Site icon Vistara News

Woman Ends life : ಹೊಟ್ಟೆನೋವು ತಾಳಲಾರದೆ ಕಪಿಲಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

woman ends life jumping into kapila river

ಮೈಸೂರು: ಮಹಿಳೆಯೊಬ್ಬರು ಹೊಟ್ಟೆ ನೋವು (Stomach Pain) ತಾಳಲಾರದೇ ಕಪಿಲಾ ನದಿಗೆ (Kapila River Nanjanagudu) ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಸಮೀಪ ನಡೆದಿದೆ. ಮೈಸೂರಿನ ಸುಭಾಷ್ ನಗರದ ಮಂಜುನಾಥ್ ಎಂಬುವವರ ಪತ್ನಿಯಾಗಿರುವ ಮಂಜುಳಾ (50) ಅವರೇ ಮೃತರು (Woman Ends life).

ಮಂಜುಳಾ ಅವರು ನ. 7ರಂದು ಮನೆಯಿಂದ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೊರಟವರು ಮನೆಗೆ ವಾಪಸ್‌ ಹೋಗಿರಲಿಲ್ಲ. ಅವರಿಗಾಗಿ ಎಲ್ಲ ಕಡೆ ಹುಡುಕಲಾಗಿತ್ತಾದರೂ ಎಲ್ಲಿಯೂ ಅವರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.

ಶುಕ್ರವಾರ ಕಪಿಲಾ ನದಿಯಲ್ಲಿ ಒಂದು ಶವ ಸಿಕ್ಕಿದೆ ಎಂದು ಮಾಹಿತಿ ತಿಳಿದು ಅಲ್ಲಿಗೆ ಹೋಗಿ ನೋಡಿದಾಗ ಅದು ಮಂಜುಳಾ ಅವರ ಮೃತದೇಹ ಎಂದು ತಿಳಿದುಬಂದಿತ್ತು.

ಮಂಜುಳಾ ಅವರಿಗೆ ಸುಮಾರು ಹತ್ತು ವರ್ಷಗಳಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಪದೇಪದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಹೀಗಾಗಿ ತುಂಬ ನೋವು ಅನುಭವಿಸುತ್ತಿದ್ದರು. ಹೀಗಾಗಿ ಹೊಟ್ಟೆ ನೋವು ತಾಳಲಾರದೇ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ಮಂಜುನಾಥ್ ದೂರಿನಲ್ಲಿ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವವನ್ನು ಒಪ್ಪಿಸಲಾಗಿದೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Girl Ends life : ಅಯ್ಯೋ ದೇವ್ರೆ.. ಹೊಟ್ಟೆ ನೋವು ತಾಳಲಾರದೆ 17 ವರ್ಷದ ವಿದ್ಯಾರ್ಥಿನಿ ನೇಣಿಗೆ ಶರಣು

ಜೀಪ್‌, ಬೈಕ್‌ ನಡುವೆ ಭೀಕರ ಅಪಘಾತ; ಸವಾರರು ಸ್ಥಳದಲ್ಲೇ ಮೃತ್ಯು

ಮೈಸೂರು: ಜೀಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ (Bike-Jeep accident) ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು (Two riders dead) ಕಂಡ ಭೀಕರ ಘಟನೆ (Road Accident) ಹುಣಸೂರು ತಾಲೂಕಿನ ಕೊತ್ತೇಗಾಲ ಗೇಟ್ ಬಳಿ ನಡೆದಿದೆ. ಅತ್ತಿಗುಪ್ಪೆ ಗ್ರಾಮದ ನಿವಾಸಿಗಳಾದ ನಾಗರಾಜು (48) ಹಾಗೂ ಶಿವರಾಜು (45) ಮೃತ ಸವಾರರು.

Jeep Bike accident near mysore

ನಾಗರಾಜು ಮತ್ತು ಶಿವರಾಜು ಕೂಲಿ ಕಾರ್ಮಿಕರಾಗಿದ್ದು, ಅವರು ಹುಣಸೂರು ಕಡೆಯಿಂದ ಸ್ವಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಬಂದ ಜೀಪ್ ಡಿಕ್ಕಿಯಾಗಿದೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಷ್ಟದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ ಇವರ ಸಾವು ಕುಟುಂಬಕ್ಕೆ ಭಾರಿ ಸಂಕಷ್ಟವನ್ನು ಉಂಟು ಮಾಡಿದೆ.

ಈ ದಾರಿಯಲ್ಲಿ ವಾಹನಗಳ ಅಪರಿಮಿತ ವೇಗ ಭಾರಿ ಅಪಾಯವನ್ನು ತಂದೊಡ್ಡಿದೆ ಎಂದು ಹೇಳಲಾಗುತ್ತಿದೆ. ವಾಹನಗಳ ವೇಗ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

Exit mobile version