Site icon Vistara News

Narendra Modi: ಇಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ, ಹೀಗಿರಲಿದೆ ಪಿಎಂ ಕಾರ್ಯಕ್ರಮ

PM Modi On Kannada

#image_title

ಬೆಂಗಳೂರು: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಪ್ರತಿಷ್ಠಿತ ಏರೋ ಇಂಡಿಯಾ ಶೋ ಉದ್ಘಾಟಿಸಲಿದ್ದಾರೆ.

ಫೆ.12ರ ರಾತ್ರಿ‌ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ರಾಜಭವನದಲ್ಲಿ ತಂಗಿದ್ದು, ಫೆ.13ರ ಬೆಳಗ್ಗೆ 8.50ಕ್ಕೆ ರಾಜಭವನದಿಂದ ಹೊರಟು ರಸ್ತೆ ಮಾರ್ಗವಾಗಿ ಮೇಖ್ರಿ ರಸ್ತೆಯಲ್ಲಿರುವ HQTC ಹೆಲಿಪ್ಯಾಡ್‌ಗೆ ಬರಲಿದ್ದಾರೆ. 8.55ಕ್ಕೆ HQTC ತಲುಪಿ ಅಲ್ಲಿಂದ 9 ಗಂಟೆಗೆ MI-17 ಹೆಲಿಕಾಪ್ಟರ್ ಮೂಲಕ ಹೊರಟು 9.20ಕ್ಕೆ ಯಲಹಂಕ ಎಎಫ್ಎಸ್‌ಗೆ ತಲುಪಲಿದ್ದಾರೆ. 9.25ಕ್ಕೆ ರಸ್ತೆ ಮಾರ್ಗವಾಗಿ ಕಾರ್ಯಕ್ರಮಕ್ಕೆ ಆಗಮಿಸಿ, 9.30ಕ್ಕೆ ಸರಿಯಾಗಿ ಏರೋ ಇಂಡಿಯಾ ಪ್ರದರ್ಶನ- 2023 ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

9.30ರಿಂದ 11.30ರ ವರೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರದರ್ಶನವನ್ನು ವೀಕ್ಷಿಸಲಿದ್ದು, 11.35ಕ್ಕೆ ರಸ್ತೆ ಮಾರ್ಗವಾಗಿ‌ ತೆರಳಿ 11.40ಕ್ಕೆ ಯಲಹಂಕ ಎಎಫ್ಎಸ್‌ಗೆ ಬಂದು 11.45ಕ್ಕೆ ವಿಶೇಷ ವಿಮಾನ ಮೂಲಕ ತ್ರಿಪುರಾಗೆ ಪ್ರಯಾಣ ಬೆಳೆಸಲಿದ್ದಾರೆ.

ಇದನ್ನೂ ಓದಿ: ವಿಸ್ತಾರ TOP 10 NEWS: ಏರೋ ಇಂಡಿಯಾಗಾಗಿ ಬೆಂಗಳೂರಿಗೆ ಬಂದಿಳಿದ ಮೋದಿ, 2024ರಲ್ಲಿ ಪಾಕಿಸ್ತಾನ ದಿವಾಳಿ ಹಾಗೂ ಇನ್ನಿತರ ಪ್ರಮುಖ ಸುದ್ದಿಗಳಿವು

Exit mobile version