಿನ ಭೇರ್ಯ ಸಮೀಪದ ಸಂಬ್ರವಳ್ಳಿ ಗ್ರಾಮದಲ್ಲಿ ಸಾಲಕ್ಕೆ ಹೆದರಿ ದಂಪತಿ‌ ಆತ್ಮಹತ್ಯೆಗೆ (Suicide Case) ಗುರುವಾರ (ಸೆ.22) ಶರಣಾಗಿದ್ದಾರೆ.

ಬೆಟ್ಟಪ್ಪ(50) ಹಾಗೂ ರುಕ್ಮಿಣಿ(43) ಮೃತ ದುರ್ದೈವಿಗಳಾಗಿದ್ದಾರೆ. ಗ್ರಾಮದ ಜಮೀರ್ ಸಾಹೇಜ್‌ ತೋಟದಲ್ಲಿ‌ 20 ವರ್ಷಗಳಿಂದ ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕೆಲಸ ಮಾಡಿಕೊಂಡು ತೋಟದ ಮನೆಯಲ್ಲೇ ವಾಸವಿದ್ದರು.

ಇತ್ತೀಚೆಗೆ ಮಕ್ಕಳ ಮದುವೆ ಮಾಡಿದ್ದರು. ಸಂಬ್ರವಳ್ಳಿಯಲ್ಲಿ ಸಾಲ ಮಾಡಿ ಮನೆ ಸಹ ಕಟ್ಟಿದ್ದರು. ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತೋಟದಲ್ಲಿದ್ದ ಬಾವಿಗೆ ಇಬ್ಬರು ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

ಇದನ್ನೂ ಓದಿ | Family suicide: ಆತ್ಮಹತ್ಯೆ ಮಾಡಿಕೊಂಡ ಮಹೇಶ್‌ ಮೇಲೆ ಕೊಲೆ ದೂರು, ಅಂಬರೀಷ್‌ ಅಭಿಮಾನಿಯ ಆಘಾತಕಾರಿ ಸಾವು

Exit mobile version