Site icon Vistara News

Modi In Karnataka: ಸಿಂಧನೂರು ಸಮಾವೇಶ; ಕೆಸರಲ್ಲಿ ಸಿಲುಕಿದ ಮೋದಿ ಹೆಲಿಕಾಪ್ಟರ್, ಲ್ಯಾಂಡಿಂಗ್‌ ವೇಳೆ ಅವಘಡ

Narendra Modi's Helicopter Stuck In Mud In Sindhanur

Narendra Modi's Helicopter Stuck In Mud In Sindhanur

ಸಿಂಧನೂರು (ರಾಯಚೂರು): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಂಚರಿಸುತ್ತಿದ್ದ ಹೆಲಿಕಾಪ್ಟರ್‌ಗೆ ರಣಹದ್ದು ಡಿಕ್ಕಿಯಾಗಿ, ಸ್ವಲ್ಪದರಲ್ಲಿಯೇ ಅನಾಹುತ ತಪ್ಪಿದ ಬೆನ್ನಲ್ಲೇ, ಸಿಂಧನೂರಿನಲ್ಲಿ (Modi In Karnataka) ಮೋದಿ ಅವರಿದ್ದ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ಅವಘಡ ಸಂಭವಿಸಿದೆ. ಸೇನಾ ಹೆಲಿಕಾಪ್ಟರ್‌ಅನ್ನು ಸಿಂಧನೂರಿನ ಹೊಸಹಳ್ಳಿ ಕ್ಯಾಂಪ್‌ನಲ್ಲಿ ಲ್ಯಾಂಡ್‌ ಮಾಡುವಾಗ ಅವಘಡ ಸಂಭವಿಸಿದ್ದು, ಹೆಲಿಕಾಪ್ಟರ್‌ ಕೆಸರಿನಲ್ಲಿ ಸಿಲುಕಿಕೊಂಡಿದೆ.

ನರೇಂದ್ರ ಮೋದಿ ಅವರು ಹೆಲಿಕಾಪ್ಟರ್‌ನಿಂದ ಇಳಿದು, ಚುನಾವಣೆ ಸಮಾವೇಶದಲ್ಲಿ ಪಾಲ್ಗೊಂಡರು. ಆದರೆ, ಕೆಸರಿನಲ್ಲಿ ಸಿಲುಕಿಕೊಂಡಿದ್ದ ಹೆಲಿಕಾಪ್ಟರ್‌ಅನ್ನು ತೆಗೆಯಲು ಪೊಲೀಸರು ಸೇರಿ ಹಲವು ಸಿಬ್ಬಂದಿ ಹರಸಾಹಸಪಟ್ಟರು. ಜೆಸಿಬಿಯ ಸಹಾಯದಿಂದ ಕೊನೆಗೂ ಹೆಲಿಕಾಪ್ಟರ್‌ಅನ್ನು ತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಸಮಾವೇಶ ಮುಗಿದ ಬಳಿಕ ಸೇನೆಯ ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಮೋದಿ ಅವರು ಸಿಂಧನೂರಿನಿಂದ ನಿರ್ಗಮಿಸಿದರು.

ಸಿಂಧನೂರಿನಾದ್ಯಂತ ಸೋಮವಾರ ಭಾರಿ ಮಳೆದ ಸುರಿದ ಕಾರಣ ಎಲ್ಲೆಡೆ ಕೆಸರುಮಯವಾಗಿತ್ತು. ಸಮಾವೇಶದ ಜಾಗದ ಸುತ್ತಲೂ ಕೂಡ ಕೆಸರು ಇತ್ತು. ಭಾಷಣದ ವೇಳೆ ಮೋದಿ ಅವರು ಇದನ್ನು ಕೂಡ ಪ್ರಸ್ತಾಪಿಸಿದರು. ಹವಾಮಾನ ವೈಪರೀತ್ಯದ ಮಧ್ಯೆಯೂ ಇಷ್ಟೊಂದು ಜನ ಸೇರಿದ್ದೀರಿ. ನಿಮಗೆ ಧನ್ಯವಾದ ಎಂದು ಮೋದಿ ಹೇಳಿದ್ದರು.

ಕಲ್ಯಾಣ ಕರ್ನಾಟಕ ಹೆಸರು ಪ್ರಸ್ತಾಪ

ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಲ್ಯಾಣ ಕರ್ನಾಟಕದ ಹೆಸರು ಪ್ರಸ್ತಾಪಿಸಿದರು. “ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ತುಷ್ಟೀಕರಣದ ರಾಜಕಾರಣದ ಎದುರು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಮತದಾರರು ನಾಯಕರಾಗಿ ನಿಂತಿದ್ದಾರೆ. ಸಹೋದರ, ಸಹೋದರಿಯರೇ, ಕಲ್ಯಾಣ ಕರ್ನಾಟಕದ ವಿಕಾಸದ ಮಾತು ಬಂದಾಗ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಹೆಸರು ನೆನಪು ಮಾಡಿಕೊಳ್ಳಿ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸರ್ಕಾರಗಳು ಕಲ್ಯಾಣ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದವು. ಅಭಿವೃದ್ಧಿಗೆ ಈ ಸರ್ಕಾರಗಳು ಪ್ರಯತ್ನಿಸಲಿಲ್ಲ. ಆದರೆ, ಬಿಜೆಪಿ ಸರ್ಕಾರವು, ಕಲ್ಯಾಣ ಕರ್ನಾಟಕಕ್ಕಾಗಿ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಿದೆ” ಎಂದು ತಿಳಿಸಿದರು.

“ರೈತರು ಇರಲಿ, ಗ್ರಾಮ ಇರಲಿ, ಗಲ್ಲಿ ಇರಲಿ, ಪಟ್ಟಣ ಇರಲಿ. ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ. ಇದೇ ಕಾರಣಕ್ಕಾಗಿ ನಾವು ಸಂಕಲ್ಪ ಪತ್ರ ಹೊರಡಿಸಿದ್ದೇವೆ. ಅನ್ನ, ಅಭಯ, ಅಭಿವೃದ್ಧಿ, ಆದಾಯ, ಅಕ್ಷರ ಹಾಗೂ ಆರೋಗ್ಯಕ್ಕೆ ಬಿಜೆಪಿ ಆದ್ಯತೆ ನೀಡಿದೆ. ಎಲ್ಲ ವಿಷಯಗಳ ಮೇಲೆ ಬಿಜೆಪಿ ಗಮನಹರಿಸಿದೆ. ಕರ್ನಾಟಕದ ಬಿಜೆಪಿಯು ಕರ್ನಾಟಕದ ಗೌರವಕ್ಕಾಗಿ ಬದ್ಧವಾಗಿದೆ. ಇದಕ್ಕೆ ನಾವು ಯಾವುದೇ ಧಕ್ಕೆ ತರಲು ನಾವು ಬಿಡುವುದಿಲ್ಲ” ಎಂದು ಹೇಳಿದರು. ‌

ಇದನ್ನೂ ಓದಿ: Modi In Karnataka: ಹಿರಿ ಖರ್ಗೆ, ಮರಿ ಖರ್ಗೆ ಅವರನ್ನು ‘ಲಾಯಕ್’‌ ಎನ್ನುತ್ತಲೇ ತಿರುಗೇಟು ಕೊಟ್ಟ ಮೋದಿ

Exit mobile version