ಮೈಸೂರು: ಕಾಲೇಜಿನಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ (Suicide Cases) ಯತ್ನಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ವಿಡಿಯೊ ಹರಿಬಿಟ್ಟು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಖಾಸಗಿ ಕಾಲೇಜು ವಿದ್ಯಾರ್ಥಿನಿ ಕಾಲೇಜಿನಲ್ಲಿ ತಾರತಮ್ಯ ಮಾಡುವ ವಿಚಾರಕ್ಕೆ ಮಾತ್ರೆ ಸೇವಿಸಿ, ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಡಿಯೊ ಮಾಡಿ ʻʻನಮ್ಮ ಕಾಲೇಜಿನಲ್ಲಿ ತುಂಬಾ ಸಮಸ್ಯೆ ಆಗುತ್ತಿದೆ. ನಾನು ಡಿಪ್ರೆಶನ್‌ಗೆ ಒಳಗಾಗುತ್ತಿದ್ದೇನೆ. ಕಾಲೇಜಿನಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ. ಹಾಜರಾತಿ ಕಡಿಮೆ ಎಂದು ಕಿರುಕುಳ ನೀಡುತ್ತಿದ್ದಾರೆ. ಕಳೆದ ಬಾರಿ ಕೂಡ ಅದೇ ನೆಪವೊಡ್ಡಿ ಹಣ ಕಿತ್ತಿದ್ದರು. ದಂಡ ಎಂದು ಹಣ ಪಡೆದುಕೊಂಡು ರಶೀದಿ ನೀಡಿರಲಿಲ್ಲ.ನನ್ನ ಪರಿಸ್ಥಿತಿಯನ್ನು ಯಾರೂ ಕೇಳುತ್ತಿಲ್ಲʼʼ ಎಂದು ಹೇಳಿದ್ದಾಳೆ. ಇದೀಗ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ | Suicide Cases | ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು
ಕತ್ತು ಕುಯ್ದುಕೊಂಡು ನರಳುತ್ತಿದ್ದ ವಿದ್ಯಾರ್ಥಿನಿಯರನು ಮನೆಯವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಚಿಕಿತ್ಸೆ ನೀಡಲಾಗುತ್ತಿದೆ. ಜಯಲಕ್ಷ್ಮಿಪುರಂ ಠಾಣಾ ಪೊಲೀಸರಿಂದ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಲೋ ಬಿಪಿ ಇದ್ದ ಕಾರಣ ಕೆಳಗೆ ಬಿದ್ದಾಗ ಏಟಾಗಿದೆ ಎಂಬ ಸುಳ್ಳು ಹೇಳಿಕೆಯನ್ನು ವಿದ್ಯಾರ್ಥಿನಿ ನೀಡಿದ್ದಾರೆ ಎನ್ನಲಾಗಿದೆ. ಹಾಗೂ ಪೋಷಕರು ಕೂಡ ಪುತ್ರಿ ಚೆನ್ನಾಗಿದ್ದಾಳೆ ಎನ್ನುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | Suicide Cases | 2021ರಲ್ಲಿ ದಾಖಲೆಯ 10,560 ಆತ್ಮಹತ್ಯೆ ಪ್ರಕರಣಗಳು, ಸಾವಿಗೆ ಕಾರಣ ಏನು?