Site icon Vistara News

Narendra Modi Road Show: ರಾಜಧಾನಿಯಲ್ಲಿ ಟಾರ್ಗೆಟ್‌ 20 ತಲುಪಿಸಲಿದ್ದಾರಾ ಪ್ರಧಾನಿ?

Saffron flags with anjaneya will wave During Modi Roadshow In Bengaluru

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಮೆಗಾ ರೋಡ್ ಶೋ (Narendra Modi Road show) ನಡೆಯಲಿದೆ. ಸಾರ್ವಜನಿಕರಿಗೆ ಕಿರಿಕಿರಿ ಸೃಷ್ಟಿಯಾಗುತ್ತಿದೆ ಎಂಬ ಕಾಂಗ್ರೆಸ್‌ ಟೀಕೆಯ ನಡುವೆಯೇ ಈ ಸಲದ ಚುನಾವಣೆಯಲ್ಲಿ (Karnataka Election 2023) ಬೆಂಗಳೂರನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಮೋದಿಯವರ ಬೇಟೆ ಆರಂಭವಾಗಿದೆ.

26 ಕಿಲೋಮೀಟರ್ ಉದ್ದದ ಮೆಗಾ ರೋಡ್ ಶೋನಲ್ಲಿ 13 ವಿಧಾನಸಭೆ ಕ್ಷೇತ್ರಗಳನ್ನು ಮೋದಿ ಕವರ್‌ ಮಾಡಲಿದ್ದಾರೆ. ರಾಜ್ಯದಲ್ಲಿ ಮತದಾನಕ್ಕೆ ಇನ್ನೇನು ಒಂದೆರಡು ದಿನಗಳಿರುವಾಗ ಮೋದಿಯವರನ್ನು ಬಿಜೆಪಿ ನಾಯಕರು ಬೆಂಗಳೂರಿಗೆ ಕರೆಸುತ್ತಿದ್ದಾರೆ. ಬೆಂಗಳೂರು ನಗರದ 28 ಕ್ಷೇತ್ರಗಳ ಮೇಲೆ ಬಿಜೆಪಿ ರಾಷ್ಟ್ರೀಯ ನಾಯಕರ ಹದ್ದಿನ ಕಣ್ಣು ಇದ್ದು, ರೋಡ್ ಶೋ ಮೂಲಕ ಮತದಾರರ ಮನ ಗೆಲ್ಲಲು ಮೋದಿ ಕಸರತ್ತು ನಡೆಸಿದ್ದಾರೆ.

ಗುಜರಾತ್‌ ಚುನಾವಣೆಯಲ್ಲೂ ಕೊನೆಯ ಹಂತದಲ್ಲಿ ಹೀಗೇ ರೋಡ್ ಶೋ ನಡೆಸಿ ಮೋದಿ ಮತ್ತು ಶಾ ಜೋಡಿ ಯಶಸ್ಸು ಕಂಡಿತ್ತು. ಹಾಗೇ ಹಿರಿಯರನ್ನು ಮನೆಗೆ ಕಳಿಸಿ ಯುವಕರಿಗೆ ಟಿಕೆಟ್‌ ನೀಡಿತ್ತು. ಈ ಎರಡೂ ತಂತ್ರಗಳನ್ನು ಈ ಸಲ ಕರ್ನಾಟಕದಲ್ಲೂ ಅನುಸರಿಸುತ್ತಿದೆ.

ಬೆಂಗಳೂರು ನಗರ ವ್ಯಾಪ್ತಿಯ 28 ಕ್ಷೇತ್ರಗಳ ಬಿಜೆಪಿ ಕಣ್ಣಿಟ್ಟಿದೆ. ಇದರಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಹೀಗಾಗಿ ಒಂದೇ ಶೋದಲ್ಲಿ 13 ವಿಧಾನಸಭಾ ಕ್ಷೇತ್ರಗಳಲ್ಲಿ 26 ಕಿಲೋಮೀಟರ್ ಸಂಚರಿಸಲಿದ್ದಾರೆ ಮೋದಿ. ಮೊದಲು 9 ಗಂಟೆಗೆ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ರೋಡ್ ಶೋ ಶುರುವಾಗಲಿದೆ.

ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭ ನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜ ಪೇಟೆ, ಗಾಂಧಿನಗರ, ಮಹಾಲಕ್ಷ್ಮಿ ಲೇಔಟ್, ವಿಜಯ ನಗರ, ಗೋವಿಂದರಾಜ ನಗರ, ರಾಜಾಜಿ ನಗರ, ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರಗಳಲ್ಲಿ ಮೋದಿ ಸಂಚರಿಸಲಿದ್ದಾರೆ.

ಮೋದಿಯಿಂದ ಬಿಜೆಪಿಗೆ ಆಗಬಹುದಾದ ಲಾಭಗಳೇನು?

  1. ಮೋದಿ ಕಾರ್ಯಕ್ರಮಗಳು ನಡೆಯುವುದರಿಂದ ಪ್ರಮುಖವಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಲಿದೆ.
  2. ಬಿಜೆಪಿಯ ಅರ್ಬನ್ ಓಟ್ ಬ್ಯಾಂಕ್ ಮತ್ತಷ್ಟು ಗಟ್ಟಿಯಾಗಲಿದೆ, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಲೆ, ಮತಗಳಿಕೆ ಪ್ರಮಾಣ ಹೆಚ್ಚಾಗಲಿದೆ.
  3. ಬಿಜೆಪಿ ಹೊಸಬರಿಗೆ ಅವಕಾಶ ಕೊಟ್ಟಿರುವ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ನೆರವಾಗಲಿದೆ.
  4. ನಗರದ ಯುವ ಸಮೂಹವನ್ನು ಸೆಳೆಯುವಲ್ಲಿ ಮೋದಿ ಯಶಸ್ವಿಯಾಗುತ್ತಾರೆ.
  5. ನಗರದಲ್ಲಿರುವ ಗುಜರಾತ್, ಯುಪಿ ಸೇರಿದಂತೆ ಉತ್ತರ ಭಾರತ ಮೂಲದ ಮತದಾರರನ್ನು ಸೆಳೆಯಬಹುದು.
  6. ಮೋದಿ ಬರುವುದರಿಂದ ಎಲ್ಲಾ ನಾಯಕರು ಅಸಮಾಧಾನ ಮರೆತು ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡ್ತಾರೆ.

ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ, ಟ್ರಾಫಿಕ್ ಕಿರಿಕಿರಿಯಾಗದಂತೆ‌ ಶೋ ನಡೆಸಲು ಸಿದ್ಧತೆ ಮಾಡಲಾಗಿದೆ. ಆದರೆ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಾಜಧಾನಿಯ ಲಕ್ಷಾಂತರ ಮಂದಿ ಕೆಲವಷ್ಟು ಸಂಚಾರ ನಿರ್ಬಂಧ ಅನುಭವಿಸಲಿದ್ದಾರೆ.

ಇದನ್ನೂ ಓದಿ: Narendra Modi Road show: ಇಂದು ಬೆಂಗಳೂರಿನಲ್ಲಿ ಮೋದಿ ಭರ್ಜರಿ ರೋಡ್‌ ಶೋ, ಹತ್ತು ಲಕ್ಷ ಜನ ಸೇರುವ ನಿರೀಕ್ಷೆ, ಏನು ಮೋದಿ ಪ್ಲಾನ್‌?

Exit mobile version