Site icon Vistara News

Yathindra Siddaramaiah : ಟಾರ್ಗೆಟ್‌ ಮಾಡಲು ಪ್ರತಾಪ್‌ ಏನು ನ್ಯಾಷನಲ್‌ ಲೀಡರಾ?; ಯತೀಂದ್ರ ಪ್ರಶ್ನೆ

Yathindra Siddaramaiah MP Pratapsimha

ಮೈಸೂರು: ಪ್ರತಿ ಬಾರಿಯೂ ನನ್ನನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ, ನನ್ನನ್ನು ಟಾರ್ಗೆಟ್‌‌ ಮಾಡುತ್ತಿದ್ದಾರೆ (Target Pratapsimha) ಎಂದು ಸಂಸದ ಪ್ರತಾಪ್‌ ಸಿಂಹ (MP Pratapsimha) ಹೇಳುತ್ತಾರಲ್ಲಾ.. ಹಾಗೆಲ್ಲ ಟಾರ್ಗೆಟ್‌ ಮಾಡಲು ಅವರೇನು ನ್ಯಾಷನಲ್‌ ಲೀಡರಾ? ಎಂದು ಕೇಳಿದ್ದಾರೆ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah).

ʻʻಪ್ರತಾಪ ಸಿಂಹ ತಮ್ಮನ್ನು ತಾವು ನ್ಯಾಷನಲ್ ಲೀಡರ್ ಎಂದು‌ಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಪ್ರತಾಪ ಸಿಂಹ ಟಾರ್ಗೆಟ್ ಮಾಡಲು ಅವರೇನು ನ್ಯಾಷನಲ್ ಲೀಡರಾ? ತಾವು ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ದ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೆʼʼ ಎಂದು ಮೈಸೂರಿನಲ್ಲಿ ಯತೀಂದ್ರ ಹೇಳಿದರು.

ʻʻʻನಮ್ಮ ತಂದೆ ಯಾವತ್ತು ಟಾರ್ಗೆಟ್ ರಾಜಕಾರಣ ಮಾಡಿಲ್ಲ. ತಮಗೆ ರಾಜಕೀಯವಾಗಿ ಅನೇಕ ಬಾರಿ ಅನ್ಯಾಯವಾಗಿದ್ದರೂ ಅನ್ಯಾಯ ಮಾಡಿದ್ದವರ ವಿರುದ್ಧ ಅವರು ರಾಜಕಾರಣ ಮಾಡಲಿಲ್ಲ. ಹೀಗಿರುವಾಗ ಪ್ರತಾಪಸಿಂಹನನ್ನು ಯಾಕೆ ತಂದೆಯವರು ಟಾರ್ಗೆಟ್ ಮಾಡುತ್ತಾರೆ‌. ಅವರ ತಮ್ಮ ತಪ್ಪು ಮಾಡಿದ್ದಾರೆ ಅದಕ್ಕಾಗಿ ಕೇಸ್ ಆಗಿದೆ ಅಷ್ಟೇ. ಇದರಲ್ಲಿ ಟಾರ್ಗೆಟ್ ಎಲ್ಲಿಂದ ಬಂತುʼʼ ಎಂದು ಕೇಳಿರುವ ಯತೀಂದ್ರ ಸಿದ್ದರಾಮಯ್ಯ ಅವರು, ತಮ್ಮನ ತಪ್ಪು ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇಲ್ಲಿ ನನ್ನ ರಾಜಕೀಯ ಪ್ರಶ್ನೆಯೇ ಇಲ್ಲ ಎಂದರು.

ಇದನ್ನೂ ಓದಿ : MP Pratapsimha : ನನ್ನ ಅಮ್ಮ, ತಂಗೀನೂ ಅರೆಸ್ಟ್‌ ಮಾಡ್ಸಿ ಸರ್‌; ಸಿದ್ದರಾಮಯ್ಯ ವಿರುದ್ಧ ಪ್ರತಾಪ್‌ ಆಕ್ರೋಶ

ಹಿಂದೂ ರಾಷ್ಟ್ರ ಅಪಾಯಕಾರಿ ಹೇಳಿಕೆ ಪುನರುಚ್ಚಾರ

ಭಾರತ ಹಿಂದೂ ರಾಷ್ಟ್ರವಾದರೆ ದೇಶಕ್ಕೆ ಅಪಾಯಕಾರಿ ಎಂಬ ಹೇಳಿಕೆ ನೀಡಿ ಭಾರಿ ವಿರೋಧ ಟೀಕೆ ಎದುರಿಸಿದರೂ ಯತೀಂದ್ರ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ʻʻಅಂಬೇಡ್ಕರ್ ಅವರ ತತ್ವಗಳನ್ನು ಒಪ್ಪುವವರು ಯಾರು ನನ್ನ ಹೇಳಿಕೆಯನ್ನು ತಪ್ಪು ಎಂದು ಹೇಳುವುದಿಲ್ಲ. ಅಂಬೇಡ್ಕರ್ ಅವರು ಹೇಳಿರುವುದನ್ನೇ ನಾನು ಪುನರ್ ಉಚ್ಚರಿಸಿದ್ದೇನೆ ಅಷ್ಟೆ ಎಂದು ಹೇಳಿದರು.

ʻʻಈ ದೇಶ ಜಾತ್ಯತೀತವಾಗಿರಬೇಕು. ಯಾವುದೇ ಒಂದು ಧರ್ಮದ ವಿಚಾರವಾಗಿ ದೇಶ ಇರಬಾರದು. ಅದು ಯಾವತ್ತಿದ್ದರೂ ಅಪಾಯಕಾರಿ. ಧರ್ಮದ ಹೆಸರಿನಲ್ಲಿರುವ ಪಾಕಿಸ್ತಾನ ಮತ್ತು ಕೆಲವು ದೇಶಗಳ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾರಣ ನಾನು ಹಿಂದೂ ರಾಷ್ಟ್ರವಾಗುವುದು ಅಪಾಯಕಾರಿ ಎಂದು ಹೇಳಿದ್ದೇನೆ.
ನನ್ನ ಮಾತಿಗೆ ಈಗಲೂ ಬದ್ಧ. ನಾನು ಹೇಳಿರುವುದರಲ್ಲಿ ಯಾವುದು ತಪ್ಪು ಇಲ್ಲ.ʼʼ ಎಂದು ಮೈಸೂರಿನಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಸರ್ಕಾರ ಧರ್ಮದ ಕೆಲಸ ಮಾಡಬೇಕಾಗಿಲ್ಲ

ʻʻಧರ್ಮದ ವಿಚಾರದಲ್ಲಿ ಕೆಲಸ ಮಾಡುವುದಕ್ಕೆ ಬೇರೆ ವ್ಯವಸ್ಥೆಗಳಿವೆ. ಇದು ಸರ್ಕಾರದ ಕೆಲಸವಾಗಬಾರದು. ಬಿಜೆಪಿ ಅಭಿವೃದ್ಧಿಯನ್ನೇ ಮಾಡದೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಏನನ್ನೂ ಅಭಿವೃದ್ಧಿ ಮಾಡದ ಬಿಜೆಪಿ ಧರ್ಮದ ವಿಚಾರವನ್ನು ಮುನ್ನಡೆಗೆ ಬಿಟ್ಟು ವಿಚಾರಗಳನ್ನು ಬಿಜೆಪಿ ಮರೆ ಮಾಚುತ್ತಿದೆʼʼ ಎಂದು ಅವರು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು.

Exit mobile version