Site icon Vistara News

ಕೆಲಸ ಕಾಯಂಗೆ ಆಗ್ರಹಿಸಿ ಬೀದಿಗಿಳಿದ ಪೌರಕಾರ್ಮಿಕರು: CM ಬಸವರಾಜ ಬೊಮ್ಮಾಯಿ ಸಭೆ ಸಂಜೆ

BBMP workers stage a protest against the Government

ಬೆಂಗಳೂರು: ರಾಜ್ಯಾದ್ಯಂತ ಪೌರಕಾರ್ಮಿಕರು ತಮ್ಮ ಕೆಲಸದ ಕಾಯಮಾತಿಗಾಗಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ನಗರ ಪಾಲಿಕೆ, ಪುರಸಭೆ, ನಗರಸಭೆ, ಪೌರಕಾರ್ಮಿಕರ ಮಹಾಸಂಘ ಹಾಗೂ ಬಿಬಿಎಂಪಿ ಪೌರಕಾರ್ಮಿಕರ ಸಂಘ ಜಂಟಿಯಾಗಿ ಪ್ರತಿಭಟನೆ ನಡೆಸುತ್ತಿವೆ. ಹಾಸನ, ಬೆಳಗಾವಿ ಸೇರಿ ವಿವಿಧೆಡೆಯೂ ಪ್ರತಿಭಟನೆಗಳು ನಡೆಯುತ್ತಿವೆ.

ಇದನ್ನೂ ಓದಿ | ಜ್ವರ ಬಂದರೆ ಸಾಫ್ಟ್‌ವೇರ್‌ ಇಂಜಿನಿಯರ್‌ ಬಳಿ ಹೋಗುವ BBMP: ಕಸದ ಲಾರಿ ಕುರಿತ ತಪಾಸಣೆ ನಾಟಕ

ಪ್ರಮುಖವಾಗಿ ಸುರಕ್ಷತಾ ಕವಚಗಳು, ನಿವೃತ್ತಿ ಸೇವಾ ಸೌಲಭ್ಯಗಳು, ಕೆಲಸದ ಕಾಯಮಾತಿ ಮತ್ತು ಇತರೆ ಕಲ್ಯಾಣ ಸೌಲಭ್ಯತೆ, ಘನತೆಯುಕ್ತ ಕೆಲಸದ ವಾತಾವರಣಕ್ಕಾಗಿ ಪೌರಕಾರ್ಮಿಕರು ಸತತವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದರು. ಆದರೂ ರಾಜ್ಯ ಸರ್ಕಾರವು ನಮ್ಮನ್ನು ನಿರ್ಲಕ್ಷಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಆನೇಕಲ್‌ ಪುರಸಭೆ ಮುಂಭಾಗ

ಆನೇಕಲ್ ಪುರಸಭೆ ಕಚೇರಿ ಮುಂಭಾಗವೂ ನೂರಾರು ಸಂಖ್ಯೆಯ ಪೌರಕಾರ್ಮಿಕರು, ವಾಟರ್‌ಮನ್‌, ಡೇಟಾ ಆಪರೇಟರ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಹಲವು ವರ್ಷಗಳಿಂದ ಸೇವೆ ಸಲ್ಲಿಸಲಾಗುತ್ತಿದ್ದು, ನೇರ ನೇಮಕಾತಿ ಜತೆಗೆ ಕಾಯಂಗೊಳಿಸುವಂತೆ ಒತ್ತಾಯಿಸಿದರು.

ಹಾಸನದಲ್ಲಿ ಪ್ರತಿಭಟನೆ

ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಹಾಗೂ ಪುನೀತ್ ರಾಜ್‌ಕುಮಾರ್ ಪೋಟೋ ಹಿಡಿದು ಪ್ರತಿಭಟನೆಗೆ ನಡೆಸಲಾಗುತ್ತಿದೆ. ನಗರಸಭೆ, ಪುರಸಭೆ, ಪಟ್ಟಣಪಂಚಾಯತ್‌ ಪೌರಕಾರ್ಮಿಕರು, ಡೇಟಾ ಆಪರೇಟರ್, ಕಸ ನಿರ್ವಹಣೆ ಸಹಾಯಕರು ಸೇರಿ ಹಲವರನ್ನು ಕಾಯಂ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ ಎಂದಿದ್ದಾರೆ. ಹೋರಾಟಕ್ಕೆ ಆಮ್‌ ಆದ್ಮಿ ಪಕ್ಷ, ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ.

ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿ ೆದುರು ಪ್ರತಿಭಟನೆ ನಡೆಸಲಾಗುತ್ತಿದೆ. ಜಿಟಿಜಿಟಿ ಮಳೆ ನಡುವೆಯೇ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನ್ನವರ ಮನವಿ ಸ್ವೀಕರಿಸಿದರು.

ಪೌರ ಕಾರ್ಮಿಕರ ಜತೆ ಸಿಎಂ ಸಭೆ

ಹಲವು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಪ್ರತಿಭಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಪೌರ ಕಾರ್ಮಿಕ ಸಂಘಟನೆಗಳ ಮುಖಂಡರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಕರೆದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಸಂಜೆ 6.30ಕ್ಕೆ ಸಭೆ ನಡೆಯಲಿದೆ.

Exit mobile version