Site icon Vistara News

Vishal Shaktidhama Visit | ʻಶಕ್ತಿಧಾಮʼದಲ್ಲಿ ನಟ ವಿಶಾಲ್‌: ಅಪ್ಪು ನೆನೆದು ಭಾವುಕ

Vishal Shaktidhama Visit

ಮೈಸೂರು: ಕರ್ನಾಟಕ ರತ್ನ ಡಾ. ಪುನೀತ್ ರಾಜ್​ಕುಮಾರ್ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದರೂ ಅವರ ನೆನಪು ಅಮರ. ಅಪ್ಪು ಹಾಕಿಕೊಟ್ಟ ಹಾದಿಯಲ್ಲೇ ಹಲವು ಸೆಲೆಬ್ರಿಟಿಗಳು ಸಾಗುತ್ತಿದ್ದಾರೆ. ಇದೀಗ ಕಾಲಿವುಡ್ ನಟ ವಿಶಾಲ್ (Vishal Shaktidhama Visit) ಕೂಡ ಅಪ್ಪು ಅವರ ಹಾದಿಯಲ್ಲೇ ಸಾಗಲು ಮುಂದಾಗಿದ್ದು, ಮೈಸೂರಿನ ʻಶಕ್ತಿಧಾಮʼಕ್ಕೆ ಭೇಟಿ ನೀಡಿದ್ದಾರೆ.

ಕೆಲ ತಿಂಗಳ ಹಿಂದೆ ನಡೆದಿದ್ದ ಪುನೀತ್ ನಮನ ಕಾರ್ಯಕ್ರಮದಲ್ಲಿ ನಟ ವಿಶಾಲ್ ಮಾತೊಂದನ್ನು ಕೊಟ್ಟಿದ್ದರು. ಡಾ. ಪುನೀತ್ ರಾಜ್​​ಕುಮಾರ್ ಜವಾಬ್ದಾರಿ ವಹಿಸಿಕೊಂಡಿದ್ದ ಶಕ್ತಿಧಾಮಕ್ಕೆ ಬೆನ್ನೆಲುಬಾಗಿ ನಿಲ್ಲುವುದಾಗಿ ಹೇಳಿದ್ದರು. ಶಕ್ತಿಧಾಮ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಇದಕ್ಕಾಗಿ ಮನೆಯ ಖರೀದಿಗೆ ಇಟ್ಟುಕೊಂಡಿದ್ದ ಹಣವನ್ನು ಬಳಸುವುದಾಗಿ ವಿಶಾಲ್ ತಿಳಿಸಿದ್ದರು. ಬಳಿಕ ವಿಶಾಲ್ ಹಾಗೂ ಶಿವರಾಜಕುಮಾರ್‌ ಕೆಲವು ಕಾಲ ಚರ್ಚೆ ನಡೆಸಿದರು.

ಶಕ್ತಿಧಾಮಕ್ಕೆ ಭೇಟಿ ನೀಡಿ ಹೇಗೆ ಸಹಾಯ ಮಾಡಬಹುದೆಂಬ ವಿಚಾರವನ್ನು ಪರಿಶೀಲಿಸುವಂತೆ ವಿಶಾಲ್​​ಗೆ ಶಿವರಾಜಕುಮಾರ್‌ ಸಲಹೆ ನೀಡಿದ್ದರು. ಇದಾದ ಬಳಿಕ ನಟ ವಿಶಾಲ್ ಇಂದು ಮೈಸೂರಿನ ʻಶಕ್ತಿಧಾಮʼಕ್ಕೆ ಭೇಟಿ ನೀಡಿದ್ದಾರೆ. ಸಂಪೂರ್ಣ ವಿವರಣೆಯನ್ನೂ ನಟ ವಿಶಾಲ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Puneeth lucky man | ಲಕ್ಕಿ ಮ್ಯಾನ್ ರಿಲೀಸ್‌ಗೆ ಕ್ಷಣಗಣನೆ: ಅಪ್ಪು ಫ್ಯಾನ್ಸ್‌ಗೆ ಡಬಲ್‌ ಗಿಫ್ಟ್!

ಅಪ್ಪು ಸೇವೆ
‘ಶಕ್ತಿಧಾಮ’ ಎಂಬ ಹೆಣ್ಣುಮಕ್ಕಳ ಆಸರೆ ತಾಣ ಆರಂಭಿಸಿದ ಕೀರ್ತಿ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಸಲ್ಲುತ್ತದೆ. ಸಾವಿರಾರು ಬಡ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿದ ಕೀರ್ತಿ ‘ಶಕ್ತಿಧಾಮ’ಕ್ಕೆ ಸಲ್ಲುತ್ತದೆ. ಆದರೆ, ಪಾರ್ವತಮ್ಮ ರಾಜ್‌ಕುಮಾರ್ ನಿಧನರಾದ ನಂತರ ಶಕ್ತಿಧಾಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪವರ್​ಸ್ಟಾರ್ ಪುನೀತ್ ರಾಜ್​​ಕುಮಾರ್ ವಹಿಸಿಕೊಂಡಿದ್ದರು.

ವಿಶಾಲ್ ಚರ್ಚೆ
ಕರ್ನಾಟಕ ರತ್ನ ಅಪ್ಪು ಅಕಾಲಿಕ ಮರಣದ ನಂತರ ‘ಶಕ್ತಿಧಾಮ’ದಲ್ಲಿ ದುಖಃ ತುಂಬಿ ಹೋಗಿತ್ತು. ಇದಾದ ಬಳಿಕ ಅಪ್ಪು ಅವರ ಹಿರಿಯ ಸಹೋದರ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್​ಕುಮಾರ್ ಶಕ್ತಿಧಾಮವನ್ನು ನೋಡಿಕೊಳ್ಳುತ್ತಿದ್ದರು. ಇದೀಗ ಶಿವಣ್ಣ ಮಾಡುತ್ತಿರುವ ಕಾರ್ಯಕ್ಕೆ ಹೆಗಲು ನೀಡಲು ವಿಶಾಲ್ ಮುಂದಾಗಿದ್ದಾರೆ. ಶಕ್ತಿಧಾಮಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ʻಶಕ್ತಿಧಾಮʼಕ್ಕೆ ಭೇಟಿ ನೀಡಿದಾಗ ಮಕ್ಕಳ ಜತೆ ನಟ ವಿಶಾಲ್ ಚರ್ಚೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳ ಜತೆಯಲ್ಲಿ ಮಾತನಾಡಿದ ನಟ ವಿಶಾಲ್, ಶಕ್ತಿಧಾಮದ ವಿದ್ಯಾರ್ಥಿಗಳಲ್ಲಿ ಲವಲವಿಕೆ ಇದೆ. ಮಕ್ಕಳ ಜತೆ ಮಾತನಾಡಿದೆ. ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದು ನಟ ವಿಶಾಲ್ ಹೇಳಿದ್ದಾರೆ. ʻಲಾಠಿʼ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ವಿಶಾಲ್ ಬ್ಯುಸಿಯಾಗಿದ್ದರೂ, ಬಿಡುವು ಮಾಡಿಕೊಂಡು ʻಶಕ್ತಿಧಾಮʼಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ, ಡಾ. ಪುನೀತ್ ರಾಜ್​ಕುಮಾರ್ ನಮನ ಕಾರ್ಯಕ್ರಮದಲ್ಲಿ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ವಿಶಾಲ್ ಮುಂದಾಗಿದ್ದಾರೆ.

ಇದನ್ನೂ ಓದಿ: Sudeep Puneeth | ಸುದೀಪ್-ಪುನೀತ್‌ ಬಾಂಧವ್ಯಕ್ಕೆ ಸಾಕ್ಷಿಯಾಯ್ತು ಹುಟ್ಟುಹಬ್ಬ ಸಂಭ್ರಮ

Exit mobile version