ತುಮಕೂರು: ತುಮಕೂರಿನ ಗುಬ್ಬಿಯಲ್ಲಿ ಕಾರ್ಯಕ್ರಮಕ್ಕೆ ಇಂದು ಆಗಮಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ವಿಶೇಷ ಪೇಟ ಹಾಗೂ ಹಾರ ಸಿದ್ಧವಾಗಿವೆ.
ಈ ಪೇಟ ಹಾಗೂ ಹಾರಗಳನ್ನು ಅಡಕೆಯಿಂದ ಮಾಡಲಾಗಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಹೆಚ್‌ಎಎಲ್ ಘಟಕದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಆಗಮಿಸಲಿದ್ದಾರೆ. ಹೆಚ್‌ಎಎಲ್‌ನಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮಕ್ಕೆ ಸುಸಜ್ಜಿತ ಬೃಹತ್ ವೇದಿಕೆ ತಯಾರಾಗಿದ್ದು, ಇಲ್ಲಿ ಕಾರ್ಯಕ್ರಮದ ಆರಂಭಕ್ಕೂ ಮುನ್ನ ಈ ಅಡಕೆಯ ಪೇಟ ಹಾಗೂ ಹಾರ ತೊಡಿಸಿ ಅವರಿಗೆ ಸ್ವಾಗತ ಕೋರಲಾಗುತ್ತದೆ.
ಇದನ್ನೂ ಓದಿ: Narendra Modi: ಫೆ.6ರಂದು ಪ್ರಧಾನಿ ಮೋದಿ ಬೆಂಗಳೂರು, ತುಮಕೂರಿಗೆ ಭೇಟಿ; ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ