ಮೈಸೂರು: ತಡರಾತ್ರಿ ಮನೆ ಬೀಗ ಮುರಿದ ಕಳ್ಳರು (theft Case) ತಮ್ಮ ಕೈ ಚಳಕ ತೋರಿಸಿದ್ದಾರೆ. ಮೈಸೂರಿನ ಜೆ.ಪಿ ನಗರದ ಎರಡನೇ ಹಂತದಲ್ಲಿ ಘಟನೆ ನಡೆದಿದೆ. ಪೊಲೀಸರ ಮನೆಗೆ ನುಗ್ಗಿದ ಕಳ್ಳರು ಸಿನಿಮೀಯ ರೀತಿಯಲ್ಲಿ ಕದಿಯಲು ಮುಂದಾಗಿದ್ದರು. ಆದರೆ ಅವರ ಟೈಂ ಕೈಕೊಟ್ಟಿತ್ತು ಕಳ್ಳರು ಮನೆಯಲ್ಲಿರುವಾಗಲೇ ಮಾಲೀಕರು ಮನೆಗೆ ವಾಪಸ್ ಆಗಿದ್ದರು.
ಮನೆ ಮಾಲೀಕರನ್ನು ಕಂಡು ಗಾಬರಿಗೊಂಡ ಕಳ್ಳರು ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮನೆ ಮಂದಿಗೆಲ್ಲ ಚಾಕು ತೋರಿಸಿ ಎಸ್ಕೇಪ್ ಆಗಿದ್ದಾರೆ. ಎಸ್ಕೇಪ್ ಆಗುವ ವೇಳೆ ಕಳ್ಳತನಕ್ಕೆ ಬಳಸಿದ್ದ ಕಬ್ಬಿಣದ ರಾಡ್, ಸಲಾಕೆ ,ಎಲೆಕ್ಟ್ರಿಕ್ ಸಾಮಾನು, ಎರಡು ಬ್ಯಾಗ್ ಸೇರಿದಂತೆ ತಮ್ಮ ಲಗೇಜ್‌ಗಳನ್ನು ಬಿಟ್ಟು ಓಡಿಹೋಗಿದ್ದಾರೆ.
ಕಳ್ಳರು ಓಡಿ ಹೋದ ಬಳಿಕ ಮನೆಯೊಳಗೆ ತೆರಳಿ ನೋಡಿದಾಗ 135 ಗ್ರಾಂಗೂ ಅಧಿಕ ಚಿನ್ನಾಭರಣ ದೋಚಿರುವುದು ಖಚಿತವಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡಸಿದ್ದಾರೆ. ಕಳ್ಳರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ: Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ
ಚಳ್ಳಕೆರೆ ಪೊಲೀಸರ ವಿರುದ್ಧವೇ ದೂರು ಕೊಟ್ಟ ಯುವಕ
ಯುವಕನೊಬ್ಬ ಚಳ್ಳಕೆರೆ ಪೊಲೀಸರ ವಿರುದ್ಧ ದೂರು ಕೊಟ್ಟಿದ್ದಾನೆ. ಚಿತ್ರದುರ್ಗದ ಚಳ್ಳಕೆರೆ ಡಿವೈಎಸ್‌ಪಿ ರಾಜಣ್ಣ ಅವರಿಗೆ ಪೃಥ್ವಿ ಎಂಬಾತ ದೂರು ನೀಡಿದ್ದಾನೆ. ದೂರಿನ ಪ್ರಕಾರ ಪೃಥ್ವಿ ಪ್ರವಾಸಕೆಂದು ಹೋದಾಗ ಆತನ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಗಾಬರಿಗೊಂಡ ಪೃಥ್ವಿ ತಾಯಿಈ ಸಂಬಂಧ ದೂರು ನೀಡಲು ಹೋದಾಗ ಚಳ್ಳೇಕರೆ ಪೊಲೀಸರು ದೂರು ಸ್ವೀಕರಿಸದೇ ನಿಂದಿಸಿ ಕಳಿಸಿದ್ದಾರೆ.
ಇತ್ತ ಪೃಥ್ವಿ ಪ್ರವಾಸದಿಂದ ವಾಪಸ್ ಬಂದಾಗ ಠಾಣೆಯಲ್ಲಿ ನಡೆದದ್ದನ್ನು ಹೇಳಿದ್ದಾರೆ. ಹೀಗಾಗಿ ಪೃಥ್ವಿ ತನ್ನ ತಾಯಿ ಜತೆಗೆ ವಾಪಸ್ ಚಳ್ಳಕೆರೆ ಠಾಣೆಗೆ ತೆರಳಿ, ದೂರು ಸ್ವೀಕರಿಸದ ಸಂಬಂಧ ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು ಪೃಥ್ವಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ ತಾಯಿ ಮುಂದೆಯೇ ಅವಾಚ್ಯವಾಗಿ ನಿಂದಿಸಿದ್ದಾರೆ. ಪೊಲೀಸರ ನಡೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಕ್ಕೆ ಮೊಬೈಲ್ ಕಸಿದು, ವಿಡಿಯೋ ಡಿಲೀಟ್ ಮಾಡಿದ್ದಾರೆ. ಹೀಗಾಗಿ ಹಲ್ಲೆ ಮಾಡಿದ್ದಲ್ಲದೇ ಮೊಬೈಲ್ ಕಸಿದು ಸಾಕ್ಷ್ಯವನ್ನು ನಾಶ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಡಿವೈಎಸ್‌ಪಿ ಪೃಥ್ವಿ ದೂರು ನೀಡಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ