ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (ನೀಟ್) ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ರೈಲು ಸಂಖ್ಯೆ 17303 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಕಾರಟಗಿ ಡೈಲಿ ಎಕ್ಸ್‌ಪ್ರೆಸ್ ರೈಲು ಜುಲೈ 17 ರಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 5.20ರ (ನಿಗದಿತ ನಿರ್ಗಮನ ಸಮಯ) ಬದಲಾಗಿ ಸಂಜೆ 6 ಗಂಟೆಗೆ ಹೊರಡಲಿದೆ.
ಹಾಗೇ ವಿಜಯಪುರ – ಮಂಗಳೂರು ನಡುವೆ ನಿತ್ಯ ಸಂಚರಿಸುವ ರೈಲುಗಳ ಸೇವೆಯ ಅವಧಿಯು ವಿಸ್ತರಣೆ ಮಾಡಲಾಗಿದೆ. ರೈಲುಗಳ ಸೇವೆಯ ಅವಧಿಯನ್ನು ವಿಸ್ತರಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ರೈಲು ಸಂಖ್ಯೆ 07377 ವಿಜಯಪುರ – ಮಂಗಳೂರು ಜಂಕ್ಷನ್ ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲಿನ ಸೇವೆಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ .
ಈ ಮೊದಲು ಜುಲೈ 31ರವರೆಗೆ ಸಂಚರಿಸಲು ಸೂಚಿಸಲಾಗಿತ್ತು.ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್ – ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲಿನ ಸೇವೆಯನ್ನು ಅಕ್ಟೋಬರ್ 1 ರವರೆಗೆ ವಿಸ್ತರಿಸಲಾಗಿದೆ. ಈ ಮೇಲಿನ ರೈಲುಗಳ ಸಮಯದಲ್ಲಿ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ಸೇವೆಯ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲವೆಂದು ಇಲಾಖೆ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ | ನೀಟ್ ಪರೀಕ್ಷೆ ಮಂದೂಡಲು ಆಗ್ರಹಿಸಿ ಪ್ರತಿಭಟನೆ ತೀವ್ರ; ಟ್ರೆಂಡ್ ಆಗ್ತಿದೆ ಚಲೋ ಮೋದಿ ಆವಾಸ್