Puneeth lucky man | ಲಕ್ಕಿ ಮ್ಯಾನ್ ರಿಲೀಸ್‌ಗೆ ಕ್ಷಣಗಣನೆ: ಅಪ್ಪು ಫ್ಯಾನ್ಸ್‌ಗೆ ಡಬಲ್‌ ಗಿಫ್ಟ್! - Vistara News

ಸಿನಿಮಾ

Puneeth lucky man | ಲಕ್ಕಿ ಮ್ಯಾನ್ ರಿಲೀಸ್‌ಗೆ ಕ್ಷಣಗಣನೆ: ಅಪ್ಪು ಫ್ಯಾನ್ಸ್‌ಗೆ ಡಬಲ್‌ ಗಿಫ್ಟ್!

4 ದಶಕಗಳ ಹಿಂದೆ ಇತಿಹಾಸ ನಿರ್ಮಿಸಿದ್ದ ಭಕ್ತ ಪ್ರಹ್ಲಾದ ಸಿನಿಮಾ ರಿಲೀಸ್‌ ಡೇಟ್‌ಗೂ ಲಕ್ಕಿ ಮ್ಯಾನ್ ಬಿಡುಗಡೆ ದಿನಾಂಕಕ್ಕೂ ನಂಟು ಬೆಸಿದಿದೆ. ಇದೇ ವಿಚಾರ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ.

VISTARANEWS.COM


on

Puneeth lucky man
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

‌ಬೆಂಗಳೂರು: ಡಾ. ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಕಮರ್ಷಿಯಲ್‌ ಚಿತ್ರ ಮತ್ತೊಂದು ಬ್ಲಾಕ್‌ ಬಸ್ಟರ್‌ ಆಗುವ ಮುನ್ಸೂಚನೆ ನೀಡಿದೆ. ‘ಲಕ್ಕಿ ಮ್ಯಾನ್’ (Puneeth lucky man) ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದ್ದು, ಎಲ್ಲೆಲ್ಲೂ ಅಪ್ಪು ಅಬ್ಬರ ಶುರು ಆಗಿದೆ.

ಮತ್ತೊಂದು ಕಡೆ ‘ಜೇಮ್ಸ್’‌ ರೀತಿ ಲಕ್ಕಿ ಮ್ಯಾನ್ ಸಿನಿಮಾಗೂ ಅಪ್ಪು ಫ್ಯಾನ್ಸ್‌ ಪ್ರಮೋಷನ್‌ ಮಾಡುತ್ತಿದ್ದಾರೆ. ಇದೇ ಹೊತ್ತಲ್ಲಿ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಅಭಿಮಾನಿಗಳು ಮತ್ತಷ್ಟು ಖುಷಿಯಾಗಿದ್ದಾರೆ.

ಅಂದಹಾಗೆ ಕಾಕತಾಳೀಯ ಎಂಬಂತೆ ಲಕ್ಕಿ ಮ್ಯಾನ್ ಬಿಡುಗಡೆ ದಿನಾಂಕ & ಭಕ್ತ ಪ್ರಹ್ಲಾದ ಸಿನಿಮಾ ಮಧ್ಯೆ ಲಿಂಕ್‌ ಮ್ಯಾಚ್‌ ಆಗುತ್ತಿದೆ. ಚಂದನವನದಲ್ಲಿ 4 ದಶಕಗಳ ಹಿಂದೆ ಹೊಸ ಇತಿಹಾಸ ನಿರ್ಮಿಸಿದ್ದ ಭಕ್ತ ಪ್ರಹ್ಲಾದ ಸಿನಿಮಾದ ರಿಲೀಸ್‌ ಡೇಟ್‌ಗೂ ಲಕ್ಕಿ ಮ್ಯಾನ್ ಬಿಡುಗಡೆ ದಿನಾಂಕಕ್ಕೂ ನಂಟು ಬೆಸಿದಿದೆ. ಇದೇ ವಿಚಾರ ಸೊಷಿಯಲ್‌ ಮೀಡಿಯಾದಲ್ಲೂ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ.

ಹಬ್ಬದ ವಾತಾವರಣ
ಅಪ್ಪು ಫ್ಯಾನ್ಸ್ ‘ಜೇಮ್ಸ್’ ಸಿನಿಮಾ ರಿಲೀಸ್ ದಿನವನ್ನು ಹಬ್ಬದಂತೆ ಸೆಲೆಬ್ರೇಟ್ ಮಾಡಿದ್ದರು. ಇದಾದ ಬಳಿಕ ‘ಗಂಧದಗುಡಿ’ ಡಾಕ್ಯುಮೆಂಟರಿ ಬಿಟ್ಟರೆ ಅಪ್ಪು ನಟಿಸಿರೋ ಕೊನೆಯ ಕಮರ್ಷಿಯಲ್ ಸಿನಿಮಾ ‘ಲಕ್ಕಿ ಮ್ಯಾನ್’. ಹೀಗಾಗಿಯೇ ಫ್ಯಾನ್ಸ್ ಕುತೂಹಲದಿಂದ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಸೆಪ್ಟೆಂಬರ್‌ 9ಕ್ಕೆ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ‘ಲಕ್ಕಿ ಮ್ಯಾನ್’ ವಿತರಣೆ ಹಕ್ಕುಗಳು ಸೋಲ್ಡ್‌ ಔಟ್‌ ಆಗಿದ್ದು, ನೂರಾರು ಸ್ಕ್ರೀನ್‌ನಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

ಇದನ್ನೂ ಓದಿ: Sudeep Puneeth | ಸುದೀಪ್-ಪುನೀತ್‌ ಬಾಂಧವ್ಯಕ್ಕೆ ಸಾಕ್ಷಿಯಾಯ್ತು ಹುಟ್ಟುಹಬ್ಬ ಸಂಭ್ರಮ

ಭರ್ಜರಿ ಪ್ರಚಾರ
ತಮಿಳಿನ ‘ಓ ಮೈ ಕಡವುಲೇ’ ರಿಮೇಕ್ ಈ ‘ಲಕ್ಕಿ ಮ್ಯಾನ್’. ಇನ್ನೂ ‘ಓ ಮೈ ಕಡವುಲೇ’ ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ವಿಜಯ್ ಸೇತುಪತಿ ಅವರ ಪಾತ್ರವನ್ನು ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ ನಿರ್ವಹಿಸಿದ್ದಾರೆ. ಹೀಗಾಗಿ ‘ಲಕ್ಕಿ ಮ್ಯಾನ್’ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಆಗಿದೆ. ಈ ವರ್ಷದ ಆರಂಭದಲ್ಲಿ ‘ಲವ್ ಮಾಕ್ಟೇಲ್-2’ ಮೂಲಕ ಭರ್ಜರಿ ಓಪನಿಂಗ್ ಪಡೆದಿದ್ದ ಡಾರ್ಲಿಂಗ್ ಕೃಷ್ಣಗೆ ಮತ್ತೊಂದು ಹಿಟ್ ಲಕ್ಕಿ ಮ್ಯಾನ್ ಮೂಲಕ ಸಿಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.

ಮೀನಾಕ್ಷಿ ಸುಂದರಂ, ಕಾಮರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಲಕ್ಕಿ ಮ್ಯಾನ್’ ತಾರಾಬಳಗ ಕೂಡ ದೊಡ್ಡದಾಗಿದೆ. ಸುಂದರ್‌ ರಾಜ್, ರಂಗಾಯಣ ರಘು, ನಾಗಭೂಷಣ್, ಸುಧಾ ಬೆಳವಾಡಿ, ಸಾಧುಕೋಕಿಲ ಹಾಗೂ ರೋಶನಿ ಸೇರಿದಂತೆ ಸ್ಟಾರ್ಗಳ ದಂಡೇ ಚಿತ್ರದಲ್ಲಿ ನಟಿಸಿದೆ. ಈಗಾಗಲೇ ‘ಲಕ್ಕಿ ಮ್ಯಾನ್’ ಟೀಸರ್ ಹಾಗೂ ಸಾಂಗ್ಸ್ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ವಿತರಣೆ ಹಕ್ಕು ಬಿಸಿ ದೋಸೆಯಂತೆ ಸೋಲ್ಡ್ ಔಟ್ ಆಗಿದೆ. ಇದರ ಜೊತೆಗೆ ಟಿಕೆಟ್‌ ಕೂಡ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗೋದು ಪಕ್ಕಾ.

ಇದನ್ನೂ ಓದಿ: Sudeep birthday | ಹುಟ್ಟುಹಬ್ಬದ ದಿನವೇ ಜಗ ಮೆಚ್ಚುವ ಕಾರ್ಯಕ್ಕೆ ಕಿಚ್ಚ ಸುದೀಪ್‌ ಸಿದ್ಧ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Karthik Jayaram: ʻಅಶ್ವಿನಿ ನಕ್ಷತ್ರʼ ಖ್ಯಾತಿಯ ʻಜೆಕೆʼ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ವೀರ್​’ ಫಸ್ಟ್​ ಲುಕ್​ ಪೋಸ್ಟರ್​!

Karthik Jayaram: ಜೆಕೆ ಹೊಸ ಸಿನಿಮಾಗೆ ʻವೀರ್ʼ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಲೋಹಿತ್ ಅವರಿಗಿದು ಚೊಚ್ಚಲ ಪ್ರಯತ್ನ. ʻವೀರ್ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

VISTARANEWS.COM


on

Karthik Jayaram The first look of The Veer motion Poster
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಕಾರ್ತಿಕ್​ ಜಯರಾಮ್ (Karthik Jayaram)​ ಅಲಿಯಾಸ್​ ಜೆಕೆ ಮೇ.1ರಂದು ಜನುಮದಿನ ಆಚರಿಸಿಕೊಂಡರು. ʻಅಶ್ವಿನಿ ನಕ್ಷತ್ರʼ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಜೆಕೆ ಆ ಬಳಿಕ ಬೆಳ್ಳಿತೆರೆಯತ್ತ ಮುಖ ಮಾಡಿದ್ದರು. ಹಲವು ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರಿಂದಲೂ ಪ್ರೀತಿ ಪಡೆದಿರುವ ಜಯರಾಮ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಜೆಕೆ ಹೊಸ ಸಿನಿಮಾಗೆ ʻವೀರ್ʼ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಲೋಹಿತ್ ಅವರಿಗಿದು ಚೊಚ್ಚಲ ಪ್ರಯತ್ನ. ʻವೀರ್ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಹರಿ ಸಂತು ಗರಡಿಯಲ್ಲಿ ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಲೋಹಿತ್ ವೀರ್ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಇದನ್ನೂ ಓದಿ: Karthik Jayram: ಬಣ್ಣದಲೋಕಕ್ಕೆ ಗುಡ್ ಬೈ ಹೇಳ್ತಾರಾ ಜೆಕೆ? ಗೌರವ ಇಲ್ಲದ ಕಡೆ ಇರಲ್ಲ ಅಂದಿದ್ಯಾಕೆ?

ʻವೀರ್ʼ ಸಿನಿಮಾದಲ್ಲಿ ಜೆಕೆಗೆ ಜೋಡಿಯಾಗಿ ಪ್ರಣತಿ ನಾಯಕಿಯಾಗಿ ನಟಿಸಿದ್ದು, ರೋಚಿತ್, ಮಂಜು ಪಾವಗಡ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಜೆಕೆ ಮೂಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವೀರ್ ಸಿನಿಮಾವನ್ನು ರಾಜರಾಜೇಶ್ವರಿ ಪ್ರೊಡಕ್ಷನ್ ನಡಿ ಗೀತಾ ಜಯಶ್ರೀನಿವಾಸನ್ ಬಂಡವಾಳ ಹೂಡುತ್ತಿದ್ದಾರೆ. ಆರ್ ದೇವೇಂದ್ರ ಛಾಯಾಗ್ರಹಣ, ಧ್ರುವ ಎಂ ಬಿ ಸಂಗೀತ , ಆರ್ಯನ್ ಗೌಡ ಸಂಕಲನ, ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ, ಹರಿ ಸಂತು ಸಾಹಿತ್ಯ ಹಾಡುಗಳಿವೆ. ಸದ್ಯ ವೀರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

ನಟ ಜೆಕೆಗೆ, ಕನ್ನಡ- ಹಿಂದಿ ಕಿರುತೆರೆಯಲ್ಲಿ ಯಶಸ್ಸು ಸಿಕ್ಕ ಹಾಗೇ ಸಿನಿಮಾದಲ್ಲಿ ಸಿಗಲಿಲ್ಲ. ಆದರೆ, ಜೆಕೆ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

ಬಣ್ಣದಲೋಕಕ್ಕೆ ಗುಡ್ ಬೈ ಎಂದಿದ್ದ ಜೆಕೆ

ʻʻನನಗೆ ಬರುವ ಸಿನಿಮಾ ಅವಕಾಶಗಳನ್ನು ತಪ್ಪಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿತ್ತು ಅದಕ್ಕೂ ಕಲ್ಲು ಹಾಕಿದರು. ದುಷ್ಟರಿಂದ ನಾನು ದೂರ ಇರುತ್ತೇನೆ. ಹಾಗಾಗಿ ಸಿನಿಮಾ ಇಂಡಸ್ಟ್ರಿ ನನಗೆ ಬೇಡ. ನನಗೆ ನೆಮ್ಮದಿ ಮುಖ್ಯ. ನನ್ನ ಮಾತು ಯಾರಿಗೆ ಅರ್ಥವಾಗಬೇಕು ಅವರಿಗೆ ಅರ್ಥ ಆದರೆ ಸಾಕು. ಇಂಡಸ್ಟ್ರಿಯಲ್ಲಿ 14ವರ್ಷದಿಂದ ಇದ್ದೇನೆ. ನಟನೆ ನನ್ನ ಫ್ಯಾಶನ್​​. ಈ ವೃತ್ತಿ ಇಲ್ಲ ಅಂದರೆ ಬೇರೆ ಇದೆ. ನಾನು ವಿದ್ಯಾವಂತʼʼ ಎಂದಿದ್ದರು. ‘ಗೌರವ ಇಲ್ಲದ ಕಡೆ ನಾನು ಇರಲ್ಲ. ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ಚೆನ್ನಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿ ಬಿಡುತ್ತಿದ್ದೇನೆ’ ಎಂದಿದ್ದರು.

ಇತೀಚೆಗೆ ನಟ ಜೆಕೆ ತಮ್ಮ ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗಿದ್ದರು. ಜೆಕೆ ಅವರು ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಅಪರ್ಣಾ, ಜೆಕೆ ಬರ್ತ್‌ಡೇ (ಮೇ1)ರಂದು ವಿಶ್ ಮಾಡುವ ಮೂಲಕ ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿದ್ದರು.

Continue Reading

ಕ್ರೈಂ

Prajwal Revanna: ಮಹಿಳೆ ಹಸಿದಾಗ ಬಾಯಿಗೆ ಆಹಾರ ಹಾಕಿ…ʻಅದಲ್ಲʼ! ನಟಿಯ ಪೋಸ್ಟ್‌ ವೈರಲ್‌!

Prajwal Revanna: ರಶ್ಮಿ ಗೌತಮ್ ಪ್ರಜ್ವಲ್‌ ರೇವಣ್ಣ ಅವರನ್ನು‌ ಗುರಿಯಾಗಿಸಿಕೊಂಡೇ ಪೋಸ್ಟ್‌ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ನಟಿ ಪೂನಂ ಕೌರ್ (Poonam Kaur) ,ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ನಿರೂಪಕಿ, ನಟಿ ರಶ್ಮಿ ಗೌತಮ್‌ ಇನ್‌ಸ್ಟಾ ಸ್ಟೋರಿ ವೈರಲ್‌ ಆಗಿದೆ.ರಶ್ಮಿ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತೆಲುಗಿಗೆ ಡಬ್ ಆದ ನಂತರ, ರಮ್ಯಾ ಮಾಡಿದ್ದ ಪಾತ್ರವನ್ನ ನಿರ್ವಹಿಸಿದ್ದರು.

VISTARANEWS.COM


on

Prajwal Revanna related post By Rashmi Goutham
Koo

ಬೆಂಗಳೂರು: ಹಾಸನ ಸಂಸದ (Hassan MP), ಜೆಡಿಎಸ್‌ ಮುಖಂಡ (JDS Leader), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣ (Hassan Pen Drive Case) ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ನಟಿ ಪೂನಂ ಕೌರ್ (Poonam Kaur) ,ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ನಿರೂಪಕಿ, ನಟಿ ರಶ್ಮಿ ಗೌತಮ್‌ ಇನ್‌ಸ್ಟಾ ಸ್ಟೋರಿ ವೈರಲ್‌ ಆಗಿದೆ.

ರಶ್ಮಿ ಗೌತಮ್ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ, ಖ್ಯಾತ ಲೇಖಕಿ ರಾಚೆಲ್ ಮೋರನ್ ​ಅವರ ಸಾಲುಗಳನ್ನ ಹಂಚಿಕೊಂಡಿದ್ದಾರೆ. ʻʻಮಹಿಳೆ ಬಡತನದಲ್ಲಿರುವಾಗ ಮತ್ತು ಹಸಿವಿನಿಂದ ಬಳಲುತ್ತಿರುವಾಗ ನಾವು ಮನುಷ್ಯರಾಗಿ ಅವರ ಬಾಯಿಗೆ ಆಹಾರ ಇಡಬೇಕೇ ಹೊರತು ಖಾಸಗಿ ಅಂಗವಲ್ಲʼʼ ಎಂಬ ಸಾಲುಗಳು ಅವು. ರಶ್ಮಿ ಗೌತಮ್ ಹಂಚಿಕೊಂಡ ಈ ವಿಚಾರಕ್ಕೂ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್‌ಗೂ ಏನಾದರೂ ಸಂಬಂಧ ಇದೆಯಾ ಅನ್ನುವ ಅನುಮಾನ ಅನೇಕರನ್ನ ಕಾಡುತ್ತಿದೆ.

ಇದೀಗ ಕೆಲವರು ಈ ಬಗ್ಗೆ ರಶ್ನಿ ಗೌತಮ್‌ ಅವರು ಪ್ರಜ್ವಲ್‌ ರೇವಣ್ಣ ಅವರನ್ನು‌ ಗುರಿಯಾಗಿಸಿಕೊಂಡೇ ಪೋಸ್ಟ್‌ ಹಂಚಿಕೊಂಡಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ಇರುವುದನ್ನು ನೇರವಾಗಿ ಹೇಳಿ ಹೆಸರನ್ನು ಉಲ್ಲೇಖಿಸಿಬೇಕಿತ್ತು ಎಂದು ಕಮೆಂಟ್‌ ಮಾಡಿದ್ದಾರೆ. ರಶ್ಮಿ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತೆಲುಗಿಗೆ ಡಬ್ ಆದ ನಂತರ, ರಮ್ಯಾ ಮಾಡಿದ್ದ ಪಾತ್ರವನ್ನ ನಿರ್ವಹಿಸಿದ್ದರು.

ಇದನ್ನೂ ಓದಿ: Prajwal Revanna: ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ; ಮೋದಿ ವಿರುದ್ಧ ನಟಿಯ ಆಕ್ರೋಶ!

ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಈಗಾಗಲೇ 24 ಗಂಟೆಯೊಳಗೆ ವಿಚಾರಣೆಗೆ ಹಾಜಾರಾಗುವಂತೆ ಎಸ್‌ಐಟಿ ನೋಟಿಸ್‌ ನೀಡಿದೆ. ಒಂದು ವೇಳೆ ಗಡುವಿನೊಳಗೆ ವಿಚಾರಣೆಗೆ ಹಾಜರಾಗದೇ ಇದ್ದರೆ ಬಂಧಿಸುವ ಅಧಿಕಾರ ಎಸ್‌ಐಟಿಗೆ ಇದೆ. ಇಲ್ಲವೇ ಇನ್ನೂ ಎರಡು ಬಾರಿ ನೋಟಿಸ್‌ ನೀಡಿ ಕಾಯಬಹುದಾಗಿದೆ. ಈ ಎಲ್ಲವೂ ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟ ವಿಷಯವಾಗಿದೆ.

ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು (ಬುಧವಾರ – ಮೇ 1) ವಿಚಾರಣೆಗೆ ಹಾಜರಾಗಬೇಕು. ಕಾರಣ, ಸಿಆರ್‌ಪಿಸಿ 41ಎ ಅಡಿಯಲ್ಲಿ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ 24 ಗಂಟೆ ಒಳಗೆ ವಿಚಾರಣೆಗೆ ಹಾಜರಾಗದೆ ಹೋದಲ್ಲಿ ಮತ್ತೊಂದು ನೋಟಿಸ್‌ ಅನ್ನು ಎಸ್‌ಐಟಿ ನೀಡಲಿದೆ. ಇಲ್ಲವೇ ನೋಟಿಸ್‌ ನೀಡದೆಯೂ ಬಂಧಿಸುವ ಅಧಿಕಾರವಿದೆ.

ಸದ್ಯ ಆರೋಪಿಗಳು ವಿಚಾರಣೆಗೆ ಬರುವ ನಿರೀಕ್ಷೆಯಲ್ಲಿ ಎಸ್ಐಟಿ ಇದೆ. ಇನ್ನು ಪ್ರಜ್ವಲ್ ರೇವಣ್ಣ ವಿದೇಶದಲ್ಲಿರುವ ಕಾರಣ ನೋಟಿಸ್‌ನಲ್ಲಿ ಸಮಯ ನಿಗದಿ ಮಾಡಲಾಗಿಲ್ಲ.

Continue Reading

ಸಿನಿಮಾ

Salman Khan: ಸಲ್ಮಾನ್‌ ಖಾನ್‌ ಮನೆ ಮೇಲೆ ಫೈರಿಂಗ್‌ ಕೇಸ್‌; ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ

Salman Khan:ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿಯೊಬ್ಬ ಪೊಲೀಸ್‌ ಕಸ್ಟಡಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗುಂಡಿನ ದಾಳಿ ನಡೆಸಿದ್ದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿರುವ ಅನೂಜ್‌ ತಾಪನ್‌ ಪೊಲೀಸ್‌ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

VISTARANEWS.COM


on

Salman Khan
Koo

ನವದೆಹಲಿ: ಇತ್ತೀಚೆಗೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌(Salman Khan) ನಿವಾಸದ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿಯೊಬ್ಬ ಪೊಲೀಸ್‌ ಕಸ್ಟಡಿ(Police custody)ಯಲ್ಲೇ ಆತ್ಮಹತ್ಯೆ(Suicide)ಗೆ ಶರಣಾಗಿದ್ದಾನೆ. ಗುಂಡಿನ ದಾಳಿ ನಡೆಸಿದ್ದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿರುವ ಅನೂಜ್‌ ತಾಪನ್‌ ಪೊಲೀಸ್‌ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ.

ಘಟನೆ ಬಗ್ಗೆ ಕರ್ತವ್ಯದಲ್ಲಿದ್ದ ಪೊಲೀಸರನ್ನು ಸಿಐಡಿ ತನಿಖೆಗೆ ಹಾಜರು ಪಡಿಸಲಾಗಿದೆ. ಸಾಮಾನ್ಯವಾಗಿ ಲಾಕ್‌ ಅಪ್‌ನಲ್ಲಿ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ತೀವ್ರ ನಿಗಾವಹಿಸುತ್ತಾರೆ. ಹಾಗಿದ್ದರೂ ಕೆಲವು ಆರೋಪಿಗಳು ತಾವು ಧರಿಸಿರುವ ಪೈಜಾಮಾದಿಂದ ಗಂಟು ಹಾಕಿ ಅದರ ಸಹಾಯದಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ನಡೆದಿತ್ತು. ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳು ಈ ದಾಳಿ ನಡೆಸಿದ್ದರು. ಇವರನ್ನು ಬಳಿಕ ಅರೆಸ್ಟ್‌ ಮಾಡಲಾಗಿತ್ತು. ಆ ಆರೋಪಿಗಳಿಗೆ ಮಾರ್ಚ್ 15 ರಂದು ಸುಭಾಷ್ ಚಂದರ್ (37) ಮತ್ತು ಅನುಜ್ ಥಾಪನ್ (32) ಪಿಸ್ತೂಲ್ ಮತ್ತು ಕಾಟ್ರಿಜ್​ಗಳನ್ನು ನೀಡಿದ್ದರು. ಈ ಇಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಲಾಗಿದ್ದು,. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಪೊಲೀಸರು ಘೋಷಿಸಿದ್ದರು.

2018 ರಲ್ಲಿ, ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಅವರಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್​ನ ಬಿಷ್ಣೋಯ್​ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ, ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್​ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಎಬಿಪಿ ನ್ಯೂಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿ. ಸಲ್ಮಾನ್‌ ಅವರು ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆ ಎಂದು ಹೇಳಿದ್ದ.

ಇದನ್ನೂ ಓದಿ:Hassan Pen Drive Case: ಎಸ್‌ಐಟಿ ಎದುರು 24 ಗಂಟೆಯೊಳಗೆ ಹಾಜರಾಗದೇ ಇದ್ದರೆ ಪ್ರಜ್ವಲ್‌, ರೇವಣ್ಣ ಅರೆಸ್ಟ್?

ಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ, ಈ ವಿಷಯ ಕೊನೆಗೊಳ್ಳುತ್ತದೆ. ಸಲ್ಮಾನ್ ಅಹಂಕಾರಿ, ಗಾಯಕ ಮೂಸೆವಾಲಾ ಕೂಡ ಹಾಗೇ ಇದ್ದ. ಸಲ್ಮಾನ್ ಖಾನ್‌ನ ಅಹಂ ರಾವಣನಿಗಿಂತ ದೊಡ್ಡದಾಗಿದೆ. ಸಲ್ಮಾನ್ ಖಾನ್ ಬಗ್ಗೆ ನಮ್ಮ ಸಮಾಜದಲ್ಲಿ ಕೋಪವಿದೆ. ಅವರು ನನ್ನ ಸಮಾಜವನ್ನು ಅವಮಾನಿಸಿದರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರು ಕ್ಷಮೆ ಕೇಳಲಿಲ್ಲ ಎಂದು ಹೇಳಿದ್ದ.

Continue Reading

ಸ್ಯಾಂಡಲ್ ವುಡ್

Kantara Movie: ರಾಮೋಜಿ ಫಿಲ್ಮ್‌ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್​ 1ʼ ಸೆಟ್‌!

Kantara Movie: ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚಿನ ವರದಿಗಳ ಪ್ರಕಾರ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

VISTARANEWS.COM


on

Kantara Movie Massive Set Constructed In Kundapura
Koo

ಬೆಂಗಳೂರು: ʼಕಾಂತಾರʼ ಪ್ಯಾನ್‌ (Kantara Movie) ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಪ್ರೀಕ್ವೆಲ್ ಕೂಡ ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕೆಲವು ದಿನಗಳ ಹಿಂದೆ ಹೊರ ಬಿದ್ದ ಫಸ್ಟ್‌ ಲುಕ್‌ ಪೋಸ್ಟರ್‌ ದೇಶದ ಗಮನ ಸೆಳೆದಿತ್ತು. ಇದನ್ನೂ ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಿಸಲಿದ್ದು, ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚಿನ ವರದಿಗಳ ಪ್ರಕಾರ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 200×200 ಅಡಿಯ ಬೃಹತ್ ಸೆಟ್ ನಿರ್ಮಿಸಲಾಗಿದೆ.

ಒಂದು ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದ್ದು, 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಂದ ಸೆಟ್ ನಿರ್ಮಾಣಕ್ಕಾಗಿ 600 ನುರಿತ ಬಡಗಿಗಳು ಮತ್ತು ಸ್ಟಂಟ್ ಮಾಸ್ಟರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಮೋಜಿ ಫಿಲ್ಮ್‌ ಸಿಟಿಯ ನಂತರ ದೇಶದಲ್ಲೇ ಅತಿ ದೊಡ್ಡ ಸೆಟ್‌ ಇದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kantara Movie: ‘ಕಾಂತಾರ 2’ ಸಿನಿಮಾದಲ್ಲಿ ಇರಲಿದ್ದಾರಾ ಮೋಹನ್​ಲಾಲ್?

ಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

ಕಾಂತಾರ ಒಂದು ದಂತಕಥೆʼ ಎಂದರೆ ಮೊದಲ ಭಾಗ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದೀಗ ಪ್ರೀಕ್ವೆಲ್ ರೈಟ್ಸ್ ಕೂಡ ಅಮೇಜಾನ್ ಪ್ರೈಂ ವಿಡಿಯೋ ಪಾಲಾಗಿದೆ. ಕೆಲವು ಮೂಲಗಳ ಪ್ರಕಾರ ಚಿತ್ರದಲ್ಲಿ ಒಂದಕ್ಕಿಂತ ಹೆಚ್ಚು ನಾಯಕಿಯ ಪಾತ್ರ ಇರಲಿದೆ ಎನ್ನಲಾಗಿದೆ. ಇನ್ನು ಕೆಲವು ವರದಿಗಳು ನಾಯಕಿಯಾಗಿ ರುಕ್ಮಿಣಿ ವಸಂತ್‌ ಆಯ್ಕೆಯಾಗಿದ್ದಾರೆ ಎಂದಿವೆ. ಚಿತ್ರತಂಡ ಇನ್ನೂ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿಲ್ಲ.

ಕಾಂತಾರʼವನ್ನು ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ (budget of 125 crores) ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Continue Reading
Advertisement
karnataka SSLC result 2024
ಪ್ರಮುಖ ಸುದ್ದಿ2 mins ago

SSLC Result 2024: ಕರ್ನಾಟಕದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ದಿನ ಫಿಕ್ಸ್

Karthik Jayaram The first look of The Veer motion Poster
ಸ್ಯಾಂಡಲ್ ವುಡ್9 mins ago

Karthik Jayaram: ʻಅಶ್ವಿನಿ ನಕ್ಷತ್ರʼ ಖ್ಯಾತಿಯ ʻಜೆಕೆʼ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ವೀರ್​’ ಫಸ್ಟ್​ ಲುಕ್​ ಪೋಸ್ಟರ್​!

prajawal revanna case driver karthik
ಪ್ರಮುಖ ಸುದ್ದಿ30 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ವಿಡಿಯೋ ಬಿಟ್ಟ ಕಾರ್ತಿಕ್‌ನನ್ನು ಮಲೇಷ್ಯಾಕ್ಕೆ ಕಳಿಸಿದವರು ಯಾರು?

Vande Bharat Metro
ದೇಶ42 mins ago

Vande Bharat Metro: ಮೊದಲ ವಂದೇ ಭಾರತ್‌ ಮೆಟ್ರೋ ಸಂಚಾರಕ್ಕೆ ಸಿದ್ಧ; ಇಲ್ಲಿದೆ ವಿಡಿಯೊ

Hindu Marriage
ದೇಶ50 mins ago

Hindu Marriage: ವಿಧಿಬದ್ಧವಾಗಿ ನಡೆಯದ ಮದುವೆಗೆ ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್‌

pm Narendra Modi
ಪ್ರಮುಖ ಸುದ್ದಿ1 hour ago

PM Narendra Modi: ಉಗ್ರರನ್ನು ಅವರ ತಾಯ್ನೆಲದಲ್ಲೇ ಕೊಲ್ಲುತ್ತೇವೆ: ಗುಡುಗಿದ ಪಿಎಂ ನರೇಂದ್ರ ಮೋದಿ

karnataka Weather Forecast
ಮಳೆ2 hours ago

Karnataka Weather : ಇಂದು ಮೂರು ಹೊತ್ತು ಒಂದೊಂದು ವಾತಾವರಣ

Vastu Tips
ಲೈಫ್‌ಸ್ಟೈಲ್2 hours ago

Vastu Tips: ಮನೆ ಹೊರಗಿನ ಉದ್ಯಾನದಲ್ಲಿ ವಾಸ್ತು ಪಾಲಿಸಿ; ಮನೆಯೊಳಗಿನ ನೆಮ್ಮದಿ ವೃದ್ಧಿಸಿ

SMART Missile
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಕ್ಷಿಪಣಿ ಬಲದಿಂದ ನಮ್ಮ ನೌಕಾಪಡೆ ‘ಸ್ಮಾರ್ಟ್‌’ ಜತೆಗೆ ಇನ್ನಷ್ಟು ಬಲಿಷ್ಠ

Aloe Vera face mask
ಆರೋಗ್ಯ2 hours ago

Aloe Vera Benefits: ಬೇಸಿಗೆಯಲ್ಲಿ ಚರ್ಮವನ್ನು ತಂಪಾಗಿಸಲು ಲೋಳೆಸರದ ಮಾಸ್ಕ್‌ ಬಳಸಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌