ಮೈಸೂರು: ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯನ ಸಹೋದರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ (Murder Case) ನಗರದ ಉದಯಗಿರಿಯ ಮಾದೇಗೌಡ ವೃತ್ತ ಸಮೀಪ ನಡೆದಿದೆ. 5ಕ್ಕೂ ಹೆಚ್ಚು ಜನರು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಪಾಲಿಕೆ ಸದಸ್ಯ ಪಂಡು ಸಹೋದರ ಅಕ್ಮಲ್ ಕೊಲೆಯಾದ ವ್ಯಕ್ತಿ. ಬೆಂಗಳೂರು ಮೂಲದ ವ್ಯಕ್ತಿಗಳಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ವ್ಯಕ್ತಿ ಅಕ್ಮಲ್ ಎಸ್‌ಡಿಪಿಐನಲ್ಲಿ ಗುರುತಿಸಿಕೊಂಡಿದ್ದ.
ಇದನ್ನೂ ಓದಿ | Self Harming : ನೇಣು ಬಿಗಿದುಕೊಂಡು ಬಾರ್ ಕ್ಯಾಶಿಯರ್ ಆತ್ಮಹತ್ಯೆ
ಗುರುಮಠಕಲ್‌ನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಭೀಕರ ಕೊಲೆ
ಯಾದಗಿರಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಭೀಕರ ಕೊಲೆ ಮಾಡಿರುವ ಘಟನೆ (Murder Case) ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡ್ರಕಿ ಬಳಿ ನಡೆದಿದೆ. ಆಸ್ತಿ ವಿಚಾರವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಗುರುಮಠಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಂಡ್ರಕಿ ಗ್ರಾಮದ ನರಸಿಂಹಲು (48) ಕೊಲೆಯಾದ ವ್ಯಕ್ತಿ. ಚಂಡ್ರಕಿ ಗ್ರಾಮದ ಮುಖ್ಯ ರಸ್ತೆಯ ಮೇಲೆಯೇ ಹಾಡ ಹಗಲೇ ಕಿರಾತಕರು ಕೊಲೆ ಮಾಡಿದ್ದಾರೆ. ಆಸ್ತಿ ವಿಚಾರವಾಗಿ ನರಸಿಂಹಲು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | KSRTC Bus : ಚಾರ್ಮಾಡಿ ಘಾಟಿಯಲ್ಲಿ ಬ್ರೇಕ್‌ಫೇಲ್: ಮೋರಿಗೆ ಡಿಕ್ಕಿ ಹೊಡೆಸಿ ಪ್ರಯಾಣಿಕರ ಜೀವ ಉಳಿಸಿದ ಚಾಲಕ
ಆಸ್ತಿಗಾಗಿ ವ್ಯಕ್ತಿ ಮೇಲೆ ಕಾರು ಹತ್ತಿಸಿದ ಕೊಲೆಗಡುಕ ಸಹೋದರರು
ಶಿವಮೊಗ್ಗ: ಹಣ-ಆಸ್ತಿ ವಿಚಾರ ಬಂದರೆ ಬಂಧುಗಳು ಶತ್ರುಗಳಾಗಿ ಬಿಡುತ್ತಾರೆ. ಸದ್ಯ ಆಸ್ತಿ ವಿಚಾರಕ್ಕೆ ಸಹೋದರರಿಬ್ಬರು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಾರೆ. ನಡುರಸ್ತೆಯಲ್ಲೇ ವ್ಯಕ್ತಿಗೆ ಮನಬಂದಂತೆ ಥಳಿಸಿ ರಸ್ತೆ ಬದಿಗೆ ಬಿಸಾಡಿ, ನಂತರ ಆತನ ಮೇಲೆ ಕಾರು ಹತ್ತಿಸಿ ಕೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚಿಪ್ಪಳ್ಳಿ ಬಳಿ ಕಳೆದ ಫೆ.29ರ ಸಂಜೆ ಈ ಘಟನೆ ನಡೆದಿತ್ತು.
ಆಸ್ತಿ ವಿಚಾರಕ್ಕೆ ಸಮೀರ್, ಇದಾಯತ್ ಎಂಬ ಸಹೋದರರು ಸೇರಿ ರಫೀಕ್ (45) ಎಂಬಾತನ ಮೇಲೆ ಕಾರು ಹತ್ತಿಸಿ ಕೊಂದಿದ್ದರು. ಜನರು ಓಡಾಡುವ ಸಮಯದಲ್ಲೇ ರಫೀಕ್‌ನನ್ನು ಹಿಡಿದು ಪ್ರಾಣಹೋಗುವಂತೆ ಥಳಿಸಿದ್ದರು. ಗಲಾಟೆ ನಂತರ ಕಾರಲ್ಲಿ ಕುಳಿತ ಸಮೀರ್, ಇದಾಯತ್ ರಸ್ತೆ ಬದಿಯಲ್ಲಿದ್ದ ರಫೀಕ್ ಮೇಲೆ ಕಾರು ಹತ್ತಿಸಿದ್ದರು. ಕಾರು ಹತ್ತಿಸಿ ಕೊಲ್ಲುವ ದೃಶ್ಯವನ್ನು ಅಲ್ಲಿದ್ದ ಇತರೆ ವಾಹನ ಸವಾರರು ವಿಡಿಯೊ ಮಾಡಿಕೊಂಡಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ರಫೀಕ್ ಸ್ಥಳದಲ್ಲೇ ಮೃತಪಟ್ಟಿದ್ದ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು, ಈ ಸಂಬಂಧ ಆನಂದಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ್ದರು.
ಇದನ್ನೂ ಓದಿ:Blackmail Case : ಮಹಿಳೆಗೆ ನಗ್ನ ಫೋಟೊ ಕಳಿಸಿ ಹಣ ದೋಚಿದ ಇನ್ಸ್ಟಾಗ್ರಾಮ್ ಗೆಳೆಯ!
ಬಟ್ಟೆ ಬದಲಿಸಿಕೊಂಡು ಎಸ್ಕೇಪ್
ಇನ್ನೂ ರಫೀಕ್‌ನನ್ನು ಹತ್ಯೆ ಮಾಡಿದ ಆರೋಪಿಗಳು, ಮುರುಘಾ ಮಠದ ಆವರಣಕ್ಕೆ ಬಂದಿದ್ದರು. ಪೊಲೀಸರಿಗೆ ಯಾವ ಸಾಕ್ಷಿಯು ಸಿಗಬಾರೆಂದು ಸಾಗರ ತಾಲೂಕಿನ ಆನಂದಪುರದಲ್ಲಿರುವ ಮುರುಘಾ ಮಠದ ಆವರಣದಲ್ಲಿ ಬಟ್ಟೆ ಬದಲಿಸಿಕೊಂಡಿದ್ದರು. ಆದರೆ ಬಟ್ಟೆ ಬದಲಿಸಿಕೊಂಡ ದೃಶ್ಯವೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ನಂತರ ಆರೋಪಿಗಳು ಪರಾರಿ ಆಗಿದ್ದರು. ನಂತರ ತನಿಖೆಗಿಳೀದ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ, ಇದು ಕುಟುಂಬದವರೇ ಆಸ್ತಿಗಾಗಿ ಮಾಡಿದ ಕೊಲೆ ಎಂದು ತಿಳಿದು ಬಂದಿದೆ.