Site icon Vistara News

Nationality issue : ಮಕ್ಕಳಿಗೆ ಭಾರತೀಯ ಪೌರತ್ವ ಕೊಡಿ ಎಂದು ಕೇಳುತ್ತಿರುವ ಬೆಂಗಳೂರಿನ ಮಹಿಳೆ; ಹೈಕೋರ್ಟ್‌ ಆಗದು ಎಂದಿದ್ದೇಕೆ?

high court gives bail to rape accused boy

ಬೆಂಗಳೂರು: ಆ ಮಹಿಳೆ ಬೆಂಗಳೂರಿನವರು. ಗಂಡ ಪಾಕಿಸ್ತಾನಿ. ಇಬ್ಬರು ಮಕ್ಕಳು ಹುಟ್ಟಿದ್ದು ದುಬೈನಲ್ಲಿ. ಈಗ ಈ ಮಹಿಳೆ ನನ್ನ ಮಕ್ಕಳಿಗೆ ಭಾರತೀಯ ಪೌರತ್ವ ಕೊಡಿಸಿ ಎಂದು ಹೈಕೋರ್ಟ್‌ನ ಮೊರೆ ಹೊಕ್ಕಿದ್ದಾರೆ. ನೀವು ಕೇಂದ್ರ ಸರಕಾರಕ್ಕೆ ನಿರ್ದೇಶನ ಕೊಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಹೈಕೋರ್ಟ್‌ ಈ ಮನವಿಯನ್ನು ತಿರಸ್ಕರಿಸಿದೆ.

ಬೆಂಗಳೂರಿನ ಅಮೀನಾ ರಹೀಲ್‌ ಮತ್ತು ಪಾಕಿಸ್ತಾನದ ಅಸ್ಸಾದ್‌ ಮಲಿಕ್‌ 2002ರ ಏಪ್ರಿಲ್‌ನಲ್ಲಿ ದುಬೈನಲ್ಲಿ ವಿವಾಹವಾಗಿದ್ದರು. ದಂಪತಿಗೆ 2004ರಲ್ಲಿ ಐಷಾ ಮಲಿಕ್‌ (17 ವರ್ಷ) ಮತ್ತು 2008ರಲ್ಲಿ ಅಹ್ಮದ್‌ ಮಲಿಕ್‌ (14 ವರ್ಷ) ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಹುಟ್ಟಿದ್ದು ದುಬೈನಲ್ಲಿ. 12 ವರ್ಷಗಳ ಆನಂತರ ಸಂಸಾರದಲ್ಲಿ ಬಿರುಕು ಉಂಟಾಗಿ 2014ರ ಸೆಪ್ಟೆಂಬರ್‌ನಲ್ಲಿ ಅಮೀನಾ ಮತ್ತು ಅಸ್ಸಾದ್‌ ಅವರು ದುಬೈನ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದಿದ್ದರು. ಮಕ್ಕಳನ್ನು ತಾಯಿಯ ವಶಕ್ಕೆ ನೀಡಲಾಗಿತ್ತು.

ಅಪ್ಪ ಪಾಕಿಸ್ತಾನಿಯಾಗಿದ್ದರಿಂದ ಅವರು ಪಾಕಿಸ್ತಾನದ ಪ್ರಜೆಗಳೆಂದು ಗುರುತಿಸಲ್ಪಟ್ಟಿದ್ದರು. ಈಗ ಅಮ್ಮನ ಜತೆಗಿರುವುದರಿಂದ ನಮಗೆ ಭಾರತೀಯ ಪೌರತ್ವ ಕೊಡಿಸಿ ಎಂದು ಈ ಮಕ್ಕಳು ಮತ್ತು ಅವರ ತಾಯಿ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದರು. ಈ ನಡುವೆ, ಪಾಕಿಸ್ತಾನ ಪ್ರಜೆಯ ಮಕ್ಕಳಾಗಿರುವುದರಿಂದ ಪಾಸ್‌ಪೋರ್ಟ್‌ ಅನ್ನು ತಮ್ಮ ವಶಕ್ಕೆ ನೀಡುವಂತೆ ಭಾರತೀಯ ರಾಯಭಾರ ಕಚೇರಿಯು ಮಕ್ಕಳಿಗೆ ಸೂಚಿಸಿತ್ತು. ಹೀಗಾಗಿ, ಅರ್ಜಿದಾರರು ತಮ್ಮ ಪಾಸ್‌ಪೋರ್ಟ್‌ಗಳನ್ನು ದುಬೈನಲ್ಲಿನ ಭಾರತೀಯ ರಾಯಭಾರ ಕಚೇರಿಯ ವಶಕ್ಕೆ ನೀಡಿದ್ದರು. ಇದಕ್ಕೆ ಪಾಕಿಸ್ತಾನ ರಾಯಭಾರ ಕಚೇರಿಯು ನಿರಾಪೇಕ್ಷಣ ಪತ್ರ ನೀಡಿತ್ತು.

ಆನಂತರ ಅರ್ಜಿದಾರರು ಭಾರತಕ್ಕೆ ಬರಲು ಭಾರತೀಯ ಪಾಸ್‌ಪೋರ್ಟ್‌ ಬೇಕಿತ್ತು. ಅರ್ಜಿದಾರರು ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅರ್ಜಿದಾರರ ಪೌರತ್ವವು ಗೃಹ ಸಚಿವಾಲಯದಲ್ಲಿ ಬಾಕಿ ಇದೆ ಎಂದು ಹೇಳಿ ಮಾನವೀಯತೆಯ ಆಧಾರದಲ್ಲಿ ಅವರಿಗೆ 2021ರ ಮೇನಲ್ಲಿ ತಾತ್ಕಾಲಿಕ ಭಾರತೀಯ ಪಾಸ್‌ಪೋರ್ಟ್‌ ನೀಡಲಾಗಿತ್ತು.

ಇದರ ಆಧಾರದಲ್ಲಿ ಭಾರತಕ್ಕೆ ಬಂದಿರುವ ಅರ್ಜಿದಾರರು ತಾಯಿಯ ಜೊತೆ ಇಲ್ಲೇ ನೆಲೆಸಿದ್ದಾರೆ. ಪಾಸ್‌ಪೋರ್ಟ್‌ ಅವಧಿ ಮುಗಿದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಮನವಿ ಸಲ್ಲಿಸುತ್ತಾ ಬರಲಾಗಿದ್ದು, ಸರ್ಕಾರವು ಅದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಈಗ ನ್ಯಾಯಾಲಯವು ಅವರ ಕೋರಿಕೆಯನ್ನು ತಿರಸ್ಕರಿಸಿದೆ. ತಮ್ಮ ಇಬ್ಬರು ಮಕ್ಕಳಿಗೆ ಭಾರತೀಯ ಪೌರತ್ವ ಮತ್ತು ಪಾಸ್‌ಪೋರ್ಟ್‌ ನೀಡಲು ಕೋರಿ 2022ರ ಮೇ 5ರಂದು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿದ್ದ ಮನವಿ ಪರಿಗಣಿಸಲು ನಿರ್ದೇಶಿಸುವಂತೆ ಕೋರಿ ಅರ್ಜಿದಾರ ಮಕ್ಕಳ ತಾಯಿ ಅಮೀನಾ ರಹೀಲ್‌ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಲು ನಿರಾಕರಿಸಿದೆ.

ಹೈಕೋರ್ಟ್‌ ಹೇಳುವುದೇನು?

ಇದನ್ನೂ ಓದಿ High court order : ಶಾಸಕ ನೆಹರು ಓಲೆಕಾರ್‌ ವಿರುದ್ಧದ 2 ವರ್ಷಗಳ ಶಿಕ್ಷೆಗೆ ತಡೆಯಾಜ್ಞೆ; ಅನರ್ಹತೆ ಭೀತಿಯಿಂದಲೂ ಪಾರು

Exit mobile version