ಕಲಬುರಗಿ: ಕರ್ನಾಟಕ ರಾಜ್ಯ ಹಾಲು ಮಹಾ ಮಂಡಳದ (ಕೆಎಂಎಫ್) ವತಿಯಿಂದ ಹೊರತರುವ ನಂದಿನ ಹಾಲಿನ ದರವನ್ನು ಏರಿಕೆ ಮಾಡುವ ನಿರ್ಧಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬ್ರೇಕ್ ಹಾಕಿದ್ದಾರೆ.
ಕಲಬುರಗಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಹಾಲಿನ ದರ ಬಗ್ಗೆ ಹಲವಾರು ತಿಂಗಳಿಂದ ಚರ್ಚೆಯಾಗಿದೆ. ನವೆಂಬರ್ 20ರ ನಂತರ ಹಾಲು ಒಕ್ಕೂಟದ ಅಧ್ಯಕ್ಷರ ಜತೆ ಸಭೆ ನಡೆಸುತ್ತೇವೆ ಎಂದಿದ್ದಾರೆ.
ಅದ್ಯಕ್ಷರ ಮತ್ತು ಅಧಿಕಾರಗಳ ಜತೆ ಸಭೆ ಕರೆದು ಅಂತಿಮ ತಿರ್ಮಾನ ಮಾಡಲಾಗುತ್ತದೆ. ಜನರಿಗೆ ಹೊರೆ ಆಗದಂತೆ ತೀರ್ಮಾನ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಅನೇಖ ತಿಂಗಳಿನಿಂದ ಚರ್ಚೆಯಲ್ಲಿರುವಂತೆ, ನಂದಿನಿ ಹಾಲಿನ ದರವನ್ನು (Nandini Milk Price Hike) ಲೀಟರ್‌ಗೆ 3 ರೂ.ನಂತೆ ಹೆಚ್ಚಿಸಲಾಗಿದೆ, ಸೋಮವಾರ ಮಧ್ಯರಾತ್ರಿಯಿಂದಲೇ ಈ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಸೋಮವಾರ ಬೆಳಗ್ಗೆ ಕೆಎಂಎಫ್ ತಿಳಿಸಿತ್ತು.
ಈ ಕುರಿತು ಪ್ರಕಟಣೆ ಹೊರಡಿಸಿದ್ದ ಕೆಎಂಎಫ್, ಒಂದು ಲೀಟರ್ ಟೋನ್ಡ್ ಹಾಲಿನ ದರ 37 ರೂ.ಗಳಿಂದ 40 ರೂ.ಗಳಿಗೆ ಏರಲಿದೆ. ಮೊಸರಿನ ದರವನ್ನೂ ಮೂರು ರೂ. ಹೆಚ್ಚಿಸಲಾಗಿದ್ದು, ಒಂದು ಕೇಜಿ ಮೊಸರಿನ ದರ 45ರೂ.ಗಳಿಂದ 48ರೂ.ಗಳಿಗೆ ಏರಿಕೆ ಮಾಡಲಾಗಿದೆ ಎಂದಿತ್ತು.
ಹಾಲಿನ ದರದಲ್ಲಿ ಏರಿಕೆ ಮಾಡುವಂತೆ ಕೆಎಂಎಫ್ ಕಳೆದ ಸೆಪ್ಟೆಂಬರ್‌ನಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈಗ ಸರ್ಕಾರ ಅನುಮತಿ ನೀಡಿರುವುದರಿಂದ ದರ ಹೆಚ್ಚಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನಲಾಗಿತ್ತು.
ಹಸುವಿಗೆ ನೀಡುವ ಮೇವಿನ ದರ ಹೆಚ್ಚಳವಾಗಿದೆ, ಚರ್ಮ ಗಂಟು ರೋಗ ಬಂದಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಅವರಿಗೆ ನೆರವಾಗುವ ಉದ್ದೇಶದಿಂದ, ಜೊತೆಗೆ ಸಾಗಾಣಿಕೆ, ವಿದ್ಯುತ್, ಪ್ಯಾಕಿಂಗ್, ಸಲಕರಣೆ ವೆಚ್ಚ ಶೇ.25 ರಿಂದ 35 ಹೆಚ್ಚಳವಾಗಿರುವುದರಿಂದ ಈ ದರ ಹೆಚ್ಚಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೆಎಂಎಫ್ ಹೇಳಿತ್ತು. ಆದರೆ ಸಿಎಂ ಈ ಎಲ್ಲ ಪ್ರಕ್ರಿಯೆಗೆ ತಡೆ ವಿಧಿಸಿದ್ದಾರೆ. ಮುಂದೆ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ | Nandini Milk Price Hike | ನಂದಿನಿ ಹಾಲಿನ ದರ 3 ರೂ. ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ಜಾರಿ