Site icon Vistara News

Narendra Modi Road show: ಇಂದು ಬೆಂಗಳೂರಿನಲ್ಲಿ ಮೋದಿ ಭರ್ಜರಿ ರೋಡ್‌ ಶೋ, ಹತ್ತು ಲಕ್ಷ ಜನ ಸೇರುವ ನಿರೀಕ್ಷೆ, ಏನು ಮೋದಿ ಪ್ಲಾನ್‌?

Narendra Modi Road show

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ಪ್ರಚಾರಾರ್ಥ ಇಂದು ಬೆಂಗಳೂರಿನ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ರೋಡ್‌ ಶೋ (Narendra Modi Road show) ಸಾಗಲಿದ್ದು, ಸುಮಾರು ಹತ್ತು ಲಕ್ಷ ಸೇರಿ ಇದನ್ನು ವೀಕ್ಷಿಸುವ ಸಾಧ್ಯತೆ ಇದೆ.

ನರೇಂದ್ರ ಮೋದಿಯವರು 26 ಕಿ.ಮೀ ರೋಡ್ ಶೋ ಮಾಡಲಿದ್ದಾರೆ. ಹತ್ತು ಲಕ್ಷ ಜನ ಸೇರಿಸುವ ಟಾರ್ಗೆಟ್‌ ಬಿಜೆಪಿಗೆ ಇದೆ. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಬಸವನಗುಡಿ, ಬಿಟಿಎಂ ಲೇಔಟ್, ಪದ್ಮನಾಭನಗರ, ಚಿಕ್ಕಪೇಟೆ, ಗಾಂಧಿನಗರ, ವಿಜಯ ನಗರ, ಗೋವಿಂದರಾಜು ನಗರ, ರಾಜಾಜಿನಗರ, ಮಲ್ಲೇಶ್ವರಂನಲ್ಲಿ ಕ್ಷೇತ್ರ ವ್ಯಾಪ್ತಿಗಳಲ್ಲಿ ರೋಡ್ ಶೋ ನಡೆಯಲಿದೆ.

ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಒಂದು ಲಕ್ಷ ಜನ ಸೇರಿದರೂ ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಆ ಮುಖೇನ ಟಾರ್ಗೆಟ್ 20 ರೀಚ್ ಆಗುವ ಪ್ರಯತ್ನವಿದು. ರಾಜ್ಯ ಬಿಜೆಪಿಗೆ ಈಗ ಮೋದಿಯೇ ಬ್ರಹ್ಮಾಸ್ತ್ರವಾಗಿದ್ದಾರೆ. ಹೀಗಾಗಿ ಚುನಾವಣೆ ಘೋಷಣೆಯಾದಾಗಿನಿಂದ ನಗರದಲ್ಲಿ ಹೆಚ್ಚು ರೋಡ್ ಶೋ ಮಾಡಲು ಬಿಜೆಪಿ ನಾಯಕರು ಮನವಿ ಮಾಡಿದ್ದರು.

ಏನು ಮೋದಿ ಪ್ಲಾನ್‌?

ಗುಜರಾತ್ ಬಳಿಕ ಕರ್ನಾಟಕವೇ ಮೋದಿಯವರಿಗೆ ಟಾರ್ಗೆಟ್ ಎನ್ನಲಾಗಿದೆ. ಗುಜರಾತ್ ಚುನಾವಣೆಯಲ್ಲಿ ಯುವಕರಿಗೆ ಮಣೆ ಹಾಕಿ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ಕೊಟ್ಟಿದ್ದ ಮೋದಿ, ಅಮಿತ್ ಶಾ ಅವರು ಗುಜರಾತ್ ಚುನಾವಣೆಯಲ್ಲಿಯೂ ಭರ್ಜರಿ ರೋಡ್ ಶೋ ನಡೆಸಿದ್ದರು. ಗುಜರಾತ್‌ನಲ್ಲಿ ಕೊನೆಯ ಆರು ದಿನಗಳ ಪ್ರಚಾರದಿಂದ ಫಲಿತಾಂಶವೇ ಬದಲಾಗಿತ್ತು. ಯಾರೂ ಊಹೆ ಮಾಡದ ರೀತಿಯಲ್ಲಿ ಫಲಿತಾಂಶ ಬಂದಿತ್ತು,. ಕರ್ನಾಟಕದಲ್ಲೂ ಅದನ್ನ ವರ್ಕೌಟ್ ಮಾಡಲು ಮೋದಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲೂ 50ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಹಿರಿಯರಿಗೆ ಖೊಕ್ ಕೊಟ್ಟು ಯುವಕರಿಗೆ ಟಿಕೆಟ್‌ ನೀಡಲಾಗಿದೆ. ಗುಜರಾತ್‌ನಲ್ಲಿ ಈ ಯೋಜನೆ ಹಾಗೂ ರೋಡ್ ಶೋಗಳು ಭರ್ಜರಿ ಯಶಸ್ಸು ಕಂಡಿದ್ದವು. ಹೀಗಾಗಿ ರಾಜ್ಯದಲ್ಲೂ ಪ್ರಧಾನಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ.

ಬೆಳಗಾವಿ, ಹುಬ್ಬಳ್ಳಿ, ಕಲ್ಬುರ್ಗಿ, ಮೈಸೂರು ಸೇರಿದಂತೆ ಹಲವು ಕಡೆ ಈಗಾಗಲೇ ರೋಡ್ ಶೋ ನಡೆಸಿರುವ ಪಿಎಂ, ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಸದ್ಯ ಬೆಂಗಳೂರು ಟಾರ್ಗೆಟ್‌ ಮಾಡಿದ್ದಾರೆ.

ಜೈ ಬಜರಂಗಿ ಹಾಡು

ಪಿಎಂ ಮೋದಿ ರೋಡ್ ಶೋನಲ್ಲಿ ಜೈ ಭಜರಂಗಿ ಸಾಂಗ್ ಸದ್ದು ಮಾಡಲಿದೆ. ರೋಡ್ ಶೋ ಸಾಗುವ ಬ್ರಿಗೇಡ್ ಮಿಲೇನಿಯಮ್ ಮಾರ್ಗದಲ್ಲಿ ಭಜರಂಗಿ ಸಾಂಗ್ ಸದ್ದು ಮೊಳಗಿಸಲಿದೆ. ಇಲ್ಲಿ ಬೃಹತ್ ಗಾತ್ರದ ಸೌಂಡ್ ಸಿಸ್ಟಮ್ ಅಳವಡಿಸಲಾಗಿದೆ. ಆ ಮೂಲಕ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಬಿಜೆಪಿ ಪ್ಲಾನ್ ಮಾಡಿದೆ. ಬಜರಂಗ ದಳ ನಿಷೇಧದ ಬಗ್ಗೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿತ್ತು. ಇದನ್ನೇ ದೊಡ್ಡ ಅಸ್ತ್ರವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ.

ಇದನ್ನೂ ಓದಿ: Modi In Karnataka: ಮೋದಿ ರೋಡ್‌ ಶೋ ವೇಳೆ ರಾರಾಜಿಸಲಿವೆ ಆಂಜನೇಯನ ಭಾವಚಿತ್ರ ಇರುವ ಕೇಸರಿ ಬಾವುಟ

Exit mobile version