ಬೆಂಗಳೂರು, ಕರ್ನಾಟಕ: ವಿಜಯಪುರ ಜಿಲ್ಲೆಯ ಎಸ್ ಸಿ ಮೀಸಲು ಕ್ಷೇತ್ರವಾಗಿರುವ ನಾಗಠಾಣದಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಕಾಂಗ್ರೆಸ್ ಅಭ್ಯರ್ಥಿ ವಿಠಲ್ ಕಟಕದೊಂಡ ಅವರು 30538 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಹಾಲಿ ಶಾಸಕರಾಗಿದ್ದ ಜೆಡಿಎಸ್‌ನ ದೇವಾನಂದ ಪೂಲಸಿಂಗ್ ಅವರು 33815 ಮತಗಳನ್ನು ಪಡೆದುಕೊಂಡು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರೆ, ಬಿಜೆಪಿಯ ಸಂಜೀವ್ ಐಹೊಳೆ ಅವರು 47693 ಮತಗಳನ್ನು ಪಡೆದುಕೊಂಡು ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿಠಲ್ ಕಟಕದೊಂಡ ಅವರಿಗೆ 78231 ಮತಗಳ ಬಂದಿವೆ(Nagthan Election Results).
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಿಕೆಶಿ ಕೈಯಿಗೆ ಗಾಯ
2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?
ವಿಜಯಪುರ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಇದು ಒಂದು. ಎಸ್ಸಿ ಮೀಸಲು ಕ್ಷೇತ್ರವಾಗಿರುವ ನಾಗಠಾಣದಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಅಭ್ಯರ್ಥಿಗಳು ಗೆದ್ದಿದ್ದಾರೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ನ ದೇವಾನಂದ ಫೂಲಸಿಂಗ್‌ಚವ್ಹಾಣ 59709 ಮತಗಳನ್ನು ಪಡೆದುಕೊಂಡು ಗೆದ್ದಿದ್ದರು. ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ವಿಠ್ಠಲ ದೋಂಡಿಬಾ ಕಟಕದೊಂಡ 54108 ಮತಗಳನ್ನು ಪಡೆದುಕೊಂಡಿದ್ದರು. ಜೆಡಿಎಸ್ ಅಭ್ಯರ್ಥಿಯ ಗೆಲವಿನ ಅಂತ 5601 ಮತಗಳು.